ಈಜಿಪ್ಟಿನ ಪ್ರಸಿದ್ಧ ಯಾ ಮುಸ್ತಫಾ ಕವರ್ ಹಾಡಿಗೆ ಮುಂಬೈ ಪೊಲೀಸರ ಸುಮಧುರ ಬ್ಯಾಂಡ್; ವಾವ್ ಎಂದ ನೆಟ್ಟಿಗರು
ಸದ್ಯ ವಿಡಿಯೋ ವೈರಲ್ ಆಗಿದ್ದು, ಜನರು ಸುಮಧುರವಾದ ವಾದ್ಯವನ್ನು ಇಷ್ಟಪಟ್ಟಿದ್ದಾರೆ. ಅತ್ಯುತ್ತಮವಾಗಿ ಅತ್ಯುತ್ತಮ! ವಿವಿಧ ವಾದ್ಯಗಳೊಂದಿಗೆ ಅವರ ಸಂಗೀತ ಕೌಶಲ್ಯಕ್ಕಾಗಿ ಮುಂಬೈ ಪೊಲೀಸರಿಗೆ ಸ್ಟ್ಯಾಂಡಿಂಗ್ ಚಪ್ಪಾಳೆ ಕೂಡ ನೆಟ್ಟಿಗರಿಂದ ಸಿಕ್ಕಿದೆ.
Viral Video: ಮುಂಬೈ ಪೊಲೀಸರ ಸಾಮಾಜಿಕ ಮಾಧ್ಯಮ ಖಾತೆಯೂ ಅಂತರ್ಜಾಲದಲ್ಲಿ ಕೆಲವು ಹಾಸ್ಯಮಯ ಮತ್ತು ಸಂಗೀತ ವಿಡಿಯೋಗಳನ್ನು ಹಂಚಿಕೊಳ್ಳುತ್ತೆ. ಕೇವಲ ತಮಾಷೆಯಷ್ಟೇ ಅಲ್ಲದೇ ಮುಂಬೈ ಪೊಲೀಸ್ ತನ್ನ ಸಂಗೀತದಿಂದ ಕೂಡ ಜನರನ್ನು ರಂಜಿಸುತ್ತದೆ. ಏಕೆಂದರೆ ಅದರ ಬ್ಯಾಂಡ್ ಆಗಾಗ್ಗ ಟ್ರೆಂಡಿಂಗ್ ಹಾಡುಗಳನ್ನು ತಮ್ಮ ಬಾಂಡ್ನ ಮೂಲಕ ನುಡಿಸುತ್ತಾರೆ. ಈಗ ಅಂತಹದೇ ಒಂದು ಹಾಡಿಗೆ ಬ್ಯಾಂಡ್ ನುಡಿಸಿದ್ದು, ವಿಡಿಯೋ ವೈರಲ್ ಆಗಿದೆ. ಮುಂಬೈ ಪೊಲೀಸ್ ಬ್ಯಾಂಡ್ ಖಾಕಿ ಸ್ಟುಡಿಯೋ ಸೋಮವಾರ ಈಜಿಪ್ಟಿನ ಪ್ರಸಿದ್ಧ ಯಾ ಮುಸ್ತಫಾ ಹಾಡಿಗೆ ಹೊಚ್ಚಹೊಸ ಸುಮಧುರ ವಾದ್ಯಗಳೊಂದಿಗೆ ನುಡಿಸಿರುವ ವಿಡಿಯೋ ಬಿಡುಗಡೆ ಮಾಡಿದೆ.
#KhakiStudio presents a ‘must’ watch rendition of ‘Ya Mustafa’ – an evergreen multilingual song from Egypt, first made popular in Europe by singer Bob Azzam.https://t.co/TxLCSadNia#MumbaiPoliceBand #MusicalMonday
— Mumbai Police (@MumbaiPolice) April 11, 2022
ಖಾಕಿ ಸ್ಟುಡಿಯೋದ ಸದಸ್ಯರು ಕ್ಲಾರಿನೆಟ್, ಸ್ಯಾಕ್ಸೋಫೋನ್, ಟ್ರಂಪೆಟ್ ಮತ್ತು ಕೊಳಲು, ಇತರ ವಾದ್ಯಗಳನ್ನು ಪ್ರದರ್ಶಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. ಯಾ ಮುಸ್ತಫಾ ಈಜಿಪ್ಟ್‌ನ ಪ್ರಸಿದ್ಧ ಬಹುಭಾಷಾ ಹಾಡಾಗಿದೆ. ಪ್ರಸಿದ್ಧ ಈಜಿಪ್ಟ್ ಸಂಗೀತಗಾರ ಮೊಹಮ್ಮದ್ ಫೌಜಿ ಅವರು ಈಜಿಪ್ಟ್ ಚಲನಚಿತ್ರದಲ್ಲಿ ಕಾಣಿಸಿಕೊಳ್ಳಲು ಸಂಯೋಜಿಸಿದ್ದಾರೆ. ನಂತರ ಅದರ ವಿಶಿಷ್ಟ ಮತ್ತು ಆಕರ್ಷಕದಿಂದ ವಿವಿಧ ಭಾಷೆಗಳಲ್ಲಿ ರೆಕಾರ್ಡ್ ಮಾಡಲಾಗಿದೆ. ವಿಡಂಬನೆಗಳು ಸೇರಿದಂತೆ ಹಲವಾರು ವಿಭಿನ್ನ ಆವೃತ್ತಿಗಳನ್ನು ರೆಕಾರ್ಡ್ ಮಾಡಲಾಗಿದೆ. 1960 ರಲ್ಲಿ ಫ್ರಾನ್ಸ್‌ನಲ್ಲಿ ಬಿಡುಗಡೆ ಮಾಡಿದ ಗಾಯಕ ಬಾಬ್ ಅಜ್ಜಮ್ ಅವರ ಸಹಾಯದಿಂದ ಈ ಹಾಡು ಮೊದಲು ಯುರೋಪ್‌ನಲ್ಲಿ ಜನಪ್ರಿಯವಾಯಿತು.
ಸದ್ಯ ವಿಡಿಯೋ ವೈರಲ್ ಆಗಿದ್ದು, ಜನರು ಸುಮಧುರವಾದ ವಾದ್ಯವನ್ನು ಇಷ್ಟಪಟ್ಟಿದ್ದಾರೆ. ಅತ್ಯುತ್ತಮವಾಗಿ ಅತ್ಯುತ್ತಮ! ವಿವಿಧ ವಾದ್ಯಗಳೊಂದಿಗೆ ಅವರ ಸಂಗೀತ ಕೌಶಲ್ಯಕ್ಕಾಗಿ ಮುಂಬೈ ಪೊಲೀಸರಿಗೆ ಸ್ಟ್ಯಾಂಡಿಂಗ್ ಚಪ್ಪಾಳೆ ಕೂಡ ನೆಟ್ಟಿಗರಿಂದ ಸಿಕ್ಕಿದೆ. ಒಬ್ಬರು ಬಳಕೆದಾರರು ಅದ್ಭುತ ಅಭಿನಯ, ಈ ಸುಮಧುರ ಹಾಡನ್ನು ಕೇಳಿ ಸಂತೋಷವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ:
ಎರಡು ತಿಂಗಳ ಹಸುಗೂಸನ್ನು ನಿರ್ದಯವಾಗಿ ಹೊಡೆದ ಕ್ರೂರಿ ಮಹಿಳೆ; ವಿಡಿಯೋ ವೈರಲ್
ಕೋಮು ಸಾಮರಸ್ಯ ಕದಡಲು ಪೊಲೀಸ್ ವೈಫಲ್ಯ ಕಾರಣವಾ? ಪೊಲೀಸರು ತಡವಾಗಿ ಎಚ್ಚೆತ್ತರಾ? ಟಿವಿ 9 ಡಿಜಿಟಲ್ ಲೈವ್ನಲ್ಲಿ ಚರ್ಚೆ
Published On - 3:49 pm, Tue, 12 April 22