Pakistan : ಕರಾಚಿಯಲ್ಲಿ 150 ವರ್ಷಗಳಷ್ಟು ಹಳೆಯದಾದ ಮಾರಿ ಮಾತಾ ಹಿಂದೂ ದೇವಸ್ಥಾನವನ್ನು (Mari Mata Hindu Temple) ನೆಲಸಮಗೊಳಿಸಲಾಗಿದೆ. ಶುಕ್ರವಾರ ಮಧ್ಯರಾತ್ರಿ ಈ ಪ್ರದೇಶದಲ್ಲಿ ವಿದ್ಯುತ್ ಸ್ಥಗಿತಗೊಳ್ಳುತ್ತಿದ್ದಂತೆ ಬುಲ್ಡೋಜರ್ ಬಂದು ನಿಂತಿತು. ನೋಡನೋಡುತ್ತಿದ್ದಂತೆ ದೇವಸ್ಥಾನವನ್ನು ಧ್ವಂಸಗೊಳಿಸಲಾಯಿತು. ಆದರೆ ಹೊರಾವರಣದ ಗೋಡೆಗಳು ಮತ್ತು ಗೇಟ್ ಮಾತ್ರ ಸುಸ್ಥಿತಿಯಲ್ಲಿವೆ. ಅಲ್ಲದೆ ಬುಲ್ಡೋಜರ್ ನಿರ್ವಹಿಸಿದ ತಂಡಕ್ಕೆ ಪೊಲೀಸರು ‘ಪಾಕೀಟು’ ನೀಡುವುದನ್ನು ನೋಡಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಇಂಗ್ಲಿಷ್ ಪತ್ರಿಕೆ Dawn ವರದಿ ಮಾಡಿದೆ.
In Karachi, Pakistan, a 150-yr old Hindu temple bulldozed in the middle of the night! Pakistan is going back to where it was a few years ago. pic.twitter.com/uoY3XdaiSm
ಇದನ್ನೂ ಓದಿ— Ashok Swain (@ashoswai) July 16, 2023
ಮಾರಿ ಮಾತಾ ದೇವಸ್ಥಾನವು ಕರಾಚಿಯ ಮುಖಿ ಚೋಹಿತ್ರಮ್ ರಸ್ತೆಯ ಸೋಲ್ಜರ್ ಬಜಾರ್ ಪೊಲೀಸ್ ಠಾಣೆಯ ಬಳಿ ಇದೆ. ಅತ್ಯಂತ ಹಳೆಯ ದೇವಸ್ಥಾನವಾದ ಶ್ರೀ ಪಂಚಮುಖಿ ಹನುಮಾನ್ ಮಂದಿರದ ಶ್ರೀರಾಮನಾಥ ಮಿಶ್ರಾ ಮಹಾರಾಜ್, ‘ಇದು ಅತ್ಯಂತ ಹಳೆಯ ದೇವಾಲಯ. 150 ವರ್ಷಗಳ ಹಿಂದೆ ಇದನ್ನು ನಿರ್ಮಿಸಲಾಗಿದ್ದು ಇದರ ಅಂಗಳದಲ್ಲಿ ನಿಧಿ ಹೂತಿಡಲಾಗಿದೆ ಎಂದು ಕೇಳಿ ತಿಳಿದಿದ್ದೇನೆ. ಆಕ್ರಮಣಕಾರರು ಬಹಳ ದಿನಗಳಿಂದ ಇದರ ಮೇಲೆ ಕಣ್ಣಿಟ್ಟಿದ್ದರು’ ಎಂದಿದ್ದಾರೆ.
ಇದನ್ನೂ ಓದಿ : Viral: ಒಂಟಿತನ ಕಾಡುತ್ತಿದೆಯೇ?;ಬಾಡಿಗೆ ಗೆಳತಿಯನ್ನು ನೇಮಿಸಿಕೊಳ್ಳಿ!
‘ಇದು ಅತ್ಯಂತ ಹಳೆಯ ದೇವಸ್ಥಾನ. ಇದು ಮದ್ರಾಸಿ ಹಿಂದೂ ಸಮುದಾಯವು ಆಡಳಿತದಲ್ಲಿತ್ತು. ಕಟ್ಟಡ ತುಂಬಾ ಹಳೆಯದಾಗಿದ್ದರಿಂದ ಯಾವಾಗ ಬೇಕಾದರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇತ್ತು. ಹಾಗಾಗಿ ಆಡಳಿತ ಮಂಡಳಿಯು ಮನಸ್ಸಿಲ್ಲದಿದ್ದರೂ ದೇವಸ್ಥಾನವನ್ನು ನವೀಕರಣಗೊಳಿಸುವತನಕ ಬೇರೊಂದು ಜಾಗದ ಸಣ್ಣಕೋಣೆಗೆ ತಾತ್ಕಾಲಿಕವಾಗಿ ದೇವರ ಮೂರ್ತಿಯನ್ನು ಸ್ಥಳಾಂತರಿಸಿತ್ತು. ಆದರೆ ಶುಕ್ರವಾರ ರಾತ್ರಿ ಇದ್ದಕ್ಕಿದ್ದಂತೆ ಈ ದೇವಸ್ಥಾನವನ್ನು ನೆಲಸಮ ಮಾಡಲಾಗಿದೆ’ ಎಂದಿದ್ದಾರೆ ಶ್ರೀರಾಮನಾಥ ಮಿಶ್ರಾ ಮಹಾರಾಜ್.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:01 pm, Mon, 17 July 23