
ಸಾಮಾಜಿಕ ಜಾಲತಾಣದಲ್ಲಿ ಬಾಲಕರ ಸ್ಟಂಟ್ ವಿಡಿಯೋಗಳು ಆಗಾಗ ಹೆಚ್ಚು ವೈರಲ್ ಅಗುತ್ತಿರುತ್ತದೆ. ಅದೆಷ್ಟೋ ಎತ್ತರದ ಕಟ್ಟಡವನ್ನು ಹತ್ತಿದ ಸಾಹಸ, ಕೈಕಾಲುಗಳನ್ನು ಸರಳಪಳಿಯಂತೆ ತಿರುಚುವ ಸಾಹಸಗಳನ್ನು ನೋಡಿಯೇ ಇರುತ್ತೀರಿ. ಅಂತಹುದೇ ಒಂದು ಸ್ಟಂಟ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಅಗುತ್ತಿದೆ. ಬಾಲಕನ ಟ್ಯಾಲೆಂಟ್ ನಿಮ್ಮನ್ನೂ ಆಶ್ಚರ್ಯಚಕಿತರನ್ನಾಗಿ ಮಾಡುತ್ತದೆ. ವಿಡಿಯೋ ಇಲ್ಲಿದೆ ನೋಡಿ.
ರಸ್ತೆಯಲ್ಲಿ ಬಾಲಕ ಟ್ರಕ್ ಟೈರ್ ಮೇಲೆ ನಿಂತು ತನ್ನ ಕಾಲುಗಳ ಸಹಾಯದಿಂದ ಟೈರ್ಅನ್ನು ಓಡಿಸುತ್ತಾನೆ. ಮತ್ತು ಟೈರ್ಅನ್ನು ತನ್ನ ಕಾಲುಗಳ ಸಹಾಯದಿಂದ ಹಿಂದಕ್ಕೆ ಎಳೆಯುತ್ತಾನೆ. ಈತನ ಸಾಹಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ವಿಡಿಯೋ ವೀಕ್ಷಿಸಿದ ನೆಟ್ಟಿಗರು ಬಾಲಕನ ಸ್ಟಂಟ್ ನೋಡಿ ಆಶ್ಚರ್ಯಗೊಂಡಿದ್ದಾರೆ.
ವಿಡಿಯೋವನ್ನು ಐಪಿಎಸ್ ಅಧಿಕಾರಿ ರುಪಿನ್ ಶರ್ಮಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಗಮನಿಸಿದಂತೆ ರಸ್ತೆಯಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿರುತ್ತವೆ. ಆ ಸಮಯದಲ್ಲಿ ಬಾಲಕ ರಸ್ತೆಯ ಬದಿಯಲ್ಲಿ ಟ್ರಕ್ ಟೈರ್ಅನ್ನು ಹಿಡಿದು ನಿಂತಿರುವುದನ್ನು ನೋಡಬಹುದು. ಬಳಿಕ ರಸ್ತೆಯ ಮಧ್ಯಕ್ಕೆ ಬಂದು ಟೈರ್ ಮೇಲೆ ಹತ್ತಿ ನಿಂತು ಟೈಯರ್ ಓಡಿಸಲು ಪ್ರಾರಂಭಿಸುತ್ತಾನೆ. ತನ್ನ ಕಾಲುಗಳ ಮೂಲಕ ಟೈರ್ಅನ್ನು ಓಡಿಸುವ ರೀತಿ ಆಶ್ಚರ್ಯವನ್ನು ಉಂಟುಮಾಡುತ್ತದೆ.
ಮೇ 8ರಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ವಿಡಿಯೋವನ್ನು ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಮತ್ತು 100ಕ್ಕೂ ಹೆಚ್ಚು ಲೈಕ್ಸ್ಗಳು ಮತ್ತು ರಿಟ್ವೀಟ್ಗಳನ್ನು ಮಾಡಲಾಗಿದೆ.
ಇದನ್ನೂ ಓದಿ: ಸ್ಟಂಟ್ ಮಾಡೋಕೆ ಹೋಗಿ ಅವಾಂತರ: ನೋಡನೋಡುತ್ತಿದ್ದಂತೆ ಪಲ್ಟಿಯಾದ ರೇಸ್ ಕಾರ್, ಮತ್ತೆ ಚಾಲಕನ ಕಥೆ?
Published On - 12:15 pm, Mon, 10 May 21