Video: ವಿಜಯದಶಮಿಯಂದು ಪತಿ ಮತ್ತು ಅತ್ತೆಯ ಪ್ರತಿಕೃತಿ ಸುಟ್ಟು ಹಾಕಿದ ಮಹಿಳೆ
ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ದಸರಾ ದಿನದಂದು ಪ್ರಿಯಾಂಕಾ ಎಂಬ ಮಹಿಳೆ ರಾವಣನ ಬದಲಿಗೆ ತನ್ನ ಪತಿ ಹಾಗೂ ಅತ್ತೆಯ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ. ಇದಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾಳೆ.
ಉತ್ತರ ಪ್ರದೇಶ: ವಿಜಯದಶಮಿಯ ದಿನದಂದು ರಾವಣನ ಪ್ರತಿಕೃತಿಯನ್ನು ಸುಡಲಾಗುತ್ತದೆ. ಆದರೆ ಇಲೊಬ್ಬಳು ಮಹಿಳೆ ವಿಜಯದಶಮಿಯಂದು ತನ್ನ ಗಂಡ ಹಾಗೂ ಅತ್ತೆಯ ಪ್ರತಿಕೃತಿಯನ್ನು ಮಾಡಿ ಸುಟ್ಟು ಹಾಕಿದ್ದಾಳೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉತ್ತರ ಪ್ರದೇಶದ ಹಮೀರ್‌ಪುರ ಜಿಲ್ಲೆಯಲ್ಲಿ ದಸರಾ ದಿನದಂದು ಪ್ರಿಯಾಂಕಾ ಎಂಬ ಮಹಿಳೆ ರಾವಣನ ಬದಲಿಗೆ ತನ್ನ ಪತಿ, ಅತ್ತೆಯ ಹಾಗೂ ಪ್ರತಿಕೃತಿಗಳನ್ನು ಸುಟ್ಟುಹಾಕಿದ್ದಾರೆ. ಪ್ರಿಯಾಂಕಾ 14 ವರ್ಷಗಳ ಹಿಂದೆ ಸಂಜೀವ್ ದೀಕ್ಷಿತ್ ಅವರನ್ನು ಮದುವೆಯಾಗಿದ್ದರು. ನಂತರ ಆಕೆಯ ಪತಿಯು ತನ್ನ ಸಹೋದರಿಯ ಸ್ನೇಹಿತೆ ಪುಷ್ಪಾಂಜಲಿಯೊಂದಿಗೆ ಮದುವೆಗೆ ಮುಂಚೆಯೇ ಅಕ್ರಮ ಸಂಬಂಧ ಹೊಂದಿದ್ದನು ಎಂದು ತಿಳಿದುಬಂದಿದೆ.
ಮದುವೆಯಾದ ಕೂಡಲೇ ಸಂಜೀವ್ ಪ್ರಿಯಾಂಕಳನ್ನು ತೊರೆದು ಪುಷ್ಪಾಂಜಲಿಯೊಂದಿಗೆ ವಾಸಿಸಲು ಆರಂಭಿಸಿದ್ದ, ಇದನ್ನು ಪ್ರಿಯಾಂಕಾ ಪ್ರಶ್ನಿಸಿದಾಗ ಚಿಕ್ಕಮ್ಮ, ಚಿಕ್ಕಪ್ಪ, ಅತ್ತೆ, ಪತಿ ಸೇರಿ ಪ್ರಿಯಾಂಕಾ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ದಸರಾ ಹಬ್ಬದಂದು ಪ್ರಿಯಾಂಕಾ ತನ್ನ ಗಂಡನ ಮನೆ ಮುಂದೆ ತನ್ನ ಪತಿ ಹಾಗೂ ಮನೆಯವರೆಲ್ಲರ ಪ್ರತಿಕೃತಿಯನ್ನು ಸುಟ್ಟು ಹಾಕಿದ್ದಾಳೆ. ಈ ರೀತಿ ವಿನೂತನವಾಗಿ ಪ್ರತಿಭಟಿಸಿದ್ದಾಳೆ.
ಇದನ್ನೂ ಓದಿ: ರಾಮಲೀಲಾ ವೇಳೆ ವೇದಿಕೆಯಲ್ಲೇ ರಾಮ -ರಾವಣನ ಪಾತ್ರ ಮಾಡುತ್ತಿದ್ದ ನಟರ ಗಲಾಟೆ; ವಿಡಿಯೋ ವೈರಲ್
ಇದಲ್ಲದೇ ತನಗೆ ನ್ಯಾಯ ಕೊಡಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿದ್ದಾಳೆ. ಸರಕಾರ ತನಗೆ ನ್ಯಾಯ ಒದಗಿಸಿ ಪತಿ ಹಾಗೂ ಅತ್ತೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:01 pm, Tue, 15 October 24