ವಧು ವರರನ್ನು ಹುಡುಕಬೇಕು ಅಂದಾಕ್ಷಣ ಮೊದಲು ನೆನಪಾಗುವುದೇ ಮೆಟ್ರಿಮೋನಿಯಲ್. ಮೆಟ್ರೊಮೋನಿಯಲ್ ಮೂಲಕ ಜನರು ತಮ್ಮಗೆ ಇಷ್ಟವಾಗುವ ವಧು, ವರರನ್ನು ಹುಡುಕಿಕೊಂಡಿದ್ದಾರೆ. ತಮಗೆ ಇಷ್ಟದ ಹುಡುಗಿ ಅಥವಾ ಇಷ್ಟಪಡುವ ಗುಣ, ವಯಸ್ಸು, ಎತ್ತರ ಹೀಗೆ ತಮಗೆ ಬೇಕಿರುವ ಬೇಡಿಕೆಗಳನ್ನು ಇಡುವುದರ ಮೂಲಕ ಸರಿ ಹೊಂದುವ ವಧು, ವರರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಇದೀಗ ಈ ಹುಡುಗನ ಬೇಡಿಕೆ ಕೇಳಿದ್ರೆ ನೀವು ಏನಂತೀರೋ ಏನೋ?. ವಧು ಬೇಕಾಗಿರುವ ಹುಡುಗನಿಗೆ, ಹುಡುಗಿಯ ಎತ್ತರ, ಬ್ರಾ ಸೈಜ್ ಸೇರಿದಂತೆ ಸೊಂಟದ ಅಳತೆ ಇಷ್ಟೇ ಇರಬೇಕಂತೆ! ಈ ಮೆಟ್ರೊಮೋನಿಯಲ್ ಜಾಹಿರಾತು ಇದೀಗ ಫುಲ್ ವೈರಲ್ ಆಗಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಹುಡುಗನು ತನಗೆ ಇಷ್ಟವಾಗುವ ಹುಡುಗಿಯಲ್ಲಿರಬೇಕಾದ ಕೆಲವು ಬೇಡಿಕೆಗಳನ್ನು ಹೇಳಿದ್ದಾನೆ. ಹುಡುಗಿ ತೆಳ್ಳಗೆ, ಬೆಳ್ಳಗೆ ಸುಂದರವಾಗಿರಬೇಕು ಎಂಬ ಆಸೆ ಇರುವುದು ತಪ್ಪೇನಲ್ಲ, ಆದರೆ ಈತನ ಬೇಡಿಕೆಯಲ್ಲಿ ಹುಡುಗಿಯ ಸೊಂಟದ ಅಳತೆ, ಬ್ರಾ ಸೈಜ್, ವಯಸ್ಸು, ಎತ್ತರ, ಪಾದದ ಅಳತೆ, ಎತ್ತರ, ವಯಸ್ಸು ಎಲ್ಲವೂ ಆತ ಹೇಳಿದಷ್ಟೇ ಇರಬೇಕಂತೆ! ಈತನ ಬೇಡಿಕೆಗಳನ್ನು ಕೇಳಿದ ನೆಟ್ಟಿಗರು ಈತ ಬಟ್ಟೆ ಹೊಲಿಯುವ ಟೈಲರ್ ಏನು? ಎಂದು ಪ್ರತಿಕ್ರಿಯಿಸಿದ್ದಾರೆ. ಕೆಲವರು ಆಕ್ರೋಶ ಹೊರಹಾಕಿದ್ದಾರೆ.
ನಾನು ಮದುವೆ ಆಗಲು ವಧುವನ್ನು ಹುಡುಕುತ್ತಿದ್ದೇನೆ. ಹುಡುಗಿಯ ಎತ್ತರ 5.2 ರಿಂದ 5.6 ಇರಬೇಕು. ಬ್ರಾ ಸೈಜ್ 32ಬಿ ಯಿಂದ 32 ಸಿ ಒಳಗಿರಬೇಕು, ಸೊಂಟದ ಅಳತೆ 12 ರಿಂದ 16 ರೊಳಗಿರಬೇಕು, ಹುಡುಗಿ 18 ರಿಂದ 26ರ ವಯಸ್ಸಿನೊಳಗಿನವಳಾಗಿರಬೇಕು ಎಂದು ಹುಡುಗ ಬರೆದುಕೊಂಡಿದ್ದಾನೆ. ಇಷ್ಟೇ ಅಲ್ಲದೇ, ಹುಡುಗಿ ರೂಢಳಾಗಿರಬಾರದು, ಪಾದಗಳು ಬೆಳ್ಳಗಿರಬೇಕು, ಕ್ಯಾಶುಲ್ಆಗಿ ಶೇ 80ರಷ್ಟು ಹಾಗೂ ಫಾರ್ಮಲ್ಆಗಿ ಶೇ 20ರಷ್ಟು ಉಡುಪು ಧರಿಸಬೇಕು, ಕುಟುಂಬದವರೊಡನೆ ಹೊಂದಿಕೊಳ್ಳಬೇಕು, ನಾಯಿಯನ್ನು ಪ್ರೀತಿಸಬೇಕು ಎಂದಿದ್ದಾನೆ. ಹಾಗೂ ಬೆಡ್ರೂಂನಲ್ಲಿ ಅಲಂಕಾರಗೊಳ್ಳಬೇಕು, ಸಿನಿಮಾ, ಟ್ರಿಪ್ ಹೋಗುವುದು ಇವೆಲ್ಲವನ್ನು ಇಷ್ಟಪಡಬೇಕು, ಮಕ್ಕಳು ಬೇಡ ಹೀಗೆ ಒಂದಲ್ಲಾ ಎರಡಲ್ಲಾ ಹತ್ತು ಹಲವು ಬೇಡಿಕೆಗಳನ್ನು ಹೇಳಿದ್ದಾನೆ.
Liberal but pro life. Boob size. Height and other requirements of this one Indian man on a matrimonial site! pic.twitter.com/xxljeXAHsG
— Naimish Sanghvi (@ThatNaimish) November 19, 2021
ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ವ್ಯಕ್ತಿಯ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಈ ರೀತಿಯ ಬೇಡಿಕೆಗಳನ್ನಿಟ್ಟ ವ್ಯಕ್ತಿಯ ಜಾಹಿರಾತು ಪ್ರಕಟಿಸಿದ ಮೆಟ್ರೊಮೋನಿಯಲ್ ವಿರುದ್ಧವೂ ಕೋಪಗೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಮೆಟ್ರೊಮೋನಿಯಲ್, ಆ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದು, ಮೆಟ್ರೊಮೊನಿಯಲ್ನಿಂದ ಆತನನ್ನು ಬ್ಲಾಕ್ ಮಾಡಿದೆ. ಈ ಜಾಹಿರಾತಿನ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ಸುದ್ದಿಯಲ್ಲಿದೆ.
Necessary action has been taken against the user for violating our User Terms and Conditions. Thank you for bringing this to our notice.
— Betterhalf.ai (@betterhalfai) November 19, 2021
ಇದನ್ನೂ ಓದಿ:
Viral News: ತನ್ನ ಕೋಟಿಗಟ್ಟಲೆ ಆಸ್ತಿಯನ್ನು ರಿಕ್ಷಾ ಚಾಲಕನಿಗೆ ದಾನ ಮಾಡಿದ ವೃದ್ಧೆ! ಕಾರಣ ಗೊತ್ತೇ?
Viral News: ಮದುವೆಯಾದ ಮರುದಿನವೇ ಗರ್ಲ್ಫ್ರೆಂಡ್ ಜೊತೆ ವಧು ಪರಾರಿ; ಶಾಕ್ ಆದ ಗಂಡನಿಗೆ ಹೃದಯಾಘಾತ!
Published On - 3:35 pm, Wed, 24 November 21