Viral Video: ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದ ಮಾಲೀಕ: ವಿಡಿಯೋ ವೈರಲ್​

ಅರಿಝೋನಾದಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್​ 28ರಂದು  ವಿಡಿಯೋ ಹಂಚಿಕೊಳ್ಳಲಾಗಿದೆ. 41 ಲಕ್ಷಕ್ಕೂ  ಹೆಚ್ಚು ವೀಕ್ಷಣೆ ಪಡೆದ ವೀಡಿಯೊ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದಿದೆ.

Viral Video: ಮುಳುಗುತ್ತಿದ್ದ ನಾಯಿಯನ್ನು ರಕ್ಷಿಸಿದ ಮಾಲೀಕ: ವಿಡಿಯೋ ವೈರಲ್​
ವಿಡಿಯೋದಿಂದ ಸೆರೆಹಿಡಿದ ಚಿತ್ರ
Edited By:

Updated on: Jan 07, 2022 | 4:27 PM

ಮನೆಯಲ್ಲಿ  ಸಾಕಿದ ನಾಯಿಗಳೊಂದಿಗೆ ಆಟವಾಡುವುದು ಒಂದು ಖುಷಿಯ ಸಂಗತಿ. ತಮ್ಮದೇ ರೀತಿಯಲ್ಲಿ ಒಡೆಯನ ಮೇಲೆ ಪ್ರೀತಿ ತೋರಿಸುವ ನಾಯಿಗಳ ತುಂಟಾಟ, ಹುಡುಗಾಟ ಅನುಭವಿಸಿದವರಿಗೇ ಗೊತ್ತು. ನಾಯಿಗಳು ಹೇಗೆ ಮಾಲೀಕನಿಗೆ ಕಷ್ಟವಾದರೆ ಸಂಕಟಪಡುತ್ತವೆಯೋ ಅದೇ ರೀತಿ ಮಾಲೀಕ ಕೂಡ ತಾನು ಸಾಕಿದ ನಾಯಿಗಳಿಗೆ ನೋವಾದರೆ ಸಹಿಸುವುದಿಲ್ಲ. ಇಲ್ಲೊಂದು ಹೃದಯಸ್ಪರ್ಶಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ನಾಯಿಯೊಂದು ನೀರಿನಲ್ಲಿ ಮುಳುಗುತ್ತಿರುವ ವೇಳೆ ಒಡೆಯ ತಕ್ಷಣ ತೆರಳಿ ನಾಯಿಯನ್ನು ನೀರಿನಿಂದ ಎತ್ತಿಕೊಂಡು ಬಂದು ರಕ್ಷಿಸಿದ ವೀಡಿಯೋ ವೈರಲ್​ ಆಗಿದೆ.


ವಿಡಿಯೋದ ಆರಂಭದಲ್ಲಿ ಮೂರ್ನಾಲ್ಕು ನಾಯಿಗಳು  ಒಡೆಯನ ಜತೆಗೆ ನೀರಿನ ಬಳಿ ಆಟವಾಡುತ್ತಿರುತ್ತವೆ. ಒಡೆಯ ಎಸೆದ ಬಾಲ್​ಅನ್ನು ತಂದುಕೊಡುವ ಮೂಲಕ ತಮ್ಮದೇ ಪ್ರಪಂಚದಲ್ಲಿ ಮುಳುಗಿರುತ್ತವೆ. ಆದರೆ ಒಂದು ಬಾರಿ ಎಸೆದ ಬಾಲ್​ ಅನ್ನು ಹಿಡಿಯಲು ಹೋದ ನಾಯಿಯೊಂದು ಮರಳಿ ದಡಕ್ಕೆ ಬಾರದೆ ನೀರಿನ ಮಧ್ಯದಲ್ಲಿ ಸಿಲುಕಿ ಒದ್ದಾಡುತ್ತಿರುವುದು ಕಾಣಿಸುತ್ತದೆ. ಇದನ್ನು ಕಂಡು ದಡದಲ್ಲಿದ್ದ ಮಾಲೀಕ ತಕ್ಷಣ ನೀರಿಗಿಳಿದು ಮುಳುಗುತ್ತಿದ್ದ ನಾಯಿಯನ್ನು ಮೇಲೆತ್ತಿಕೊಂಡು ಬರುತ್ತಾನೆ. ಇದರ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್​ ಆಗಿದೆ. ಯುಟ್ಯೂಬ್​ನಲ್ಲಿ ಹಂಚಿಕೊಂಡಿರುವ ವಿಡಿಯೋ ನೆಟ್ಟಿಗರನ್ನು ಸೆಳೆದಿದೆ. ಸಾಕು ನಾಯಿಯ ಮೇಲಿನ ಪ್ರೀತಿ ಕಂಡು ನೆಟ್ಟಿಗರು ಶ್ಲಾಘಿಸಿದ್ದಾರೆ. ಅರಿಝೋನಾದಲ್ಲಿ ಈ ಘಟನೆ ನಡೆದಿದ್ದು, ಡಿಸೆಂಬರ್​ 28ರಂದು  ವಿಡಿಯೋ ಹಂಚಿಕೊಳ್ಳಲಾಗಿದೆ. 41 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದ ವಿಡಿಯೋ ಒಂದು ಲಕ್ಷಕ್ಕೂ ಅಧಿಕ ಲೈಕ್ಸ್​ ಪಡೆದಿದೆ.

ಇದನ್ನೂ ಓದಿ:

Viral Video: ಬೀದಿ ಪಾಲಾಗಿ ಫುಟ್​ಪಾತ್​ನಲ್ಲಿ ಕುಳಿತಿದ್ದ ವ್ಯಕ್ತಿಯನ್ನು ತಬ್ಬಿಕೊಂಡ ನಾಯಿ; ವಿಡಿಯೋ ವೈರಲ್