ಹೆಚ್ಚಿನವರು ತಮ್ಮ ಪ್ರೀತಿಪಾತ್ರರ ಅಥವಾ ತಮ್ಮ ನೆಚ್ಚಿನ ಹೀರೋಗಳ ಟ್ಯಾಟೂ ಹಾಕಿಸಿಕೊಳ್ಳುತ್ತಾರೆ. ಅದರಲ್ಲೂ ಈ ಯುವಕರು ತಾವು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುವಂತಹ ಹುಡುಗಿಯ ಹೆಸರನ್ನು ಎದೆ ಭಾಗದಲ್ಲಿ ಅಥವಾ ಕೈನಲ್ಲಿ ಹಚ್ಚೆ ಹಾಕಿಸಿಕೊಳ್ಳುತ್ತಾರೆ. ಇಂತಹ ಸಾಕಷ್ಟು ವಿಡಿಯೊಗಳು ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಮಹಾನ್ ಪ್ರೇಮಿಯೊಬ್ಬ ಸ್ವಲ್ಪ ಡಿಫರೆಂಟ್ ಆಗಿ ಟ್ಯಾಟೂ ಹಾಕಿಸಿಕೊಳ್ಳೋಣ ಎನ್ನುತ್ತಾ ತನ್ನ ಗರ್ಲ್‌ಫ್ರೆಂಡ್ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಈ ದೃಶ್ಯವನ್ನು ಕಂಡು ಇದೆಂಥಾ ಲವ್ ಮಾರ್ರೆ ಎಂದು ನೋಡುಗರು ಬಾಯಿ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ತಾವು ಪ್ರೀತಿಸುವ ಜೀವದ ಹೆಸರನ್ನು ಎದೆ ಮೇಲೆ ಹಚ್ಚೆ ಹಾಕಿಸಿಕೊಳ್ಳುವವರ ಮಧ್ಯೆ ಇಲ್ಲೊಬ್ಬ ಭಂಡ ಧೈರ್ಯದ ಯುವಕ ತನ್ನ ಲವರ್ ಹೆಸರನ್ನು ನಾಲಿಗೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾನೆ. ಟ್ಯಾಟೂ ಆರ್ಟಿಸ್ಟ್ ಅಭಿಷೇಕ್ (abhishek_ahirwar6934) ಈ ವಿಡಿಯೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಯುವಕನೊಬ್ಬ ತನ್ನ ನಾಲಿಗೆಯ ಮೇಲೆ ನಿಖಿತಾ ಎಂದು ಪ್ರಿಯತಮೆಯ ಹೆಸರನ್ನು ಹಚ್ಚೆ ಹಾಕಿಸಿಕೊಂಡಿರುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಮರುಭೂಮಿಯಲ್ಲಿ ಸಿಕ್ಕಿಹಾಕಿಕೊಂಡು ಕೊನೆಗೆ ಉಬರ್‌ನಲ್ಲಿ ಒಂಟೆ ಟ್ಯಾಕ್ಸಿ ಬುಕ್ ಮಾಡಿದ ಮಹಿಳೆ
ಅಕ್ಟೋಬರ್ 16 ರಂದು ಹಂಚಿಕೊಳ್ಳಲಾದ ಈ ವಿಡಿಯೋ 29.5 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಎಂತೆಥಾ ಹುಚ್ಚು ಜನಗಳಿದ್ದರಪ್ಪಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದಕ್ಕೆ ಹೇಳೋದು ಶಿಕ್ಷಣ ತುಂಬಾನೇ ಮುಖ್ಯ ಎಂದುʼ ಅನ್ನೋ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಇದೆಂಥಾ ಲವ್ ಮಾರ್ರೆ ಎಂದು ಕೇಳಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ