
ಆಹಾರ ತಯಾರಿಕಾ ಕಂಪನಿಗಳು ಹೊಸ ಹೊಸ ರೀತಿಯ ಆಹಾರಗಳನ್ನು ಗ್ರಾಹಕರಿಗೆ ಪರಿಚಯಿಸುವುದು ಸಹಜ, ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಒಂದು ಹೊಸ ರುಚಿಯನ್ನು ಪರಿಚಯಿಸುತ್ತವೆ. ಅದರಲ್ಲಿ ಜಗತ್ತಿನ ವಿವಿಧ ದೇಶಗಳಲ್ಲಿ ಬ್ರಾಂಚ್ ಹೊಂದಿರುವ ಮೆಕ್ ಡಾನಲ್ಡ್ಸ್ (McDonald’s) ಕೂಡ ಇದೀಗ ಹೊಸ ಆಹಾರವನ್ನು ಪರಿಚಿಯಿಸಿದೆ. ಹೌ್ದು ಮೆಕ್ ಡಾನಲ್ಡ್ಸ್ ಇದೀಗ ಕೊತ್ತಂಬರಿ ಸೊಪ್ಪಿನ ಐಸ್ಕ್ರೀಮ್ (Coriander Ice Cream) ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಬಗ್ಗೆಸಾಮಾಜಿಕ ಜಾಲತಾಣ (Social Media)ದಲ್ಲಿ ಪರ ವಿರೋಧ ಚರ್ಚೆಗಳು ಆರಂಭವಾಗಿದೆ. ಬಹುತೇಕ ಆಹಾರ ಪ್ರಿಯರು ಕೊತ್ತಂಬರಿ ಐಸ್ಕ್ರೀಮ್ ಅನ್ನು ನೋಡಿ ಮೂಗು ಮುರಿದಿದ್ದಾರೆ. ಇನ್ನೂ ಕೆಲವರು ಒಮ್ಮೆಯಾದರೂ ಟೇಸ್ಟ್ ನೋಡಬೇಕು ಎಂದಿದ್ದಾರೆ.
ಈ ಕುರಿತು ಡೇನಿಯಲ್ ಅಹಮದ್ ಎನ್ನುವವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಚೀನಾದ ಮೆಕ್ ಡಾನಲ್ಡ್ಸ್ ಕಂಪನಿ ಈ ಕೊತ್ತಂಬರಿ ಐಸ್ ಕ್ರೀಮ್ ಫೆ. 21ರಂದು ಪರಿಚಯಿಸಿದೆ. ಸದ್ಯ ಈ ಹೊಸ ಆಹಾರ ಜಗತ್ತಿನೆಲ್ಲೆಡೆ ವೈರಲ್ ಆಗಿದೆ. ಮೆಕ್ ಡಾನಲ್ಡ್ಸ್ ಅಮೇರಿಕದ ಆಹಾರ ತಯಾರಿಕಾ ಕಂಪನಿಯಾಗಿದೆ. ಪಿಜ್ಜಾ, ಬರ್ಗರ್ನಂತಹ ಹಲವು ಬಗೆಯ ಆಹಾರಗಳನ್ನು ತಯಾರಿಸುವ ಕಂಪನಿಯಾಗಿದೆ. ಜಗತ್ತಿನ ಹಲವು ದೇಶಗಳಲ್ಲಿ ತನ್ನ ಬ್ರಾಂಚ್ಅನ್ನು ಸ್ಥಾಪಿಸಿ ಆಹಾರ ಪ್ರಿಯರ ಗಮನ ಸೆಳೆದಿದೆ.
ಇದನ್ನೂ ಓದಿ:
Viral Video: ಬಾತುಕೋಳಿಗಳ ಜೊತೆ ಹಸುಗಳ ಫೈಟಿಂಗ್; ವೈರಲ್ ವಿಡಿಯೋ ಶೇರ್ ಮಾಡಿದ ಆನಂದ್ ಮಹೀಂದ್ರಾ