Viral Video: 180 ಡಿಗ್ರಿಯಲ್ಲಿ ಕುತ್ತಿಗೆ ತಿರುಗಿಸುತ್ತಾನೆ ಈತ! ಇದು ಹೇಗೆ ಸಾಧ್ಯ?

| Updated By: shruti hegde

Updated on: Jun 08, 2021 | 5:04 PM

ವಿಚಿತ್ರವಾದರೂ ಇದು ಸತ್ಯ ಎಂಬ ಮಾತು ಆಗಾಗ ನೆನಪಾಗುವಂತಹ ವಿಡಿಯೋಗಳು ಬಾರೀ ಸದ್ದು ಮಾಡುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Viral Video: 180 ಡಿಗ್ರಿಯಲ್ಲಿ ಕುತ್ತಿಗೆ ತಿರುಗಿಸುತ್ತಾನೆ ಈತ! ಇದು ಹೇಗೆ ಸಾಧ್ಯ?
80 ಡಿಗ್ರಿಯಲ್ಲಿ ಕುತ್ತಿಗೆ ತಿರುಗಿಸುತ್ತಾನೆ ಈತ!
Follow us on

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ಅದೆಷ್ಟೋ ನಂಬಲಾಗದ ಸಂಗತಿಗಳು ಜನರನ್ನು ನಂಬಿಸುವಂತೆ ಮಾಡುತ್ತದೆ. ವಿಚಿತ್ರವಾದರೂ ಇದು ಸತ್ಯ ಎಂಬ ಮಾತು ಆಗಾಗ ನೆನಪಾಗುವಂತಹ ವಿಡಿಯೋಗಳು ಬಾರೀ ಸದ್ದು ಮಾಡುತ್ತವೆ. ಅಂಥಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇಲ್ಲೋರ್ವ ಪ್ರತಿಭಾವಂತ ತನ್ನ ತಲೆಯನ್ನು 180 ಡಿಗ್ರಿಯಲ್ಲಿ ತಿರುಗಿಸುತ್ತಾನೆ. ಕುತ್ತಿಗೆ ಸಂಪೂರ್ಣವಾಗಿ ಹಿಂದಕ್ಕೆ ತಿರುಗುತ್ತದೆ ಮತ್ತು ಆತ ತಿರುಗಿ ನೇರವಾಗಿ ಹಿಂದಕ್ಕೆ ನೋಡುತ್ತಾನೆ. ನೋಡಿದಾಕ್ಷಣ ಒಮ್ಮೆಲೆ ಮೈ ಜುಂ.. ಅನ್ನುವುದಂತೂ ವಿಡಿಯೋವಿದು. ವಿಚಿತ್ರವೆನಿಸಿದರೂ ಕೂಡಾ ನಂಬಲೇ ಬೇಕಾದ ಸತ್ಯ.

ವಿಡಿಯೋದಲ್ಲಿ ಗಮನಿಸುವಂತೆ ಆತ ತನ್ನ ಕೈಗಳಿಂದ ಗಲ್ಲವನ್ನು ಹಿಡಿದುಕೊಳ್ಳುತ್ತಾನೆ. ನಿಧಾನವಾಗಿ ಗಲ್ಲವನ್ನು ಹಿಂದಕ್ಕೆ ತಿರುಗಿಸುತ್ತಾನೆ. ಸಂಪೂರ್ಣವಾಗಿ 180 ಡಿಗ್ರಿಯಲ್ಲಿ ತನ್ನ ತಲೆಯನ್ನು ಆತ ತಿರುಗಿಸಿದ್ದಾನೆ. ನಂತರ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರುತ್ತಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ 3 ಮಿಲಿಯನ್​ಗಿಂತಲೂ ಹೆಚ್ಚಿನ ವೀಕ್ಷಣೆಗಳನ್ನು ಪಡೆದುಕೊಂಡಿದೆ. ಓರ್ವರು, ಈ ರೀತಿ ಕುತ್ತಿಗೆ ತಿರುಗಿಸಬಲ್ಲರು ಎಂಬುದನ್ನು ಅವರು ಹೇಗೆ ತಿಳಿದುಕೊಂಡರು? ಎಂಬುದಾಗಿ ಪ್ರಶ್ನಿಸಿದ್ದಾರೆ. ಇನ್ನು ಕೆಲವರು, ಇವರ ಪ್ರತಿಭೆ ನೋಡಿ ನನಗೆ ನಿಜವಾಗಿಯೂ ಆಶ್ಚರ್ಯವಾಗುತ್ತಿದೆ ಎಂದು ಹೇಳಿದ್ದಾರೆ.

‘ವಿಡಿಯೋ ನೋಡಿದ ವೈದ್ಯರೊಬ್ಬರು ಪ್ರತಿಕ್ರಿಯೆ ನೀಡಿದ್ದು, ಕೀಲುಗಳು ಮತ್ತು ಸಂಯೋಜನ ಅಂಗಾಶಗಳ ಅಸ್ವಸ್ಥತೆ ಹೊಂದಿದ್ದವರು ಸಾಮಾನ್ಯವಾಗಿ ಈ ರೀತಿ ಕುತ್ತಿಗೆ ತಿರುಗಿಸಬಹುದು. ಆದರೆ, ವಿಡಿಯೋ ನೋಡಿ ಯಾವುದೇ ಕಾರಣಕ್ಕೂ ಈ ರೀತಿ ಪ್ರಯತ್ನಿಸಬೇಡಿ!’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಾಮಾನ್ಯವಾಗಿ ಪ್ರತಿಭಾವಂತರ ವಿಡಿಯೋಗಳು ಹರಿದಾಡುತ್ತವೆ. ಚಿಕ್ಕವರಿಂದ ಹಿಡಿದು ವಯಸ್ಕರವರೆಗೆ ಸ್ಟಂಟ್​ಗಳ ವಿಡಿಯೋಗಳೂ ಕೂಡಾ ಹರಿದಾಡುತ್ತವೆ. ಕೆಲವು ಬಾರಿ ವಿಚಿತ್ರವಾದ ಇಂತಹ ಸಂಗತಿಗಳು ಆಶ್ಚರ್ಯವನ್ನುಂಟು ಮಾಡುತ್ತವೆ. ಆದರೆ, ಯಾವುದೇ ಕಾರಣಕ್ಕೂ ಇಂತಹ ದೃಶ್ಯವನ್ನು ನೋಡಿ ಮನೆಯಲ್ಲಿ ಪ್ರಯತ್ನಿಸಬೇಡಿ! ನಿಮ್ಮ ಜೀವಕ್ಕೇ ಅಪಾಯ ತಂದೊಡ್ಡಬಹುದು ಎನ್ನುವುದೇ ಎಚ್ಚರಿಕೆಯ ಮಾತು.

ಇದನ್ನೂ ಓದಿ:

ಭೂಮಿಗೆ ತಾಗುವಷ್ಟು ಹತ್ತಿರಕ್ಕೆ ಬಂದ ದೈತ್ಯಾಕಾರದ ಚಂದ್ರ, ಗ್ರಹಣದ ದಿನ ಹೀಗೆಲ್ಲಾ ಆಗುತ್ತಾ? ಇಲ್ಲಿದೆ ವೈರಲ್​ ವಿಡಿಯೋ ಹಿಂದಿನ ಅಸಲಿಯತ್ತು

ಹೋಮ್​​ವರ್ಕ್ ಕಡಿಮೆ ಮಾಡಿ, ವೈರಲ್ ವಿಡಿಯೋ…!