Viral: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ

| Updated By: ಅಕ್ಷತಾ ವರ್ಕಾಡಿ

Updated on: Mar 20, 2024 | 7:31 PM

ಕೃತಕ ಆನೆಯನ್ನು ಉಡುಗೊರೆಯಾಗಿ ನೀಡುರುವ ಪ್ರಿಯಾಮಣಿ, “ತಂತ್ರಜ್ಞಾನದ ಪ್ರಗತಿಯೂ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಯಾಂತ್ರಿಕ ಆನೆಯು ಭಕ್ತರು ಸುರಕ್ಷಿತವಾಗಿ ಮತ್ತು ಪ್ರಾಣಿ ಸ್ನೇಹಿಯಾಗಿ ದೇವಾಲಯದ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

Viral: ಕೇರಳದ ದೇವಾಲಯಕ್ಕೆ ರೋಬೋ ಆನೆ ಉಡುಗೊರೆ ನೀಡಿದ ನಟಿ ಪ್ರಿಯಾಮಣಿ
Follow us on

ದೇಶದಲ್ಲಿನ ಅನೇಕ ದೇವಾಲಯಗಳಲ್ಲಿ ಧಾರ್ಮಿಕ ಆಚರಣೆಗಳಿಗೆ ಹಾಗೂ ದೇವರ ಸೇವೆಗೆಂದು ಜೀವಂತ ಆನೆಗಳನ್ನು ಬಳಸಲಾಗುತ್ತದೆ. ಆದರೆ ಇದೀಗ ಕೇರಳದ ತೃಕ್ಕಾಯಿಲ್ ಮಹಾದೇವ ದೇಗುಲದ ಆಡಳಿತ ಮಂಡಳಿಯು ಜೀವಂತ ಆನೆಗಳನ್ನು ದೇವಸ್ಥಾನದ ಆಚರಣೆ ಮತ್ತು ಕಾರ್ಯಕ್ರಮಗಳಿಗೆ ಬಳಕೆ ಮಾಡುವುದು ಬೇಡ, ಅವುಗಳನ್ನು ಗುತ್ತಿಗೆಗೆ ಪಡೆಯೋದು ಬೇಡ ಎಂಬ ನಿರ್ಧಾರ ಮಾಡಿದೆ. ಅಷ್ಟೇ ಅಲ್ಲದೆ ಧಾರ್ಮಿಕ ಆಚರಣೆಗಳ ಕಾರಣಕ್ಕೆ ಹಾಗೂ ಪ್ರದರ್ಶನದ ಕಾರಣಕ್ಕೆ ಪ್ರಾಣಿಗಳನ್ನು ಬಳಕೆ ಮಾಡುವುದು ಕ್ರೂರತೆ ಎಂದು ಹೇಳಿದೆ. ದೇವಾಲಯದ ಈ ನಿರ್ಧಾರಕ್ಕೆ ಮೆಚ್ಚಿದ ಲಾಭರಹಿತ ಸಂಸ್ಥೆಯಾಗಿರುವ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್ (PETA) ಇಂಡಿಯಾದ ಜೊತೆಗೂಡಿ ನಟಿ ಪ್ರಿಯಾಮಣಿ ನೋಡಲು ಥೇಟ್ ಜೀವಂತ ಆನೆಯಂತೆಯೇ ಕಾಣುವ ರೋಬೋಟಿಕ್ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.

ಇನ್ನು ಮುಂದೆ ದೇವಸ್ಥಾನದ ಆಚರಣೆಗಳಿಗೆ ಜೀವಂತ ಆನೆಯನ್ನು ಬಳಸುವುದಿಲ್ಲ ಎಂಬ ತೃಕ್ಕಾಯಿಲ್ ಮಹಾದೇವಾ ದೇವಾಲಯದ ಆಡಳಿತ ಮಂಡಳಿಯ ಮಹತ್ತರವಾದ ನಿರ್ಧಾರದಿಂದ ಖುಷಿಯಾಗಿರುವ ನಟಿ ಪ್ರಿಯಾಮಣಿ ಲಾಭರಹಿತ ಸಂಸ್ಥೆಯಾದ ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಪ್ ಅನಿಮಲ್ಸ್ (PETA) ಇಂಡಿಯಾ ಜೊತೆಗೂಡಿ ಈ ದೇವಾಲಯಕ್ಕೆ ನೈಜ್ಯ ಆನೆಯಂತೆಯೇ ಇರುವ ಬೃಹದಾಕಾರದ ಕೃತಕ ಆನೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಈ ಯಾಂತ್ರಿಕ ಆನೆಗೆ ʼಮಹಾದೇವನ್ʼ ಎಂದು ನಾಮಕರಣ ಮಾಡಲಾಗಿದ್ದು, ದೇಗುಲದ ಆಚರಣೆಯಲ್ಲಿ ಈ ಆನೆಯನ್ನು ಸುರಕ್ಷಿತ ಮತ್ತು ಹಿಂಸೆಯಿಂದ ಮುಕ್ತವಾಗಿ ಬಳಕೆ ಮಾಡಬಹುದಾಗಿದೆ ಮತ್ತು ಭಕ್ತಾದಿಗಳು ಶುಭ ಸಂದರ್ಭದಲ್ಲಿ ಸುರಕ್ಷಿತ ಮತ್ತು ಪ್ರಾಣಿ ಸ್ನೇಹಿ ವಾತಾವರಣದಲ್ಲಿ ಭಾಗಿಯಾಗಬಹುದು ಎಂದು ಪೇಟಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕೃತಕ ಆನೆಯನ್ನು ಉಡುಗೊರೆಯಾಗಿ ನೀಡುರುವ ಪ್ರಿಯಾಮಣಿ, “ತಂತ್ರಜ್ಞಾನದ ಪ್ರಗತಿಯೂ ಶ್ರೀಮಂತ ಸಾಂಸ್ಕೃತಿಕ ಆಚರಣೆಗಳ ಮತ್ತು ಪರಂಪರೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪ್ರಾಣಿಗಳಿಗೆ ಯಾವುದೇ ಹಾನಿಯಾಗದಂತೆ ನೋಡಿಕೊಳ್ಳುತ್ತದೆ. ಅಷ್ಟೇ ಅಲ್ಲದೆ ಈ ಹೊಸ ಯಾಂತ್ರಿಕ ಆನೆಯು ಭಕ್ತರು ಸುರಕ್ಷಿತವಾಗಿ ಮತ್ತು ಪ್ರಾಣಿ ಸ್ನೇಹಿಯಾಗಿ ದೇವಾಲಯದ ಶುಭ ಕಾರ್ಯಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡುತ್ತದೆ” ಎಂದು ಹೇಳಿದ್ದಾರೆ.

ಕೇರಳ ಸೇರಿದಂತೆ ದೇಶದ ಹಲವು ದೇವಾಲಯಗಳ ಧಾರ್ಮಿಕ ಆಚರಣೆಗಳ ಸಂದರ್ಭದಲ್ಲಿ ಜೀವಂತ ಆನೆಗಳನ್ನು ಬಳಕೆ ಮಾಡಲಾಗುತ್ತಿದೆ. ಹೀಗಿರುವಾಗ ಅವುಗಳಿಗೆ ಹಿಂಸೆಯನ್ನು ನೀಡದೆ ಅವುಗಳು ಮನುಷ್ಯರಂತೆಯೇ ಮುಕ್ತವಾಗಿ ಮತ್ತು ಸುರಕ್ಷಿತವಾಗಿ ತಮ್ಮ ಕುಟುಂಬದೊಂದಿಗೆ ಜೀವಿಸಬೇಕು ಎಂಬ ಕಾರಣಕ್ಕೆ ತೃಕ್ಕಾಯಿಲ್ ಮಹಾದೇವಾ ದೇವಾಲಯದ ಆಡಳಿತ ಮಂಡಳಿಯು ಜೀವಂತ ಆನೆಗಳನ್ನು ಧಾರ್ಮಿಕ ಆಚರಣೆಗಳಲ್ಲಿ ಬಳಕೆ ಮಾಡುವುದಿಲ್ಲ ಎಂಬ ನಿರ್ಧಾರವನ್ನು ತೆಗೆದುಕೊಂಡಿದೆ. ಇದೀಗ ಈ ದೇವಾಲಯಕ್ಕೆ ಜೀವಂತ ಆನೆಯನ್ನೇ ಹೋಲುವ ರೋಬೋಟಿಕ್ ಆನೆ ʼಮಹದೇವನ್ʼ ಆಗಮನವಾಗಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ