ಇತ್ತೀಚಿನ ದಿನಗಳಲ್ಲಿ ಜನರು ಸಾಹಸಗಳನ್ನು ಮಾಡಲು ಎದುರು ನೋಡುತ್ತಿರುತ್ತಾರೆ. ಕೆಲವು ಸ್ಟಂಟ್ಗಳು ಮತ್ತು ಅವಸರದ ನಡಿಗೆ ಅಪಾಯವನ್ನು ತಂದೊಡ್ಡಬಹುದು. ಹಾಗಿರುವಾಗ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ. ಸಾಮಾಜಿಕ ಜಾಲತಾಣದಲ್ಲಿ ತಮಾಷೆಯ ವಿಡಿಯೋವೊಂದೆ ಅಲ್ಲ ಕೆಲವು ಆಶ್ಚರ್ಯ ಮೂಡಿಸುವ ಸಂಗತಿಗಳ ದೃಶ್ಯಗಳು ವೈರಲ್ ಆಗುತ್ತವೆ. ವಿಡಿಯೋ ನೋಡಿದ ತಕ್ಷಣ ಮೈ ಜುಂ ಅನ್ನುವುದಂತು ಸತ್ಯ. ಅಂಥಹುದೇ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ.
ಯುಕೆ ಮೂಲದ ಮೈಕ್ ಹೊವಾರ್ಡ್ ಎಂಬಾತ ಎರಡು ಏರ್ ಬಲೂನ್ಗಳ ನಡುವೆ ಅತಿ ಎತ್ತರದಲ್ಲಿ ನಡೆದು ಸಾಗುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. 2004ರ ಹಳೆಯ ವಿಡಿಯೋವನ್ನು ಗಿನ್ನೀಸ್ ವರ್ಡ್ ರೆಕಾರ್ಡ್ ಇನ್ಸ್ಟಾಗ್ರಾಂ ಪುಟವು ಹಂಚಿಕೊಂಡಿದೆ. 6,522 ಮೀಟರ್ ಎತ್ತರದಲ್ಲಿರುವ ಎರಡು ಹಾಟ್ ಏರ್ ಬಲೂನ್ಗಳ ಬ್ಯಾಲೆನ್ಸ್ ಆಗಿ ನಿರ್ಮಿಸಲಗಾದ ಲೋಹದ ಹಲಗೆಯ ಮೇಲೆ ವ್ಯಕ್ತಿ ನಡೆಯುತ್ತಿರುವುದನ್ನು ನೋಡಬಹುದು. ಅದೂ ಅಲ್ಲದೇ ಆತ ಕಣ್ಣಿಗೆ ಕರವಸ್ತ್ರದಿಂದ ಮುಚ್ಚಿಕೊಂಡಿದ್ದಾನೆ. ಭಯಂಕರವಾಗಿರುವ ವಿಡಿಯೋ ಫುಲ್ ವೈರಲ್ ಆಗಿದೆ.
ವಾಕಿಂಗ್ ಬಿಟ್ವೀನ್ ಹಾಟ್ ಏರ್ ಬಲೂನ್ಸ್- ಗಿನ್ನಿಸ್ ವರ್ಡ್ ರೆಕಾರ್ಡ್ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ವಿಡಿಯೋ 80,159 ವೀಕ್ಷಣೆಗಳನ್ನು ಮತ್ತು ಸಾಕಷ್ಟು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ವ್ಯಕ್ತಿಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಕೆಲವರು ವಿಡಿಯೋ ಕ್ಲಿಪ್ ನೋಡಿದರೆ ಭಯವಾಗುತ್ತದೆ ಎಂಬ ಪ್ರತಿಕ್ರಿಯೆಗಳನ್ನು ಹೇಳಿದ್ದಾರೆ. ಕೆಲವರು, ಇದು ತುಂಬಾ ಅಪಾಯಕಾರಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:
Viral Video: ಮೊದಲ ವರ್ಷದ ಹುಟ್ಟುಹಬ್ಬಕ್ಕೆ ವಿಧವಿಧದ ಗಿಫ್ಟ್; ಅವುಗಳೊಂದಿಗೆ ಪಾಂಡಾದ ಆಟ ನೋಡಿ
Viral Video: ಹಸುವನ್ನು ಕಾರಿನಲ್ಲಿ ಕುಳಿಸಿಕೊಂಡು ರೈಡ್ ಹೊರಟ ವ್ಯಕ್ತಿ; ವಿಡಿಯೋ ವೈರಲ್
(Man walk between 2 hot air balloons video goes viral)