ಸಾಮಾಜಿಕ ಜಾಲತಾಣದಲ್ಲಿ ಹಲವು ವಿಡಿಯೋಗಳು ಅತ್ಯಂತ ಬೇಗ ವೈರಲ್ ಆಗಿ ಬಿಡುತ್ತವೆ. ದೃಶ್ಯ ನೋಡಿದಾಕ್ಷಣ ಹೆಚ್ಚು ಆಶ್ಚರ್ಯವನ್ನುಂಟು ಮಾಡುವುದರ ಜತೆಗೆ ಕೆಲವು ವಿಡಿಯೋಗಳು ಭಯಾನಕವಾಗಿರುತ್ತವೆ. ಹಾವುಗಳ ಹೆಸರು ಕೇಳಿದಾಕ್ಷಣವೇ ಭಯವಾಗುವುದು ಸಹಜ. ಅಂಥಹುದರಲ್ಲಿ ಇಲ್ಲೋರ್ವ ದೈತ್ಯ ನಾಗರಹಾವನ್ನು ಕುತ್ತಿಗೆಗೆ ಸುತ್ತಿಕೊಂಡು ಆಟವಾಡುತ್ತಿದ್ದಾನೆ. ಈ ವಿಡಿಯೋ ನೋಡಿದ ಕೆಲವರು ಆಶ್ಚರ್ಯಚಕಿತರಾಗಿದ್ದಾರೆ. ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್ನಲ್ಲಿ ಗಮನಿಸುವಂತೆ, ವ್ಯಕ್ತಿ ತನ್ನ ಕುತ್ತಿಗೆಗೆ ದೈತ್ಯ ನಾಗರಹಾವನ್ನು ಸುತ್ತಿಕೊಂಡಿರುವುದನ್ನು ನೋಡಬಹುದು. ಈ ವ್ಯಕ್ತಿ ಹಾವಿನೊಂದಿಗೆ ಆರಾಮವಾಗಿ ಕುಳಿತು ಆಟವಾಡುತ್ತಿದ್ದಾನೆ. ಹಾವನ್ನು ಪ್ರೀತಿಯಿಂದ ಮುದ್ದಾಡುತ್ತಾ ಇರುವುದನ್ನು ದೃಶ್ಯದಲ್ಲಿ ಗಮನಿಸಬಹುದು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದೆ. ಕೆಲವರು ವಿಡಿಯೋವನ್ನು ತುಂಬಾ ಇಷ್ಟಪಟ್ಟಿದ್ದಾರೆ. ತಮ್ಮ ಪ್ರತಿಕ್ರಿಯೆಗಳನ್ನು ಕಾಮೆಂಟ್ ವಿಭಾಗದಲ್ಲಿ ತಿಳಿಸಿದ್ದಾರೆ. ಕೆಲವರು ವಿಡಿಯೋ ನೋಡಿ ಆಶ್ಚರ್ಯಚಕಿರತಾಗಿದ್ದು, ಇದು ನಿಜವಾಗಿಯೂ ಹಾವು ಹೌದಾ? ಎಂದು ಪ್ರಶ್ನಿಸಿದ್ದಾರೆ. ಸಹೋದರ ಏಕೆ ಹೀಗೆ ಮಾಡುತ್ತಿದ್ದಿರಿ? ಅಪಾಯವನ್ನೇ ಮೇನೇಲೆಳೆದುಕೊಂಡಿದ್ದೀರಿ ನೀವು ಎಂದು ಮತ್ತೋರ್ವರು ಹೇಳಿದ್ದಾರೆ. ಇದನ್ನು ನಂಬಲಸಾಧ್ಯ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.
ಇದನ್ನೂ ಓದಿ:
Shocking Video: ಇಡೀ ಜಿಂಕೆಯನ್ನು ನುಂಗುತ್ತಿದೆ ದೈತ್ಯ ಹೆಬ್ಬಾವು! ಭಯಾನಕ ವಿಡಿಯೋ ನೋಡಿ ಕಂಗಾಲಾಗ್ಬೇಡಿ