ಇಡೀ ನೊಕಿಯಾ ಮೊಬೈಲ್ ಫೋನ್ಅನ್ನು ವ್ಯಕ್ತಿಯು ನುಂಗಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾದ ವ್ಯಕ್ತಿಯ ಹೊಟ್ಟೆಯಲ್ಲಿ ನೊಕಿಯಾ 3310 ಮಾಡಲ್ ಮೊಬೈಲ್ ಪೋನ್ ಪತ್ತೆಯಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ವ್ಯಕ್ತಿಯನ್ನು ಅಪಾಯದಿಂದ ಪಾರು ಮಾಡಲಾಗಿದೆ ಎಂಬುದು ವರದಿಗಳಿಂದ ತಿಳಿದು ಬಂದಿದೆ.
33 ವರ್ಷದ ಕೊಸೊವೊದ ಪ್ರಿಸ್ಟಿನಾ ಮೂಲದ ವ್ಯಕ್ತಿಯು ನೊಕಿಯಾ 3310 ಮಾಡೆಲ್ ಮೊಬೈಲ್ಅನ್ನು ನುಂಗಿದ್ದಾರೆ. ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಪರೀಕ್ಷಿಸಿದ ಬಳಿಕ ಹೊಟ್ಟೆಯಲ್ಲಿ ಮೊಬೈಲ್ ಫೋನ್ ಸಿಲುಕಿಕೊಂಡಿದುವುದು ಎಕ್ಸರೇ ಮೂಲಕ ತಿಳಿದು ಬಂದಿದೆ.
ಮೊಬೈಲ್ ಫೋನ್ ಹೊಟ್ಟೆಯೊಳಗೆ ಜೀರ್ಣವಾಗುವ ವಸ್ತುವಲ್ಲ. ಜತೆಗೆ ಹಾನಿಕಾರಕ ರಾಸಾಯನಿಕಗಳಿಂದ ತುಂಬಿರುತ್ತದೆ. ಜೀವಕ್ಕೆ ಹಾನಿ ಮಾಡುವ ರಾಸಾಯನಿಕ ತುಂಬಿದ ಬ್ಯಾಟರಿ ಸಮೇತ ವ್ಯಕ್ತಿ ಮೊಬೈಲ್ಅನ್ನು ನುಂಗಿದ್ದಾರೆ ಎಂಬುದು ತಿಳಿದು ಬಂದಿದೆ.
ಅದೃಷ್ಟಶಾತ್ ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಯ ವೈದ್ಯ ಡಾ. ತೆಲ್ಜಾಕು ಅವರು ಶಸ್ತ್ರಚಿಕಿತ್ಸೆಯ ಮೂಲಕ ಮೊಬೈಲ್ ಪೋನ್ಅನ್ನು ವ್ಯಕ್ತಿಯ ದೇಹದಿಂದ ಹೊರತೆಗೆಯಲು ಯಶಸ್ವಿಯಾಗಿದ್ದಾರೆ. ಈ ವಿಚಾರವನ್ನು ಡಾ. ತೆಲ್ಜಾಕು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು ಆಘಾತಕಾರಿ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವ್ಯಕ್ತಿ ಯಾವುದೋ ಒಂದು ವಸ್ತುವನ್ನು ನುಂಗಿದ್ದಾನೆ ಎಂಬುದಾಗಿ ನನಗೆ ಕರೆ ಬಂತು. ಆಸ್ಪತ್ರೆಗೆ ಅವರು ದಾಖಲಾದ ಬಳಿಕ ಸ್ಕ್ಯಾನಿಂಗ್ ಮಾಡಿದೆವು. ಮೊಬೈಲ್ ಪೋನ್ ಮೂರು ಭಾಗಗಾಳಾಗಿರುವುದು ಕಂಡು ಬಂದಿದೆ. ಮುಖ್ಯವಾದ ವಿಷಯವೆಂದರೆ ಮೊಬೈಲ್ ಬ್ಯಾಟರಿ ಯಾವ ಸಮಯದಲ್ಲಿ ಬೇಕಾದರೂ ಬ್ಲಾಸ್ಟ್ ಆಗಬಹುದಿತ್ತು. ಆದರೆ ಶಸ್ತ್ರಚಿಕಿತ್ಸೆಯ ಬಳಿಕ ಮೊಬೈಲ್ಅನ್ನು ಹೊರತೆಗೆಯಲಾಗಿದೆ. ಎಂದು ವೈದ್ಯ ಡಾ. ತೆಲ್ಜಾಕು ಹೇಳಿದ್ದಾರೆ. ಈ ಕುರಿತಂತೆ ಟೈಮ್ಸ್ ನೌ ನ್ಯೂಸ್ ವರದಿ ಮಾಡಿದೆ.
ವ್ಯಕ್ತಿಯು, ಯಾವ ಕಾರಣಕ್ಕೆ ಮೊಬೈಲ್ ಪೋನ್ ನುಂಗಿದ್ದಾರೆ ಎಂಬ ವಿಷಯವನ್ನು ಬಹಿರಂಗಪಡಿಸಿಲ್ಲ. ಎಂಡಸ್ಕೋಪಿ ಹಾಗೂ ಎಕ್ಸರೇ ತೆಗೆದು ಬಳಕವೇ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಎರಡು ಗಟೆಗಳ ಬಳಿಕ ಮೊಬೈಲ್ ಪೋನ್ಅನ್ನು ವ್ಯಕ್ತಿಯ ದೇಹದಿಂದ ಹೊರತೆಗೆಯಲಾಯಿತು ಎಂದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral News: ನ್ಯೂಜಿಲೆಂಡ್ನಲ್ಲಿ 41,000 ರೂಪಾಯಿಗೆ ಮಾರಾಟವಾಗುತ್ತಿರುವ ಈ ಮಂಚದ ವಿಶೇಷತೆ ಏನು?
(Man swallows nokia 3310 mobile phone viral news)
Published On - 11:12 am, Mon, 6 September 21