Viral: ಭಾರತಕ್ಕೆ ಹೋಲಿಸಿದ್ರೆ ಯುರೋಪ್‌ನ ಉದ್ಯೋಗಿಗಳು ಎಷ್ಟು ಸೇಫ್ ನೋಡಿ

ಭಾರತ ಹಾಗೂ ಯುರೋಪ್‌ನಲ್ಲಿ ಕೆಲಸದ ಸ್ಥಳದಲ್ಲಿ ಏನೆಲ್ಲಾ ವ್ಯತ್ಯಾಸಗಳಿವೆ ಎಂದು ತೋರಿಸುವ ಪೋಸ್ಟ್ ಸದ್ಯ ವೈರಲ್ ಆಗುತ್ತಿದೆ. ಭಾರತೀಯ ಉದ್ಯೋಗಿಗಳಿಗೆ ಹೋಲಿಸಿದ್ರೆ ಯುರೋಪಿಯನ್ನರು ತಮ್ಮ ಕೆಲಸದ ಜೀವನದಲ್ಲಿ ಹೇಗೆಲ್ಲಾ ಸಮತೋಲನ ಕಾಯ್ದುಕೊಳ್ಳುತ್ತಾರೆ ಎನ್ನುವುದನ್ನು ಈ ಪೋಸ್ಟ್ ಎತ್ತಿ ತೋರಿಸುತ್ತಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಶಾಕ್ ಆಗಿದ್ದಾರೆ.

Viral: ಭಾರತಕ್ಕೆ ಹೋಲಿಸಿದ್ರೆ ಯುರೋಪ್‌ನ ಉದ್ಯೋಗಿಗಳು ಎಷ್ಟು ಸೇಫ್ ನೋಡಿ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Oct 12, 2025 | 6:31 PM

ಉದ್ಯೋಗದಲ್ಲಿರುವವರಿಗೆ (employment) ಬಾಸ್‌ನಿಂದ ರಜೆ ಕೇಳುವುದೇ ಕಷ್ಟದ ಕೆಲಸ. ಹೀಗಿರುವಾಗ ಒಂದು ದಿನ ರಜೆ ಕೊಟ್ರೂ ಕೂಡ ಆ ದಿನದ ಕೆಲಸವನ್ನು ಹಿಂದಿನ ದಿನ ಮುಗಿಸಿ ಕೊಡಲೇಬೇಕು. ಇನ್ನೂ ವೈಯಕ್ತಿಕ ಸಮಯವಂತೂ ಸಿಗುವುದೇ ಇಲ್ಲ. ಆದರೆ ಈ ಯುರೋಪ್‌ನಲ್ಲಿನ ಉದ್ಯೋಗಿಗಳು ತಮ್ಮ ಟೀಮ್‌ನೊಂದಿಗೆ ವೈಯಕ್ತಿಕ ವೇಳಾಪಟ್ಟಿಯನ್ನು ಹೇಗೆ ಹಂಚಿಕೊಳ್ಳುತ್ತಾರೆ ಎನ್ನುವುದಕ್ಕೆ ಈ ಪೋಸ್ಟ್‌ಯೇ ಸಾಕ್ಷಿ. ನೆಟ್ಟಿಗರು ಈ ಪೋಸ್ಟ್ ನೋಡುತ್ತಿದ್ದಂತೆ ನಮ್ಮ ಭಾರತೀಯರನ್ನು ಕೆಲಸದಿಂದ ತೆಗೆಯುವ ಸುಲಭ ಮಾರ್ಗ ಇದುವೇ ಎಂದು ತಮಾಷೆಯಾಗಿ ಹೇಳಿದ್ದಾರೆ.

r/IndiaWorkplace ಹೆಸರಿನ ರೆಡ್ಡಿಟ್ ಖಾತೆಯಲ್ಲಿ ಯುರೋಪ್‌ನಲ್ಲಿ ಮೈಕ್ರೋಸಾಫ್ಟ್ ಟೀಮ್‌ನೊಂದಿಗೆ ಕಳುಹಿಸಲಾದ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಕೆಲಸದ ಸಂಸ್ಕೃತಿ ಆಘಾತ: ಭಾರತ ವರ್ಸಸ್‌ ಯುರೋಪ್ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಶುಭೋದಯ, ಮುಂದಿನ ವಾರ ನನ್ನ ವೇಳಾಪಟ್ಟಿಯ ಬಗ್ಗೆ ತಿಳಿಸುತ್ತೇನೆ. ಸೋಮವಾರ ನಾನು ರಜೆಯಲ್ಲಿದ್ದೇನೆ, ನಂತರ ವಾರದ ಉಳಿದ ಸಮಯ ವರ್ಕ್ ಫ್ರಮ್ ಹೋಮ್. ನನ್ನ ಹೆಂಡತಿ ಊರಿಂದ ಹೊರಗಿರುವುದರಿಂದ ನನಗೆ ಮೂವರು ಮಕ್ಕಳಿದ್ದಾರೆ. ಪರ್ಸನಲ್ ಮೀಟಿಂಗ್‌ಗೆ ಹಾಜರಾಗಲು ಸಾಧ್ಯವಾಗದಿದ್ದರೆ ನಾನು ಟೀಮ್‌ನಲ್ಲಿ ಪೋಸ್ಟ್ ಮಾಡುತ್ತೇನೆ” ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ ನೋಡಿ

ಇದನ್ನೂ ಓದಿ
ತನ್ನ ಪ್ರೇಮಿಗಾಗಿ 3.4 ಕೋಟಿ ರೂ ಸಂಬಳದ ಉದ್ಯೋಗವನ್ನು ತೊರೆದ ಮಹಿಳೆ
ತಲೆನೋವು ಅಂದ್ರೂ ರಜೆ ಕೊಡಲ್ಲ ಮ್ಯಾನೇಜರ್; ಈ ಉದ್ಯೋಗಿಯ ಕಷ್ಟ ನೋಡಿ
ಸಹೋದರನ ಮದುವೆಗೆ ರಜೆ ಕೊಡದ ಬಾಸ್, ಜಾಬ್ ರಿಸೈನ್ ಮಾಡಿದ ಉದ್ಯೋಗಿ
ಇಂದು ವಾರ್ಷಿಕ ಸಂಬಳವೇ 24 ಲಕ್ಷ ರೂ; ಯಶಸ್ಸಿನ ಹಾದಿ ಬಿಚ್ಚಿಟ್ಟ ಯುವಕ

ಇದನ್ನೂ ಓದಿ:Viral: ತನ್ನ ಪ್ರೇಮಿಗಾಗಿ 3.4 ಕೋಟಿ ರೂ ಸಂಬಳದ ಉದ್ಯೋಗವನ್ನು ತೊರೆದ ಮಹಿಳೆ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಒಬ್ಬ ಬಳಕೆದಾರರು, ನಾವು ಭಾರತೀಯ ಟೀಮ್‌ನೊಂದಿಗೆ ಈ ರೀತಿ ಪೋಸ್ಟ್ ಮಾಡಬಹುದೇ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ ಭಾರತೀಯ ಕೆಲಸದ ಸ್ಥಳದಲ್ಲಿ ಹಂಚಿಕೊಂಡರೆ ಕೆಲಸದಿಂದ ತೆಗೆದುಹಾಕುವ ಅತ್ಯಂತ ವೇಗದ ಮಾರ್ಗ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ ನಾನು ಯುಕೆ ಮೂಲದ ಕಂಪನಿಯಲ್ಲಿ ಕೆಲಸ ಮಾಡುತ್ತೇನೆ, ನನಗೆ ಬ್ರಿಟಿಷ್ ಮ್ಯಾನೇಜರ್ ಇದ್ದಾರೆ. ನಾವು ಕೆಲಸ ಮಾಡುವುದು ಇದಕ್ಕೇನೇ, ಇಲ್ಲಿ ರಜೆ ತೆಗೆದುಕೊಳ್ಳಲು ಕಾರಣವನ್ನು ಸಹ ನೀಡಬೇಕಾಗಿಲ್ಲ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ