ಕಸದ ತೊಟ್ಟಿಯಿಂದ ಬಿಯರ್ ಬಾಟಲಿ ಹೊರತೆಗೆದು ಕುಡಿದ ಮಂಗ; ವಿಡಿಯೋ ವೈರಲ್

ಮಂಗಕ್ಕೆ ಹೆಂಡ ಕುಡಿಸಿದರೆ ಪರಿಸ್ಥಿತಿ ಏನಾಗಬಹುದು? ಮಂಗಗಳು ಆಲ್ಕೋಹಾಲ್ ಸೇವಿಸುವುದನ್ನು ಗುರುತಿಸಿದ ನಿದರ್ಶನಗಳು ಅಪರೂಪ ಮತ್ತು ಅಷ್ಟೇ ಆತಂಕಕಾರಿ. ತ್ಯಾಜ್ಯ ನಿರ್ವಹಣೆ ಮತ್ತು ವಿಲೇವಾರಿಗೆ ಸಂಬಂಧಿಸಿದಂತೆ ಜನರು ಹೆಚ್ಚು ಜಾಗರೂಕರಾಗಿರಬೇಕೆಂಬುದನ್ನು ಈ ವಿಡಿಯೋ ಸೂಚಿಸುತ್ತದೆ. ನಾವು ಎಸೆಯುವ ಹಾನಿಕಾರಕ ವಸ್ತುಗಳನ್ನು ಕಾಡುಪ್ರಾಣಿಗಳು ಸೇವಿಸುವ ಅಪಾಯವಿರುತ್ತದೆ.

ಕಸದ ತೊಟ್ಟಿಯಿಂದ ಬಿಯರ್ ಬಾಟಲಿ ಹೊರತೆಗೆದು ಕುಡಿದ ಮಂಗ; ವಿಡಿಯೋ ವೈರಲ್
ಬಿಯರ್ ಬಾಟಲಿ ಹೊರತೆಗೆದು ಕುಡಿದ ಮಂಗ

Updated on: Oct 14, 2024 | 10:07 PM

ನವದೆಹಲಿ: ಬ್ರೆಜಿಲ್‌ನ ವಿಡಿಯೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದ್ದು, ಕೋತಿಯೊಂದು ಕಸದ ಬುಟ್ಟಿಯಿಂದ ಬಿಯರ್ ಬಾಟಲಿಯನ್ನು ಹೊರತೆಗೆದು ಅದರಲ್ಲಿ ಉಳಿದಿದ್ದ ಆಲ್ಕೋಹಾಲ್‌ನ ಕೆಲವು ಹನಿಗಳನ್ನು ಹೀರಲು ಪ್ರಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಸೆರೆಹಿಡಿಯಲಾಗಿದೆ. ಕಸದ ತೊಟ್ಟಿಯ ಮೇಲೆ ಕುಳಿತಿರುವ ಎರಡು ಕೋತಿಗಳಈ ವಿಡಿಯೋ ವೈರಲ್ ಆಗಿದೆ ಅಷ್ಟೇ ಆತಂಕಕಾರಿಯಾಗಿದೆ. ಒಂದು ಕೋತಿ ಬಿಯರ್ ಬಾಟಲಿಯನ್ನು ತನ್ನ ಕೈಯಲ್ಲಿ ಹಿಡಿದುಕೊಂಡು ಬಿಯರ್ ಅನ್ನು ಸೇವಿಸಲು ಪ್ರಯತ್ನಿಸುತ್ತಿದೆ.

ಬ್ರೆಜಿಲ್‌ನ ಪರಾನಾದಲ್ಲಿ ನಡೆದ ಈ ಘಟನೆಯಲ್ಲಿ ಎರಡು ಮಂಗಗಳು ನಿರ್ಜನ ಲೇನ್‌ನ ಕಸದ ತೊಟ್ಟಿಯ ಮೇಲೆ ಕುಳಿತಿರುವುದನ್ನು ನೋಡಬಹುದು. ಅದರಲ್ಲಿ ಒಂದು ಆಲ್ಕೋಹಾಲ್ ಬಾಟಲಿಯಿಂದ ಸ್ವಲ್ಪ ಬಿಯರ್ ಹನಿಗಳನ್ನು ಕುಡಿಯುತ್ತಿರುವುದನ್ನು ತೋರಿಸುತ್ತಿದೆ.


ಇದನ್ನೂ ಓದಿ: ರಾಮಲೀಲಾ ವೇಳೆ ವೇದಿಕೆಯಲ್ಲೇ ರಾಮ -ರಾವಣನ ಪಾತ್ರ ಮಾಡುತ್ತಿದ್ದ ನಟರ ಗಲಾಟೆ; ವಿಡಿಯೋ ವೈರಲ್

ಇದೇ ರೀತಿಯ ಘಟನೆಯು ಈ ಹಿಂದೆ ಭಾರತದಲ್ಲಿ ಕಂಡುಬಂದಿತ್ತು. ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ಕೋತಿಗಳ ಹಾವಳಿ ನಡೆದಿತ್ತು. ಕೋತಿಯೊಂದು ಮದ್ಯದ ಅಂಗಡಿಗೆ ನುಗ್ಗಿ ಬಿಯರ್ ಕುಡಿಯುತ್ತಿರುವುದು ಕ್ಯಾಮರಾದಲ್ಲಿ ಸೆರೆಯಾಗಿತ್ತು. 2022 ರಲ್ಲಿ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದ ವೀಡಿಯೊದಲ್ಲಿ, ಕೋತಿಯು ಬಿಯರ್ ಕ್ಯಾನ್‌ನಿಂದ ಮದ್ಯಪಾನ ಆಲ್ಕೋಹಾಲ್ ಕುಡಿಯುತ್ತಿರುವುದು ಕಂಡುಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ