Viral: ತನ್ನ ಅಚ್ಚುಮೆಚ್ಚಿನ ‘ಜೀವಂತ ತಲೆದಿಂಬಿನೊಂದಿಗೆ’ ತಪ್ಪಿಸಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು

|

Updated on: Sep 22, 2023 | 5:05 PM

America: ಹೀಗೊಂದು ಘಟನೆ ನಡೆಯಿತೇ? ಎನ್ನುವುದನ್ನು ನಂಬಲು ಅಸಾಧ್ಯವೆನ್ನಿಸುವಂತಿದೆ ಇದು. ಇದನ್ನು ಓದುತ್ತಿದ್ದತೆ ಖಂಡಿತ ಇದು ಫೇರಿ ಟೇಲ್​ ಕಥೆ ಎಂದು ನೀವು ಭಾವಿಸಲೂಬಹುದು. ಆದರೆ ಇದು ಅಮೆರಿಕದ ಮಿಚಿಗನ್​ನಲ್ಲಿ ನಿಜಕ್ಕೂ ನಡೆದಿದೆ. ಎರಡು ವರ್ಷದ ಹೆಣ್ಣುಮಗು ಕಾಣೆಯಾಗಿದ್ದಲ್ಲದೆ ಮರಳಿ ಪೋಷಕರ ಮಡಿಲನ್ನು ಸೇರಿದೆ. ಯಾರು ಈ ಮಗುವನ್ನು ಕಾಯ್ದವರು? ಓದಿ.

Viral: ತನ್ನ ಅಚ್ಚುಮೆಚ್ಚಿನ ಜೀವಂತ ತಲೆದಿಂಬಿನೊಂದಿಗೆ ತಪ್ಪಿಸಿಕೊಂಡಿದ್ದ ಎರಡು ವರ್ಷದ ಹೆಣ್ಣುಮಗು
ಪ್ರಾತಿನಿಧಿಕ ಚಿತ್ರ
Follow us on

Dog: ಮನುಷ್ಯರು ಪಳಗಿಸಿ ಸಾಕಲು ಶುರು ಮಾಡಿದ ಪ್ರಾಣಿಗಳೆಂದರೆ ನಾಯಿಗಳು (Dogs). ನಮಗೂ ಅವಕ್ಕೂ ಸುಮಾರು 12,000 ವರ್ಷಗಳ ಅವಿನಾ ಸಂಬಂಧವಿದೆ. ಅವುಗಳು ತೋರುವ ವಿಶ್ವಾಸ, ನಿಷ್ಠೆಯಿಂದಾಗಿ ಮನುಷ್ಯರಿಗಿಂತ ಅವೇ ವಾಸಿ ಎನ್ನುವಂಥ ತೀರ್ಮಾನಕ್ಕೆ ಬರುವುದು ಅತ್ಯಂತ ಸಹಜ ಎಂಬಂತಾಗಿದೆ. ಮತ್ತಿನ್ನು ನಾಯಿಗಳು ಹಾಗೂ ಚಿಕ್ಕಮಕ್ಕಳ ಸಂಬಂಧವಂತೂ ಇನ್ನೂ ವಿಶೇಷವಾದುದು. ನಾಯಿಗಳು ಪುಟ್ಟಮಕ್ಕಳನ್ನು ಅಪಾಯದಿಂದ ಕಾಪಾಡುವ ಕತೆಗಳನ್ನು ನಾವು ಆಗಾಗ ಕೇಳುತ್ತಲೇ ಇರುತ್ತೇವೆ. ಅಂಥದ್ದೇ ಇನ್ನೊಂದು ವಿಸ್ಮಯಕಾರಿ ಘಟನೆ ಅಮೆರಿಕಾದ ಮಿಚಿಗನ್‌ನಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ : Viral: ತಾಂತ್ರಿಕ ದೋಷವೋ ವಂಚನೆಯೋ; ನಿಮ್ಮ ಇತ್ತೀಚಿನ ಸ್ವಿಗ್ಗಿ ಬಿಲ್ ನೋಡಿದ್ದೀರಾ?

ಎರಡು ವರ್ಷದ ಹೆಣ್ಣುಮಗು ಒಮ್ಮಿಂದೊಮ್ಮೆಲೇ ಮನೆಯಿಂದ ಕಾಣೆಯಾಗಿದೆ. ಅದರೊಂದಿಗೆ ಆ ಮನೆಯ ಎರಡು ಸಾಕುನಾಯಿಗಳೂ ಹೊರಟುಹೋಗಿವೆ. ಸಾಕಷ್ಟು ಗಂಟೆಗಳ ನಂತರ ಹುಡುಕುವವರ ತಂಡವೊಂದಕ್ಕೆ (Search Party) ಕೊನೆಗೂ ಆಕೆ ಕಂಡಾಗ… ಏನಾಶ್ಚರ್ಯ! ಮಗು ಕಾಡಿನ ಗಿಡಗಂಟೆಗಳ ನಡುವೆ ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿದೆ. ಒಂದು ನಾಯಿ ನೆಲಕ್ಕೊರಗಿ ಅವಳಿಗೆ ತಲೆದಿಂಬಾಗಿದೆ. ಇನ್ನೊಂದು ಕಾವಲು ಕಾಯುತ್ತಿದೆ. ‘ಇದೊಂದು ಅಸಾಧಾರಣ ಸಂಗತಿ’ ಎಂದು ಹುಡುಕಲು ಬಂದ ಪೊಲೀಸ್​ ಸಿಬ್ಬಂದಿ ಉದ್ಗರಿಸಿದ್ದಾರೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ತಂದೆಗೆ ಲಿವರ್​ ದಾನ ; ‘ನಿನ್ನ ಪಾದ ಸ್ಪರ್ಶಿಸಬೇಕು ಮಗಳೇ’

ಮಗು ಕಾಣೆಯಾದುದು ಗೊತ್ತಾದ ಕೂಡಲೇ ಅವಳ ಪಾಲಕರು ಪೊಲೀಸರ ಮೊರೆ ಹೋಗಿದ್ದಾರೆ. ಪೊಲೀಸರು. ಶ್ವಾನದಳ, ಅಷ್ಟೇ ಅಲ್ಲದೇ ಸುತ್ತಮುತ್ತಲ ಊರುಗಳ ಮಂದಿ ಹುಡುಕಾಟದ ತಂಡಗಳನ್ನು ಕಟ್ಟಿಕೊಂಡು ಸುತ್ತಲಿನ ನಿರ್ಜನ ಅಡವಿ ಪ್ರದೇಶಗಳಲ್ಲಿ ಅಲೆದಿದ್ದಾರೆ. ಇಂಥ ತಂಡಗಳ ಸದಸ್ಯರೊಬ್ಬರು ಆಕೆಯ ಮನೆಯಿಂದ 5 ಕಿಮಿ ಒಳಗಡೆಯೇ ಅದೃಷ್ಟವಶಾತ್ ಅವಳನ್ನು ಕಂಡಿದ್ದಾರೆ. ಕೂಡಲೇ ಅಲ್ಲಿಗೆ ಬಂದ ವೈದ್ಯಕೀಯ ತಂಡ ಅವಳನ್ನು ಪರೀಕ್ಷಿಸಿ ಆರೋಗ್ಯವಾಗಿದ್ದಾಳೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Viral Video: ಶಾಲಾಬಾಲಕಿಯರ ಬೀದಿಜಗಳ; ನಮ್ಮ ದೇಶ ಮುಂದುವರಿಯುತ್ತಿದೆ ಎಂದ ನೆಟ್ಟಿಗರು

ಈ ನಿಜ ಘಟನೆ ಫೇರಿ ಟೇಲ್​ನಲ್ಲಿ ನಡೆದ ದೃಶ್ಯದಂತೆ ಮನಸ್ಸಿನಲ್ಲಿ ಅಚ್ಚಾಗುವಂತಿದೆಯಲ್ಲವೆ? ಅಕಸ್ಮಾತ್​ ಈ ಪರಿಸ್ಥಿತಿಯಲ್ಲಿ ನಾಯಿಗಳು ಈಕೆಯೊಂದಿಗೆ ಇರದಿದ್ದರೆ ಏನಾಗುತ್ತಿತ್ತು? ಸದ್ಯದ ದಿನಮಾನಗಳಲ್ಲಿ ಇದನ್ನು ಊಹಿಸಿಕೊಳ್ಳಲೂ ಕಷ್ಟವೆನ್ನಿಸುತ್ತದೆ. ಏನೇ ಆಗಲಿ ಆ ನಾಯಿಗಳಿಂದಾಗಿ ಮಗು ಮನೆಗೆ ಮರಳುವಂತಾಯಿತು.

ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:00 pm, Fri, 22 September 23