“ನನ್ನ ಯೌವನವನ್ನು ನಾನು ಶಾಶ್ವತವಾಗಿ ಉಳಿಸಿಕೊಳ್ಳಲು ಬಯಸುತ್ತೇನೆ. ಆದ್ದರಿಂದ ತನ್ನ ರಕ್ತವನ್ನು ತಾನೇ ಕುಡಿಯುತ್ತಿದ್ದಾನೆ” ಎಂದು ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಫೇಮಸ್ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಹೇಳಿಕೊಂಡಿದ್ದಾರೆ. ಈಕೆಯ ವಿಚಿತ್ರ ಅಭ್ಯಾಸವನ್ನು ಕಂಡು ನೆಟ್ಟಿಗರು ಹಾಗೂ ಆಕೆಯ ಅಭಿಮಾನಿಗಳು ಫುಲ್ ಶಾಕ್ ಆಗಿ ಹೋಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಮಾಡೆಲ್ ಸೋಫಿಯಾ ಕ್ಲೆರಿಕಿ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಬರೋಬ್ಬರಿ 20 ಲಕ್ಷಕ್ಕಿಂತಲೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದಾರೆ.
ತನ್ನ ಮಾದಕ ಮೈಮಾಟದಿಂದಲೇ ಸೋಫಿಯಾ ಸೋಶಿಯಲ್ ಮೀಡಿಯಾಗಳಲ್ಲಿ ಸಖತ್ ಟ್ರೆಂಡ್ ಸೆಟ್ ಕ್ರಿಯೇಟ್ ಮಾಡಿದ್ದಾಳೆ. ಪ್ರತೀ ಬಾರಿ ಆಕೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡಿದಾಗ ಆಕೆಯ ಅಭಿಮಾನಿಗಳು “ಬ್ಯೂಟಿ ಸೀಕ್ರೇಟ್ ಏನು” ಎಂದು ಕಾಮೆಂಟ್ ಮಾಡುತ್ತಿದ್ದರು. ತನ್ನ ಅಭಿಮಾನಿಗಳ ಪ್ರಶ್ನೆಗೆ ಇತ್ತೀಚೆಗಷ್ಟೇ ಉತ್ತರ ನೀಡಿದ್ದು, ಆಕೆಯ ಉತ್ತರ ಕೇಳಿ ನೆಟ್ಟಿಗರು ಶಾಕ್ ಆಗಿದ್ದಾರೆ. “ವಯಸ್ಸಾದರೂ ಹಾಟ್ ಆಗಿ ಕಾಣಲು ನಾನು ನನ್ನ ರಕ್ತವನ್ನೇ ಕುಡಿಯುತ್ತೇನೆ” ಎಂದು ಸೋಫಿಯಾ ಹೇಳಿಕೊಂಡಿದ್ದಾಳೆ.
ಇದನ್ನೂ ಓದಿ: ಮೊದ್ಲು ಮದುವೆ ಆಮೇಲೆ ಓದು, 13 ವರ್ಷಕ್ಕೆ ಮದುವೆಗೆ ರೆಡಿಯಾದ ಬಾಲಕ;ವಿಡಿಯೋ ವೈರಲ್
“ನಾನು ನನ್ನ ರಕ್ತವನ್ನು ಜ್ಯೂಸ್ನೊಂದಿಗೆ ಬೆರೆಸಿ ಕುಡಿಯುತ್ತೇನೆ. ಅದಕ್ಕಾಗಿ ನಾನು ನನ್ನ ಕೆಲಸದ ನಿಮ್ಮಿತ್ತ ಎಲ್ಲಿಗಾದರೂ ಹೋಗಬೇಕಾದರೂ ಕೂಡ ನನ್ನ ಬ್ಯಾಗಿನಲ್ಲಿ ಟ್ಯೂಬ್ನಲ್ಲಿ ರಕ್ತ ಇರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿಕೊಂಡಿದ್ದಾಳೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ