Video Viral: ಬಾಣಲೆಯ ಹೊಡೆತಕ್ಕೆ ಹಿಮ್ಮೆಟ್ಟಿದ ಮೊಸಳೆ

| Updated By: ವಿವೇಕ ಬಿರಾದಾರ

Updated on: Jun 21, 2022 | 2:19 PM

ವ್ಯಕ್ತಿಯೊಬ್ಬರು ಮೊಸಳೆಯನ್ನು ಕಂಡಾಗ ಹೆದರದೆ ಅದಕ್ಕೆ ಬಾಣಲೆಯಿಂದ ಹೊಡೆದಿದ್ದಾರೆ.

Video Viral: ಬಾಣಲೆಯ ಹೊಡೆತಕ್ಕೆ ಹಿಮ್ಮೆಟ್ಟಿದ ಮೊಸಳೆ
ಬಾಣಲೆಯಿಂದ ಮೊಸಳೆಗೆ ಹೊಡೆಯುತ್ತಿರುವ ದೃಶ್ಯ
Image Credit source: Times Now
Follow us on

ಮೊಸಳೆಯನ್ನು (crocodile)  ಕಂಡರೆ ಸಾಕು ಭಯಬೀತರಾಗಿ ಅಲ್ಲಿಂದ ಓಡಿ ಹೋಗುತ್ತಾರೆ. ಇನ್ನು ಕೆಲವರು ಅದರ ದಾಳಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ಇನ್ನು ಕೆಲವೊಂದು ಸಾರಿ ಅದರೊಂದಿಗೆ ಹೋರಾಡಿ ಜೀವವನ್ನು ರಕ್ಷಣೆ ಮಾಡಿಕೊಂಡಿದ್ದಾರೆ. ಮೊಸಳೆ ಉಭಯವಾಸಿಯಾಗಿದ್ದು (Amphibian), ಅದು ನೀರಿನಲ್ಲು ಮತ್ತು ಭೂಮಿ ಮೇಲೂ ಜೀವಿಸುತ್ತದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಮೊಸಳೆಯನ್ನು ಕಂಡಾಗ ಹೆದರದೆ ಅದಕ್ಕೆ ಬಾಣಲೆಯಿಂದ ಹೊಡೆದಿದ್ದಾರೆ. ಬಾಣಲೆಯ (frying pan) ಹೊಡತಕ್ಕೆ ಮೊಸಳೆ ಪದರುಗುಟ್ಟಿ ಹೋಗಿದೆ. ಸಾಮಾನ್ಯವಾಗಿ ಬಾಣಲೆ ಹೊಡೆತ ಮನೆಯಲ್ಲಿ ಪತ್ನಿ ಯಿಂದ ಪತಿಗೆ ಬೀಳುತ್ತದೆ. ಇಲ್ಲಿ ಮೊಸಳೆಗೆ ಬಿದ್ದಿರುವುದು ಆಶ್ಚರ್ಯಕರವಾಗಿದೆ ಮತ್ತು ತಮಾಷೆಯಾಗಿ ಕಂಡಿದೆ.

ಇದನ್ನು ಓದಿ: Viral Video: ಕೊಳಕು ಮಂಡಲ ಹಾವನ್ನು ನುಂಗಿದ ನಾಗರ ಹಾವು

ಈ ವಿಡಿಯೋ ವೈರಲ್​​ ಆಗಿದ್ದು, ವಿಡಿಯೋದಲ್ಲಿ ಕಂಡ ಘಟನೆ ಆಸ್ಟ್ರೇಲಿಯಾದಲ್ಲಿ ನಡೆದಿದೆ.  ಆಸ್ಟ್ರೇಲಿಯಾದ ಲ್ಯಾಂಡ್ ಡೌನ್ ಅಂಡರ್  ಎಂಬ ಪ್ರದೇಶದ ಜನರು ತಮ್ಮ ಮನೆಗಳಲ್ಲಿ ಮತ್ತು ಹೊರಾಂಗಣದಲ್ಲಿ ಅನಿರೀಕ್ಷಿತವಾಗಿ ಪ್ರಾಣಿಗಳನ್ನು ಕಾಣುತ್ತಲೇ ಇರುತ್ತಾರೆ. ಈ ಪ್ರದೇಶದಲ್ಲಿ ಶೇ 80 ರಷ್ಟು ಸರೀಸೃಪಗಳು, ಉಬಯವಾಸಿಗಳು ಮತ್ತು ಕಪ್ಪೆಗಳು ವಾಸಿಸುತ್ತವೆ. ಹೀಗಾಗಿ ಅಲ್ಲಿನ ಜನರು ಅವುಗಳನ್ನು ಎದುರಿಸಲು ಕೈಯಲ್ಲಿ ಆಯುಧಗಳನ್ನು ಇಟ್ಟುಕೊಂಡು ಓಡಾಡುತ್ತಿರುತ್ತಾರೆ. ಆದರೆ ಅನಿರೀಕ್ಷಿತವಾಗಿ ಭೇಟಿಯಾಗುವ ಇಂತಹ ಪ್ರಾಣಿಗಳನ್ನು ಎದುರಿಸಲು ಇಂತಹ ವಸ್ತುಗಳನ್ನು ಬಳಸಬೇಕಾಗುತ್ತದೆ.

ಇದನ್ನು ಓದಿ: ಕಾಂಬೋಡಿಯಾದ ಮೀನುಗಾರರ ಬಲೆಗೆ ಬಿದ್ದ ವಿಶ್ವದ ಅತ್ಯಂತ ದೊಡ್ಡ ಮೀನು, ಫೋಟೋ ವೈರಲ್​​

ವಿಡಿಯೋದಲ್ಲಿರುವ ವ್ಯಕ್ತಿ ಒಂದು ಪಬ್​​ ಮಾಲಿಕರಾಗಿದ್ದು, ಇವರು ತಮ್ಮ ಪಬ್​​ ಹೊರಾಂಗಣದಲ್ಲಿ ಮೊಸಳೆಯನ್ನು ಕಂಡಾಗ ಬಾಣಲೆಯಿಂದ ಮೊಸಳೆಯ ತೆಲೆ ಮೇಲೆ ಹೊಡೆದು  ಮೊಸಳೆಯನ್ನು ಹಿಮ್ಮೆಟ್ಟಿಸಿದ್ದಾರೆ. ಈ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಸಾಕಷ್ಟು ವೈರಲ್​​ ಆಗಿದೆ.

ಟ್ರೆಂಡಿಂಗ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ    ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ