ಯಕ್ಷಗಾನ ಕರಾವಳಿಯ ಗಂಡು ಕಲೆ. ಇಲ್ಲಿನ ಹಳ್ಳಿಗಳಲ್ಲಿ ಪುರಾಣಗಳ ಕಥೆಗಳನ್ನು ಸಾರುವ ಯಕ್ಷಗಾನ ಇಂದು ವಿಶ್ವ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ಯಕ್ಷಗಾನವನ್ನು ಆರಾಧಿಸುವ ಇಲ್ಲಿ ಯಕ್ಷಗಾನ ಪ್ರದರ್ಶನ ಸಾಮಾನ್ಯವಾಗಿ ನಡೆಯುತ್ತಲೇ ಇರುತ್ತವೆ. ಇದೀಗ ಮದುವೆ ಮಂಟಪದಲ್ಲಿ ವರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುಮಗಳು ಯಕ್ಷಗಾನ ನೃತ್ಯ ಪ್ರದರ್ಶನ ಮಾಡಿದ್ದು, ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮದುವೆ ಸಮಾರಂಭಗಳಲ್ಲಿ ಸಾಮಾನ್ಯವಾಗಿ ಸಂಬಂಧಿಕರ ಜೊತೆಗೆ ವಧುವರರು ಡಿಜೆ ಹಾಡುಗಳಿಗೆ ನೃತ್ಯವನ್ನು ಮಾಡುತ್ತಾರೆ, ಆದರೆ ಇತ್ತೀಚಿಗೆ ಮಂಗಳೂರಿನಲ್ಲಿ ನಡೆದಂತಹ ಮದುವೆ ಸಮಾರಂಭವೊಂದರಲ್ಲಿ ವಧು ಸಂಬಂಧಿಕರು ಹಾಗೂ ವರನ ಸಮ್ಮುಖದಲ್ಲಿ ಯಕ್ಷಗಾನ ಪ್ರಸಂಗದ ಒಂದು ಸಣ್ಣ ತುಣುಕಿಗೆ ನೃತ್ಯವನ್ನು ಮಾಡಿದ್ದು, ನೆಟ್ಟಿಗರು ವಧುವಿನ ನೃತ್ಯ ಹಾಗೂ ಆಕೆಯ ಯಕ್ಷಾಭಿಮಾನವನ್ನು ಕೊಂಡಾಡಿದ್ದಾರೆ.
ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ಈ ನೃತ್ಯಕ್ಕೆ ಅನೇಕರು ಕಮೆಂಟ್ ಕೂಡ ಮಾಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮದುಮಗಳು ವರ ಹಾಗೂ ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಮಂಟಪದಲ್ಲಿ ಅರರೇ ಯಾರಿವನು ಸುಂದರ ಪುರುಷ ಎನ್ನುತ್ತಾ ಯಕ್ಷಗಾನ ಪ್ರಸಂಗದ ಸಣ್ಣ ತುಣುಕಿಗೆ ಅದ್ಭುತವಾಗಿ ಯಕ್ಷ ನೃತ್ಯ ಮಾಡುವಂತಹ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ತಾಯಿಗಿಂತ ದೊಡ್ಡ ಯೋಧ ಯಾರೂ ಇಲ್ಲ; ತನ್ನ ಮೊಟ್ಟೆಯನ್ನೇ ತಿಂದ ಕಾಗೆಯನ್ನು ಹೊಡೆದು ಸಾಯಿಸಿದ ಹಕ್ಕಿ
ಈ ವಿಡಿಯೋ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ. ಕೆಲವರು ವಧುವಿನ ಯಕ್ಷ ನೃತ್ಯವನ್ನು ಮನಸೋತಿದ್ದಾರೆ, ಇನ್ನೂ ಕೆಲವರೂ ಮದುವೆಯೇ ಆಗಲಿ ಯಕ್ಷಗಾನವೇ ಆಗಲಿ ಅದರದ್ದೇ ಆದ ಚೌಕಟ್ಟಿನಲ್ಲಿ ನಡೆದರೆ ಚೆಂದ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ