Viral: ಏಯ್ ಇಲ್ಲೇನ್‌ ಮಾಡ್ತಿದ್ದೀರಾ; ರಸ್ತೆ ಬದಿ ರೊಮ್ಯಾನ್ಸ್‌ ಮಾಡ್ತಿದ್ದ ಹುಡುಗ-ಹುಡುಗಿಯ ಮೇಲೆ ನೀರೆರಚಿದ ವ್ಯಕ್ತಿ

ಸಾರ್ವಜನಿಕ ಸ್ಥಳಗಳಲ್ಲಿ ಪ್ರೇಮಿಗಳು ತೋರುವ ಅತಿರೇಕದ ವರ್ತನೆಗೆ ಸಂಬಂಧಿಸಿದ ಕೆಲವೊಂದು ದೃಶ್ಯಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಲೇ ಇರುತ್ತವೆ. ಇದೀಗ ಇಲ್ಲೊಂದು ಅಂತಹದ್ದೇ ದೃಶ್ಯ ಹರಿದಾಡುತ್ತಿದ್ದು, ಯಾರ ಭಯವೂ ಇಲ್ಲದೆ ಹೈ ಸ್ಕೂಲ್‌ ವಿದ್ಯಾರ್ಥಿಗಳಿಬ್ಬರು ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್‌ ಮಾಡಿದ್ದಾರೆ. ಈ ದೃಶ್ಯವನ್ನು ಕಂಡ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿದ್ದು ಮಾತ್ರವಲ್ಲದೆ, ಚಪ್ಪಲಿ ಎಸೆದು ಅವರನ್ನು ಅಲ್ಲಿಂದ ಒದ್ದೋಡಿಸಿದ್ದಾರೆ.

Viral: ಏಯ್ ಇಲ್ಲೇನ್‌ ಮಾಡ್ತಿದ್ದೀರಾ; ರಸ್ತೆ ಬದಿ ರೊಮ್ಯಾನ್ಸ್‌ ಮಾಡ್ತಿದ್ದ ಹುಡುಗ-ಹುಡುಗಿಯ ಮೇಲೆ ನೀರೆರಚಿದ ವ್ಯಕ್ತಿ
ವೈರಲ್​ ವಿಡಿಯೋ
Edited By:

Updated on: Mar 17, 2025 | 10:17 AM

ದೊಡ್ಡವರಂತೆ ಹದಿಹರೆಯ ಮಕ್ಕಳು ಕೂಡಾ ಪ್ರೀತಿ ಪ್ರೇಮದ ಬಲೆಗೆ ಸಿಕ್ಕಿ ದಾರಿ ತಪ್ಪುತ್ತಿರುವ ಘಟನೆ ಹೆಚ್ಚಾಗುತ್ತಿದೆ. ಅದರಲ್ಲೂ ಕೆಲ ಪ್ರೇಮಪಕ್ಷಿಗಳು ಎಲ್ಲೆಂದರಲ್ಲಿ ಅತಿರೇಕದ ವರ್ತನೆ ತೋರುತ್ತಿರುತ್ತಾರೆ. ಅದೇ ರೀತಿ ಇಲ್ಲಿಬ್ಬರು ಹೈಸ್ಕೂಲ್‌ ವಿದ್ಯಾರ್ಥಿಗಳು ನಮ್ಮನ್ನು ಯಾರಾದ್ರೂ ನೋಡ್ತಾರೆ ಅನ್ನೋ ಭಯ, ನಾಚಿಕೆ ಇಲ್ಲದೆ ನಡು ರಸ್ತೆಯಲ್ಲಿಯೇ ರೊಮ್ಯಾನ್ಸ್‌ ಮಾಡಿದ್ದಾರೆ. ಈ ದೃಶ್ಯವನ್ನು ಕಂಡ ಪಕ್ಕದ ಮನೆ ವ್ಯಕ್ತಿಯೊಬ್ಬರು ಜೋಡಿ ಹಕ್ಕಿಗಳ ಮೇಲೆ ನೀರೆರಚಿದ್ದು ಮಾತ್ರವಲ್ಲದೆ, ಇಲ್ಲೇನ್‌ ಮಾಡ್ತಿದ್ದೀರಾ ಎಂದು ಗದರಿಸಿ ಚಪ್ಪಲಿ ಎಸೆದು ಅವರನ್ನು ಅಲ್ಲಿಂದ ಒದ್ದೋಡಿಸಿದ್ದಾರೆ. ಈ ಕುರಿತ ವಿಡಿಯೋ ಇದೀಗ ಭಾರೀ ವೈರಲ್‌ ಆಗುತ್ತಿದೆ.

ಓಣಿ ರಸ್ತೆಯಲ್ಲಿ ಹೈಸ್ಕೂಲ್‌ ವಿದ್ಯಾರ್ಥಿಯೊಬ್ಬ ತನ್ನ ಪ್ರೇಯಸಿಯನ್ನು ಎತ್ತಿಕೊಂಡು ರೊಮ್ಯಾನ್ಸ್‌ ಮಾಡ್ತಾ ನಿಂತಿದ್ದು, ಈ ದೃಶ್ಯವನ್ನು ಕಂಡ ಪಕ್ಕದ ಬಿಲ್ಡಿಂಗ್‌ ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಚಪ್ಪಲಿ ಎಸೆದು ಒದ್ದೋಡಿಸಿದ್ದಾರೆ. ಈ ಘಟನೆ ನಿಜವಾಗಿ ನಡೆದದ್ದೋ ಅಥವಾ ವಿಡಿಯೋ ಮಾಡುವ ಸಲುವಾಗಿ ಮಾಡಿದ್ದೋ ಎಂಬ ಮಾಹಿತಿ ಲಭ್ಯವಾಗಿಲ್ಲ.

ಈ ಕುರಿತ ವಿಡಿಯೋವನ್ನು viralvibes466 ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಶೇರ್‌ ಮಾಡಲಾಗಿದೆ. ವೈರಲ್‌ ಆಗುತ್ತಿರುವ ವಿಡಿಯೋದಲ್ಲಿ ಸ್ಕೂಲ್‌ ಹುಡುಗಿಯೊಬ್ಬಳು ತನ್ನ ಗೆಳತಿಯೊಂದಿಗೆ ಪ್ರೇಮಿಯನ್ನು ಭೇಟಿಯಾಗಲು ಓಣಿ ರಸ್ತೆಗೆ ಬಂದಿರುವ ದೃಶ್ಯವನ್ನು ಕಾಣಬಹುದು. ಹೀಗೆ ಬಂದಾಕೆಗೆ ಆಕೆಯ ಗೆಳೆಯ ಮುತ್ತಿಟ್ಟು, ಆಕೆಯನ್ನು ಎತ್ತಿಕೊಂಡು ರೊಮ್ಯಾನ್ಸ್‌ ಮಾಡಿದ್ದಾನೆ. ಈ ನಾಚಿಕೆಗೇಡಿನ ದೃಶ್ಯವನ್ನು ಕಂಡು ವ್ಯಕ್ತಿಯೊಬ್ಬರು ಅವರಿಬ್ಬರ ಮೇಲೆ ನೀರೆರಚಿ, ಇಲ್ಲೇನ್‌ ಮಾಡ್ತಿದ್ದೀರಾ ಎಂದು ಗದರಿಸಿ, ಅವರಿಬ್ಬರ ಮೇಲೆ ಕೋಪದಲ್ಲಿ ಚಪ್ಪಲಿ ಎಸೆದು ಅಲ್ಲಿಂದ ಒದ್ದೋಡಿಸಿದ್ದಾರೆ.

ಇದನ್ನೂ ಓದಿ: ವರದಕ್ಷಿಣೆ ಬೇಡವೆಂದ ವರ; ಅಳಿಯನ ಈ ಗುಣಕ್ಕೆ ಮನಸೋತ ಅತ್ತೆ-ಮಾವ

ಒಂದು ವಾರಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ 5.4 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಚಪ್ಪಲಿ ಎಸೆದ ದೃಶ್ಯ ಮಾತ್ರ ಅದ್ಭುತವಾಗಿತ್ತುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಒಂದಲ್ಲ ಇನ್ನೊಂದು ಚಪ್ಪಲಿಯನ್ನು ಕೂಡಾ ಎಸೆಯಬೇಕಿತ್ತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನಾಗಿದ್ರೆ ಅವರ ಮೇಲೆ ಬಾಂಬ್‌ ಎಸೆಯುತ್ತಿದ್ದೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 12:03 pm, Fri, 21 February 25