ಬೇಸಿಗೆ ಕಾಲ ಆರಂಭವಾಗಿ ದಿನಗಳೇ ಕಳೆದಿವೆ. ಈ ಬಾರಿ ಫ್ರೆಬ್ರವರಿ ಅಂತ್ಯದಲ್ಲೇ ಸುಡು ಬಿಸಿಲು ಬಂದೆರಗಿದ್ದು, ದಿನೇ ದಿನೇ ತಾಪ ಹೆಚ್ಚಾಗುತ್ತಿದೆ. ವಿಶೇಷವಾಗಿ ಈ ವರ್ಷ ದೇಶದೆಲ್ಲೆಡೆ ಬಿಸಿಲಿನ ತಾಪಮಾನ ವಿಪರೀತವಾಗಿ ಹೇರಿಕೆಯಾಗಿದೆ. ಉದ್ಯಾನ ನಗರಿ ಬೆಂಗಳೂರು ಕೂಡಾ ಬಹುದಿನಗಳ ನಿರಂತರ ಶಾಖದ ಅಲೆಗೆ ಸಾಕ್ಷಿಯಾಗುತ್ತಿದೆ. ಎಸಿ ಇಲ್ಲದೆ ಮನೆಯ ಒಳಗಡೆ ಕೂರಲು ಕೂಡಾ ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಎಸಿ ಇಲ್ಲದೆ ಬದುಕಲು ಸಾಧ್ಯವಾಗದು ಎಂದು ಬೆಂಗಳೂರಿನ ವ್ಯಕ್ತಿಯೊಬ್ಬರು, ಬಿಸಿಲ ತಾಪದಿಂದ ತಪ್ಪಿಸಿಕೊಳ್ಳಲು ಓಯೋ ರೂಮ್ ಮೊರೆ ಹೋಗಲು ನಿರ್ಧರಿಸಿದ್ದಾರೆ. ಈ ಕುರಿತ ಪೋಸ್ಟ್ ಒಂದು ಇದೀಗ ಸಖತ್ ವೈರಲ್ ಆಗುತ್ತಿದೆ.
ರಿಷಭ್ ಶ್ರಿವಾಸ್ತವ (@arre_rishabh) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಈ ಪೋಸ್ಟ್ ಅನ್ನು ಹಂಚಿಕೊಂಡು, ಬೆಂಗಳೂರಿನ ಹವಾಮಾನವು ಚಿಲ್ ನಿಂದ ಗ್ರಿಲ್ ಆಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಎಸಿ ಇಲ್ಲದೆ ಬದುಕಲು ಸಾಧ್ಯವಿಲ್ಲ. ಅದಕ್ಕಾಗಿ ಓಯೋ ರೂಮ್ ಆಶ್ರಯ ಪಡೆಯಲು ನಿರ್ಧರಿಸಿದ್ದೇನೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.
Looks like Bangalore weather decided to level up from chill to grill. ☀️
Can’t survive without AC anymore. Checked into @oyorooms as a refugee.@aajtak @BangaloreMirror @TOIBengaluru pic.twitter.com/3lmczj9gSL
— Rishabh Srivastava (@arre_rishabh) April 1, 2024
ರಿಷಭ್ ಅವರು ನಮ್ಮ ಬೆಂಗಳೂರಿನಲ್ಲಿ ನಿರಂತರವಾಗಿ ಏರುತ್ತಿರುವ ತಾಪಮಾನದಿಂದ ಮನೆಯಲ್ಲಿ ಎಸಿ ಇಲ್ಲದೆ ಒಂದು ಕ್ಷಣವೂ ಇರಲು ಸಾಧ್ಯವಿಲ್ಲ ಎಂದು, ಬಿಸಿಲ ತಾಪದಿಂದ ತಪ್ಪಿಸಿಕೊಂಡು ಚಿಲ್ ಆಗಿರಲು ಓಯೋ ರೂಮ್ ಹೋಟೆಲ್ ನಲ್ಲಿ ಆಶ್ರಯ ಪಡೆಯಬೇಕೆಂದು ನಿರ್ಧರಿಸಿದ್ದಾರೆ.
ಇದನ್ನೂ ಓದಿ: ಬಿಎಂಟಿಸಿ ಬಸ್ನಲ್ಲಿ ಮಿನಿ ಗಾರ್ಡನ್ ನಿರ್ಮಿಸಿದ ಚಾಲಕ; ಕನ್ನಡಿಗರ ಭಾರೀ ಮೆಚ್ಚುಗೆ
ಏಪ್ರಿಲ್ 01 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ಹನ್ನೆರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಹೌದು ಇಲ್ಲಿ ತಾಪಮಾನ ತುಂಬಾನೇ ಬಿಸಿಯಾಗಿದೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಅಯ್ಯೋ ಬೆಂಗಳೂರು ಇತರ ನಗರಗಳಿಗಿಂತ ಉತ್ತಮವಾಗಿದೆ, ಇಲ್ಲಿ ಎಸಿ ಬೇಕೇಂದೇನಿಲ್ಲ ಫ್ಯಾನ್ ಇದ್ದರೂ ಸಾಕು. ಇತರೆ ನಗರಗಳಲ್ಲಿ ಫ್ಯಾನ್ ಇದ್ದರೂ ಬೆವರಿಗೆ ಒದ್ದೆಯಾಗುತ್ತೇವೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.