Viral Video: ಇವನೇನು ಮನುಷ್ಯನಾ ರಾಕ್ಷಸನಾ, ಶ್ವಾನವನ್ನು ಮನಬಂದಂತೆ ನೆಲಕ್ಕೆ ಬಡಿಯುತ್ತಿರುವ ವ್ಯಕ್ತಿ

ಮನುಷ್ಯನಲ್ಲಿ ಮಾನವೀಯತೆ ಎನ್ನುವುದೇ ಸತ್ತು ಹೋಗಿದೆ. ಹೀಗಾಗಿ ದಯೆ, ಕರುಣೆಯನ್ನು ಮರೆತು ಮೃಗದಂತೆ ವರ್ತಿಸುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತಿರುತ್ತವೆ. ಸದ್ಯ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬನು ಶ್ವಾನವೊಂದನ್ನು ನೆಲಕ್ಕೆ ಬಡಿಯುತ್ತಿದ್ದು, ನಾಯಿಯೂ ನೋವಿನಿಂದ ಜೋರಾಗಿ ಕಿರುಚುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ವ್ಯಕ್ತಿಯ ವಿರುದ್ಧ ಗರಂ ಆಗಿದ್ದಾರೆ.

Viral Video: ಇವನೇನು ಮನುಷ್ಯನಾ ರಾಕ್ಷಸನಾ, ಶ್ವಾನವನ್ನು ಮನಬಂದಂತೆ ನೆಲಕ್ಕೆ ಬಡಿಯುತ್ತಿರುವ ವ್ಯಕ್ತಿ
Updated By: ಅಕ್ಷತಾ ವರ್ಕಾಡಿ

Updated on: Jun 16, 2024 | 3:43 PM

ಜಗತ್ತಿನಲ್ಲಿ ಮನುಷ್ಯನಿಗಿಂತ ಕ್ರೂರ ಪ್ರಾಣಿ ಮತ್ತೊಂದು‌ ಇಲ್ಲ ಎನ್ನುವ ಮಾತಿದೆ. ಆದರಂತೆ ಈಗಿನ ದಿನಗಳಲ್ಲಿ ಮಾನವೀಯತೆಯನ್ನೋದೇ ಸತ್ತು ಹೋಗಿದೆ. ಅದರಲ್ಲಿಯೂ ಈ ಮನುಷ್ಯನಂತೂ ಮೃಗದಂತೆ ವರ್ತಿಸುತ್ತಿದ್ದಾನೆ. ಅದಲ್ಲದೇ ಈ ಮಾತು ಬಾರದ ಮೂಕ ಪ್ರಾಣಿಗಳ ಮೇಲೆ ತನ್ನ ಮೃಗಿಯ ವರ್ತನೆಯನ್ನು ತೋರಿಸುವುದು ಇದು ಮೊದಲೇನಲ್ಲ. ಈಗಾಗಲೇ ಇಂತಹ ಅದೆಷ್ಟೋ ವಿಡಿಯೋಗಳು ವೈರಲ್ ಆಗಿದೆ. ಇದೀಗ ಇಲ್ಲೊಬ್ಬ ವ್ಯಕ್ತಿಯೂ ಮಾನವೀಯತೆಯನ್ನು ಮರೆತು ನಾಯಿಯನ್ನು ಎತ್ತಿ ಮನಬಂದಂತೆ ನೆಲಕ್ಕೆ ಬಡಿಯುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಉತ್ತರಪ್ರದೇಶದ ಭಾಗಪಥದಲ್ಲಿ ಮನಕಲಕುವ ಈ ಘಟನೆಯೂ ನಡೆದಿದೆ. ಈ ವಿಡಿಯೋದಲ್ಲಿ ರಸ್ತೆಯಲ್ಲಿ ವ್ಯಕ್ತಿಯೋರ್ವ ನಾಯಿಯೊಂದರ ಕಾಲುಗಳನ್ನು ಹಿಡಿದು, ಅದನ್ನು ಗರಗರನೆ ತಿರುಗಿಸುತ್ತಿದ್ದಾನೆ. ಅಷ್ಟೇ ಅಲ್ಲದೇ ಮನಸೋ ಇಚ್ಛೆಯಂತೆ ಶ್ವಾನವನ್ನು ನೆಲಕ್ಕೆ ಬಡಿಯುತ್ತಿದ್ದಾನೆ. ಈ ವೇಳೆಯಲ್ಲಿ ನಾಯಿಯೂ ನೋವಿನಿಂದ ಜೋರಾಗಿ ಚೀರುತ್ತಿರುದೆ. ಅಲ್ಲೇ ಇರುವ ನಾಯಿಗಳು ಅತ್ತಿಂದ ಇತ್ತ ಓಡುತ್ತಿರುವುದನ್ನು ಕಾಣಬಹುದು.

ಇದನ್ನೂ ಓದಿ: ‘ಹಾಯ್​​ ಫ್ರೆಂಡ್ಸ್ ಮೆಲೋಡಿ ಟೀಮ್’​​​, ಮೋದಿ ಜತೆಗೆ ಖುಷಿ ಖುಷಿಯಾಗಿ ವಿಡಿಯೋ ಮಾಡಿದ ಇಟಲಿ ಪ್ರಧಾನಿ ಮೆಲೋನಿ

ಈ ವಿಡಿಯೋವನ್ನು ಪ್ರಿಯಾ ಸಿಂಗ್ ಎನ್ನುವವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ಎಪ್ಪತ್ತನಾಲ್ಕು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ನೆಟ್ಟಿಗರು ಈ ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆಗೆ ಸಂಬಂಧ ಪಟ್ಟಂತೆ ಈಗಾಗಲೇ ಪೊಲೀಸರೂ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: