ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಪುಟ್ಟಪರ್ತಿ ಗ್ರಾಮದಲ್ಲಿ ಪವಾಡವೊಂದು ನಡೆದಿದೆ. ಸತ್ಯಸಾಯಿ ಫೋಟೋದಿಂದ ವಿಭೂತಿ (Vibhuti) ಉದುರುತ್ತಿದೆ ಎಂದು ಗ್ರಾಮಸ್ಥರು ಆ ಮನೆ ಮುಂದೆ ಸರತಿ ಸಾಲಿನಲ್ಲಿ ನಿಂತಿದ್ದಾರೆ. ಇಷ್ಟಕ್ಕೂ ಆ ಮನೆಯಲ್ಲಿ ಜರುಗಿದ್ದು ಏನು? ಪುಟ್ಟಪರ್ತಿ ಪುರಸಭೆಯ ಪೆದ್ದಕಮ್ಮವಾರಿಪಲ್ಲಿ ಗ್ರಾಮದಲ್ಲಿ ಸತ್ಯಸಾಯಿ ಬಾಬಾ (Puttaparthi Sai Baba) ಭಕ್ತೆಯ ಮನೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ ಎಂಬ ಸುದ್ದಿ ಸುತ್ತಮುತ್ತ ಹಬ್ಬಿದೆ.
ಆ ದೃಶ್ಯವನ್ನು ನೋಡಿದ ಕುಟುಂಬಸ್ಥರು ಪೂಜೆ ಮಾಡತೊಡಗಿದ್ದಾರೆ. ಇದರಿಂದ ಆ ಮನೆಗೆ ಸುತ್ತಮುತ್ತಲ ಗ್ರಾಮಗಳ ಜನರೆಲ್ಲ ಬರತೊಡಗಿದ್ದಾರೆ. ಇದು ಸತ್ಯಸಾಯಿ ಬಾಬಾರವರ ಜನ್ಮ ಮಾಸವಾದ್ದರಿಂದ ಈ ಪವಾಡ ನಡೆದಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಈ ಹಿಂದೆಯೂ ಜಿಲ್ಲೆಯಲ್ಲಿ ಹಲವು ವಿಚಿತ್ರಗಳು ನಡೆದಿವೆ.
ಬಾಬಾ ನಮ್ಮ ನಡುವೆ ಇಲ್ಲದಿದ್ದರೂ ಅವರನ್ನು ಪೂಜಿಸುವ ಮತ್ತು ಪೂಜಿಸುವವರಿಗೆ ಅವರು ಯಾವಾಗಲೂ ಜೀವಂತವಾಗಿದ್ದಾರೆ ಎಂದು ಆಗಾಗ ಸಾಬೀತಾಗಿರುತ್ತದೆ. ಪ್ರತಿ ವರ್ಷ ನವೆಂಬರ್ ತಿಂಗಳಿನಲ್ಲಿ ಹೀಗೆ ವಿಭೂತಿ ಉದುರುವ ಪವಾಡ ನಡೆಯುತ್ತದೆ.. ಇದೆಲ್ಲ ಸತ್ಯಸಾಯಿಯ ಮಹಿಮೆ ಎನ್ನುತ್ತಾರೆ ಸ್ಥಳೀಯರು.
ಇದೇ ವೇಳೆ…ಸತ್ಯಸಾಯಿ ಜಿಲ್ಲೆಯ ಜೀರಿಗೆಪಲ್ಲಿ ಎಂಬ ಗ್ರಾಮದಲ್ಲಿ ಮತ್ತೊಂದು ವಿಚಿತ್ರವೂ ನಡೆದಿದೆ. ರಾತ್ರಿ 9 ಗಂಟೆಗೆ ಸ್ಥಳೀಯ ಅಮ್ಮಾಜಿ ದೇವಸ್ಥಾನಕ್ಕೆ ಎರಡು ಕರಡಿಗಳು ನುಗ್ಗಿವೆ. ದೇವಸ್ಥಾನದ ಮುಖ್ಯ ದ್ವಾರದಿಂದ ದೇವಸ್ಥಾನ ಪ್ರವೇಶಿಸಿವೆ. ಅದಾದ ನಂತರ ಎರಡು ಕರಡಿಗಳ ಪೈಕಿ.. ಒಂದು ಕರಡಿ ದೇವಸ್ಥಾನದ ಗಂಟೆಗೆ ನೇತಾಡುವ ಹಗ್ಗವನ್ನು ಕಚ್ಚಿಕೊಂಡು ಸುತ್ತುತ್ತಿದೆ. ತನ್ನ ಮುಂಭಾಗದ ಕಾಲುಗಳಿಂದ ಎಳೆಯುತ್ತಾ ದೇವಾಲಯದ ಗಂಟೆಯನ್ನು ಬಾರಿಸಿದೆ. ಇದು ಈಗ ಸಾಮಾಜಿಕ ಜಾಲತಾಣಗಳಿಗೆ ಆಹಾರವಾಗಿದೆ.
Published On - 3:50 pm, Wed, 2 November 22