ಮನುಷ್ಯರೇ ರಸ್ತೆಯಲ್ಲಿ ಅಡ್ಡಬಿದ್ದು ನರಳಾಡುತ್ತಿದ್ದರೆ ನೋಡಿದ್ದರೂ ನೋಡದಂತೆ ಹೋಗುವ ದಿನಮಾನವಿದು. ಹೀಗಿರುವಾಗ ಇಲ್ಲೋರ್ವ ದಾರಿಯಲ್ಲಿ ನರಳುತ್ತ, ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಜಿರಳೆಯನ್ನು ಪಶುವೈದ್ಯರ ಬಳಿ ಕರೆದೊಯ್ದಿದ್ದಾನೆ. ಈತನ ಕಾರ್ಯಕ್ಕೆ ನೆಟ್ಟಿಗರು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಈ ಘಟನೆ ಥೈಲೆಂಡ್ನಲ್ಲಿ ನಡೆದಿದ್ದು, ತನು ಲಿಂಪಾಪತಾನಾವಾನಿಚ್ ಎಂಬ ಪಶುವೈದ್ಯರು ಜಿರಳೆಗೆ ಚಿಕಿತ್ಸೆ ನೀಡಿದ್ದಾರೆ. ಹಾಗೂ ವ್ಯಕ್ತಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಯಾರೋ ಜಿರಳೆಯ ಮೇಲೆ ಹೆಜ್ಜೆ ಇಟ್ಟು ನಡೆದಿದ್ದಾರೆ. ಹೀಗಾಗಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಾ ಜಿರಳೆ ನರಳುತ್ತಿದೆ. ಇದನ್ನು ನೋಡಿದ ಕರುಣಾಮಯಿ ವ್ಯಕ್ತಿ ಪಶುವೈದ್ಯಕೀಯ ಆಸ್ಪತ್ರೆಗೆ ತಂದಿದ್ದಾನೆ. ನಾನು ಮೊದಲ ಬಾರಿಗೆ ಜಿರಳೆಗೆ ಚಿಕಿತ್ಸೆ ನೀಡುತ್ತಿದ್ದೇನೆ ಎಂದು ಡಾಕ್ಟರ್ ಹೇಳಿದ್ದಾರೆ. ಆದರೆ ಜಿರಳೆ ಪರಿಸ್ಥಿತಿ ಏನಾಯಿತು ಎಂಬುದರ ಕುರಿತಾಗಿ ಡಾಕ್ಟರ್ ಮಾಹಿತಿ ಹಂಚಿಕೊಂಡಿಲ್ಲ.
ರಸ್ತೆಯಲ್ಲಿ ಅಡ್ಡ ಬಿದ್ದು ನರಳಾಡುತ್ತಿದ್ದರೂ.. ನಮಗ್ಯಾಕಪ್ಪಾ ಉಸಾಬರಿ.. ಎನ್ನುತ್ತಾ ತಿರುಗಿಯೂ ನೋಡದೇ ಹೋಗುವ ಈಗಿನ ದಿನಮಾನಗಳಲ್ಲಿ ಚಿಕ್ಕ-ಪುಟ್ಟ ಕೀಟಗಳ ಜೀವವನ್ನು ಉಳಿಸಲು ಪ್ರಯತ್ನಿಸುತ್ತಿರುವುದು ನಿಜವಾಗಿಯೂ ಮೆಚ್ಚಲೇಬೇಕಾದ ಸಂಗತಿ.
ಇದನ್ನೂ ಓದಿ:
Viral Video: ಪಾನಿಪುರಿ ಮಹಿಮೆಯೆ ಹೀಗೆ.. ನೋಡಿದಾಕ್ಷಣ ಹಸುಗಳ ಬಾಯಲ್ಲೂ ನೀರು! ವಿಡಿಯೋ ನೋಡಿ
Viral Video: ‘ಎಲೆಯೊಳಗೊಂದು ಹಕ್ಕಿ ಗೂಡು’ ಕ್ಯಾಮರಾದಲ್ಲಿ ಸೆರೆಯಾದ ಅಪರೂಪದ ದೃಶ್ಯ
Published On - 2:17 pm, Sun, 6 June 21