Loading video

Video: ಕೋತಿಗೆ ಹೃದಯಾಘಾತ; ಸಿಪಿಆರ್ ಮೂಲಕ ಜೀವ ಉಳಿಸಿದ ವ್ಯಕ್ತಿ

|

Updated on: Nov 21, 2024 | 1:00 PM

ತೆಲಂಗಾಣದಲ್ಲಿ ವಿದ್ಯುತ್ ಆಘಾತಕ್ಕೀಡಾದ ಮಂಗವನ್ನು ಸ್ಥಳೀಯರು ಸತ್ತಿದೆ ಭಾವಿಸಿದ್ದರು. ಆದರೆ, ನಾಗರಾಜು ಎಂಬ ವ್ಯಕ್ತಿ ಸಿಪಿಆರ್ ನೀಡಿ ಮಂಗದ ಜೀವ ಉಳಿಸಿದರು. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವಿದ್ಯುತ್ ಸ್ಪರ್ಶಿಸಿ ಕೆಳಗೆ ಬಿದ್ದಿದ್ದ ಕೋತಿ ಸತ್ತು ಹೋಗಿದೆ ಎಂದು ಸ್ಥಳೀಯರು ಭಾವಿಸಿದ್ದರು. ಆದರೆ ಅಲ್ಲೇ ಇದ್ದ ವ್ಯಕ್ತಿಯೊಬ್ಬರು ಕೋತಿಗೆ ಸಿಪಿಆರ್​ ಮಾಡಿ ಅದರ ಜೀವ ಉಳಿಸಿದ್ದಾರೆ. ತೆಲಂಗಾಣ ಮಹಬೂಬಾಬಾದ್ ಜಿಲ್ಲೆಯ ಸಿರೋಲು ಮಂಡಲ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಭಾರೀ ವೈರಲ್​ ಆಗುತ್ತಿದೆ. ಮಂಗ ಸತ್ತಿದೆ ಎಂದು ಭಾವಿಸಿ ಎಲ್ಲರು ಅದನ್ನು ಬಿಟ್ಟು ಹೋಗಿದ್ದರು. ಆದರೆ ನಾಗರಾಜು ಎಂಬ ವ್ಯಕ್ತಿ ವಿದ್ಯುತ್ ಸ್ಪರ್ಶದಿಂದ ಬಿದ್ದಿದ್ದ ಕೋತಿಯನ್ನು ಗಮನಿಸಿ ಅದಕ್ಕೆ ಸಿಪಿಆರ್ ಮಾಡಿದ್ದಾರೆ. ಸಕಾಲದಲ್ಲಿ ಸ್ಪಂದಿಸಿ ಜಾಣ್ಮೆಯಿಂದ ಸಿಪಿಆರ್ ಮಾಡಿ ಮಂಗನ ಪ್ರಾಣ ಉಳಿಸಿದ ನಾಗರಾಜು ಅವರಿಗೆ ಸ್ಥಳೀಯರು ಹಾಗೂ ನೆಟ್ಟಿಗರಿಂದ ಭಾರೀ ಶ್ಲಾಘನೆ ವ್ಯಕ್ತವಾಗಿದೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ