ಮುಂಬೈ: ನಗರದಲ್ಲಿ ಮೊಮೊಸ್ (Momos) ವಿಚಾರವಾಗಿ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿರುವ ವಿಚಿತ್ರ ಘಟನೆ ನಡೆದಿದೆ. ಹೌದು. ನೀವು ಓದಿರುವುದು ಸರಿಯಾಗಿಯೇ ಇದೆ. ನಾವು ಹೇಳುತ್ತಿರುವುದು ಕೂಡ ಸರಿಯಾಗಿದೆ. ಟಿಬೆಟಿಯನ್-ನೇಪಾಳಿ ಚಾಟ್ ತಿಂಡಿ ನಗರದ ಪೊವೈ ಪ್ರದೇಶದಲ್ಲಿ ಮೊಮೊಸ್ ಮಾರಾಟ ಮಾಡುವ ಎರಡು ಗುಂಪುಗಳ ನಡುವೆ ಕಾದಾಟಕ್ಕೆ ಕಾರಣವಾದ ಸ್ಥಳವಾಗಿದೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಪೊವೈನ ಶಂಕರಾಚಾರ್ಯ ಮಾರ್ಗ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಕ್ಷುಲ್ಲಕ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಪರಸ್ಪರ ಲಾಠಿ ಪ್ರಹಾರದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ. ವಿಡಿಯೋದಲ್ಲಿ, ಜನರು, ಕಾರುಗಳು ರಸ್ತೆಯಲ್ಲಿ ಹಾದು ಹೋಗುತ್ತಿದ್ದರು ಎರಡು ಗುಂಪುಗಳು ಪರಸ್ಪರ ಲಾಠಿಯಿಂದ ಹೊಡೆದುಕೊಳ್ಳುವುದನ್ನು ವಿಡಿಯೋದಲ್ಲಿ ನೋಡಬಹುದು. ಸ್ಥಳಕ್ಕಾಗಮಿಸಿದ ಸ್ಥಳೀಯ ಪೊಲೀಸರು ಸುಮಾರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದು ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ;
ಈಜಿಪ್ಟಿನ ಪ್ರಸಿದ್ಧ ಯಾ ಮುಸ್ತಫಾ ಕವರ್ ಹಾಡಿಗೆ ಮುಂಬೈ ಪೊಲೀಸರ ಸುಮಧುರ ಬ್ಯಾಂಡ್; ವಾವ್ ಎಂದ ನೆಟ್ಟಿಗರು
ಎರಡು ತಿಂಗಳ ಹಸುಗೂಸನ್ನು ನಿರ್ದಯವಾಗಿ ಹೊಡೆದ ಕ್ರೂರಿ ಮಹಿಳೆ; ವಿಡಿಯೋ ವೈರಲ್