ಉಕ್ರೇನ್ ಮೇಲೆ ಯುದ್ಧ ಮಾಡುತ್ತಿರುವ ರಷ್ಯಾ (Russia Attack On Ukraine) ಮೇಲೆ ವಿವಿಧ ದೇಶಗಳು, ಕಂಪನಿಗಳು, ರೆಸ್ಟೋರೆಂಟ್ಗಳೆಲ್ಲ ನಿರ್ಬಂಧ ಹೇರಿವೆ. ಇದು ರಷ್ಯಾದ ಆರ್ಥಿಕತೆಯ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ. ಆಹಾರ ಕೊರತೆ ಎದುರಾಗುತ್ತಿದೆ. ಹೀಗಾಗಿ ರಷ್ಯಾದ ಜನರು ಮುಂದೆ ತಮಗೆ ಬೇಕಾಗಿದ್ದು ಸಿಗುತ್ತದೆಯೋ ಇಲ್ಲವೋ ಎಂಬ ಆತಂಕದಿಂದ ಗುಂಪುಗುಂಪಾಗಿ ಅಂಗಡಿಗಳು, ರೆಸ್ಟೋರೆಂಟ್ಗಳಿಗೆ ಲಗ್ಗೆ ಇಡುತ್ತಿದ್ದಾರೆ. ಇದನ್ನು ನೋಡಿದ ಸರ್ಕಾರ ಅಗತ್ಯ ವಸ್ತುಗಳ ಖರೀದಿ ಮೇಲೆ ಕೂಡ ನಿರ್ಬಂಧ ವಿಧಿಸುತ್ತಿದೆ. ಆದರೂ ಲೆಕ್ಕಿಸದ ಜನರು, ಕ್ಯೂನಲ್ಲಿ ನಿಂತು ತಮಗೆ ಬೇಕಾಗಿದ್ದನ್ನು ಖರೀದಿಸುತ್ತಿದ್ದಾರೆ.
ಹೀಗೆ ರಷ್ಯಾದ ಮೇಲೆ ನಿರ್ಬಂಧ ಹೇರಿದ ಕಂಪನಿಗಳಲ್ಲಿ ಮೆಕ್ ಡೊನಾಲ್ಡ್ ಕೂಡ ಒಂದು. ಅಮೆರಿಕ ಮೂಲದ, ಬಹುರಾಷ್ಟ್ರೀಯ ಆಹಾರ ನಿಗಮವಾದ ಇದು ರಷ್ಯಾದಲ್ಲಿರುವ ಒಟ್ಟು 850 ರೆಸ್ಟೋರೆಂಟ್, ಅಂಗಡಿಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ನಾಲ್ಕು ದಿನಗಳ ಹಿಂದೆ ಘೋಷಿಸಿತ್ತು. ಹಾಗೇ, ಮುಚ್ಚಿದೆ. ಹಾಗಿದ್ದಾಗ್ಯೂ ರಷ್ಯಾದ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುವ ಸುಮಾರು 62 ಸಾವಿರ ತನ್ನ ಉದ್ಯೋಗಿಗಳಿಗೆ ವೇತನ ನೀಡುವುದಾಗಿಯೂ ಹೇಳಿತ್ತು. ಅದೇನೇ ಇರಲಿ, ರಷ್ಯಾದಲ್ಲಿ ಮೆಕ್ ಡೊನಾಲ್ಡ್ ಮಳಿಗೆಗಳನ್ನು ಮುಚ್ಚುತ್ತೇವೆ ಎಂದು ಕಂಪನಿ ಘೋಷಣೆ ಮಾಡಿದ ದಿನ, ಒಂದೊಂದು ಅಂಗಡಿಯ ಮುಂದೆಯೂ ಸಾವಿರಾರು ಜನರು ಕ್ಯೂ ನಿಂತಿದ್ದರು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಅಂಥ ಒಂದು ವಿಡಿಯೋ ವೈರಲ್ ಆಗಿದೆ. ಮೆಕ್ ಡೊನಾಲ್ಡ್ ಸ್ಟೋರ್ವೊಂದರ ಎದುರು ಬಹುದೂರದವರೆಗೆ ಸಾಲಾಗಿ ಕಾರನ್ನು ನಿಲ್ಲಿಸಿಕೊಂಡು, ಗ್ರಾಹಕರು ಕಾಯುವುದನ್ನು ವಿಡಿಯೋದಲ್ಲಿ ನೋಡಬಹುದು. ಇನ್ನೊಂದೆಡೆ ಸ್ಟಾರ್ ಬಕ್ಸ್ ಕೂಡ ರಷ್ಯಾದಲ್ಲಿ ತನ್ನ ಕಾಫಿ ಶಾಪ್ಗಳನ್ನು ಕ್ಲೋಸ್ ಮಾಡಿದೆ.
People in Moscow waiting in line for McDonald’s after they announced they would be closing all 847 locations in Russia. #RussiaUkraineCrisis #McDonalds #Moscow pic.twitter.com/CozmFpmexX
— ?? (@UkraineLiveNews) March 9, 2022
ಇದನ್ನೂ ಓದಿ: ತಪ್ಪು ಮಾಡದವರು ಬಲಿಪಶು ಆಗುವುದು ಬೇಡ: ಬಸವರಾಜ ಹೊರಟ್ಟಿ
Published On - 3:43 pm, Sun, 13 March 22