ಈ ಸ್ವಾರ್ಥ ತುಂಬಿದ ಪ್ರಪಂಚದಲ್ಲಿ ನಡೆಯುವ ಕೆಲವೊಂದು ಘಟನೆಗಳನ್ನು ನೋಡಿದಾಗ ಮಾನವೀಯತೆ ನಿಜಕ್ಕೂ ಸತ್ತು ಹೋಗಿದೆ ಎಂದು ಅನಿಸಿ ಬಿಡುತ್ತದೆ. ಏಕೆಂದರೆ ಕೆಲವು ಜನರು ಕೆಲವೊಂದು ಬಾರಿ ಕಟುವಾಗಿ ವರ್ತಿಸುತ್ತಾರೆ. ಇಂತಹದೊಂದು ಘಟನೆ ಇದೀಗ ನಡೆದಿದ್ದು, ತನ್ನ ಮೇಲೆ ಮಂಗಗಳು ದಾಳಿ ನಡೆಸುತ್ತಿರುವಾಗ ಅಳುತ್ತಾ ಯಾರಾದ್ರೂ ಸಹಾಯ ಮಾಡಿ ಎಂದು ಪುಟ್ಟ ಬಾಲಕನೊಬ್ಬ ಗೋಳಾಡಿದರೂ ಅಲ್ಲಿದ್ದ ಮೂರು ನಾಲ್ಕು ಮಹಿಳೆಯರು ಬಾಲಕನ ಸಹಾಯಕ್ಕೂ ಬಾರದೇ ಕ್ಯಾರೇ ಅನ್ನದೇ ಹೋಗಿದ್ದಾರೆ. ಈ ಹೆಂಗಸರ ಅಮಾನವೀಯ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಈ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದ್ದು, ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 5 ವರ್ಷ ವಯಸ್ಸಿನ ಬಾಲಕನ ಮೇಲೆ ಮಂಗಗಳ ಗುಂಪೊಂದು ದಾಳಿ ನಡೆಸಿದೆ. ಮಂಗಗಳು ದಾಳಿ ನಡೆಸುತ್ತಿದ್ದಂತೆ ಅಲ್ಲಿದ್ದ ಮೂರು ನಾಲ್ಕು ಹೆಂಗಸರು ಮಗುವಿನ ಸಹಾಯಕ್ಕೂ ಬಾರದೇ ಎಸ್ಕೇಪ್ ಆಗಿದ್ದು, ನಂತರ ಸ್ಥಳೀಯ ವ್ಯಕ್ತಿಯೊಬ್ಬರು ಓಡಿ ಬಂದು ಬಾಲಕನನ್ನು ರಕ್ಷಣೆ ಮಾಡಿದ್ದಾರೆ. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
Monkey terror in Mathura, monkeys attacked a 5-year-old innocent child, local people ran to save the child’s life, live incident captured on CCTV
pic.twitter.com/T7u860Kk6J— Ghar Ke Kalesh (@gharkekalesh) July 14, 2024
ಈ ಕುರಿತ ಪೋಸ್ಟ್ ಒಂದನ್ನು gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್ ವಿಡಿಯೋದಲ್ಲಿ ಬೀದಿಯಲ್ಲಿ ಓಡಿ ಬರುತ್ತಿದ್ದ ಬಾಲಕನ ಮೇಲೆ ಮಂಗಗಳು ದಾಳಿ ನಡೆಸುವಂತಹ ದೃಶ್ಯವನ್ನು ಕಾಣಬಹುದು. ಬಾಲಕ ಸಹಾಯಕ್ಕಾಗಿ ಕಿರುಚಿದಾಗ ಅಲ್ಲಿದ್ದ ಮೂವರು ಹೆಂಗಸರು ಆತನ ಸಹಾಯಕ್ಕೂ ಬಾರದೇ ಮಾನವೀಯತೆಯನ್ನೂ ಮರೆತು ಅಲ್ಲಿಂದ ಸೀದಾ ಹೋಗಿದ್ದಾರೆ. ನಂತರ ಸ್ಥಳೀಯ ವ್ಯಕ್ತಿಯೊಬ್ಬರು ಓಡಿ ಬಂದು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
ಮತ್ತಷ್ಟು ಓದಿ: Viral Video: ಫೋಟೋ ಶೂಟ್ ವೇಳೆ ಬಂದ ರೈಲು, ಪ್ರಾಣ ಉಳಿಸಿಕೊಳ್ಳಲು ಕಂದಕಕ್ಕೆ ಹಾರಿದ ದಂಪತಿ; ವಿಡಿಯೋ ವೈರಲ್
ಜುಲೈ 14 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನೋಡಿ ಆ ಹೆಂಗಸರು ಅಷ್ಟು ಹತ್ತಿರದಲ್ಲಿದ್ದರೂ ಮಗುವಿಗೆ ಸಹಾಯ ಮಾಡಲಿಲ್ಲʼ ಎಂದು ಕಿಡಿ ಕಾರಿದ್ದಾರೆ. ಇನ್ನೂ ಅನೇಕರು ಮಗುವಿನ ಸಹಾಯಕ್ಕೆ ಧಾವಿಸದ ಆ ಹೆಂಗಸರ ನಡೆಗೆ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ