Viral : ಎಷ್ಟು ಮುದ್ದಾಗಿದೆ ವಿದ್ಯಾರ್ಥಿಯ ಕೈ ಬರಹ, ನೆಟ್ಟಿಗರು ಫುಲ್ ಫಿದಾ

ನಾವೆಲ್ಲರೂ ಸಣ್ಣವರಿದ್ದಾಗ ಕೈಬರಹ ಸುಂದರವಾಗಿಲ್ಲ ಎಂದು ಎಷ್ಟೋ ಸಲ ಶಿಕ್ಷಕರ ಕೈಯಲ್ಲಿ ಬೈಗುಳ ತಿಂದಿರುತ್ತೇವೆ. ಈ ಸೋಶಿಯಲ್ ಮೀಡಿಯಾದಲ್ಲಿ ಕೂಡ ಮುತ್ತು ಪೋಣಿಸಿರುವ ಅಕ್ಷರಗಳ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ಬರವಣಿಗೆಯೂ ವೈರಲ್ ಆಗಿದೆ. ಮುತ್ತು ಪೋಣಿಸಿರುವಂತೆ ಕೈಬರಹವನ್ನು ಕಂಡು ನೆಟ್ಟಿಗರಿಂದ ಮೆಚ್ಚುಗೆಯ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

Viral : ಎಷ್ಟು ಮುದ್ದಾಗಿದೆ ವಿದ್ಯಾರ್ಥಿಯ ಕೈ ಬರಹ, ನೆಟ್ಟಿಗರು ಫುಲ್ ಫಿದಾ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 6:19 PM

ಮಕ್ಕಳಿಗೆ ಚಿಕ್ಕದಿನಿಂದಲೇ ಶಾಲೆಯಲ್ಲಿ ಅಕ್ಷರಭ್ಯಾಸ, ಬರವಣಿಗೆಯ ಶಿಕ್ಷಕರು ತಿಳಿಹೇಳುತ್ತಲೇ ಇರುತ್ತಾರೆ. ಮಕ್ಕಳ ಅಕ್ಷರ ಚೆನ್ನಾಗಿರದಿದ್ದರೆ ಇದೇನು ಕಾಗೆ ಕಾಲು, ಗುಬ್ಬಿ ಕಾಲಿನಂತೆ ಎಂದು ಹೇಳುವುದನ್ನು ಕೇಳಿರಬಹುದು. ಬಹುತೇಕರು ಸಣ್ಣವರಿದ್ದಾಗ ಶಿಕ್ಷಕರಲ್ಲಿ ಕೈ ಬರಹ ಚೆನ್ನಾಗಿಲ್ಲವೆಂದೇ ಎಷ್ಟೋ ಸಲ ಬೈಗುಳ ತಿಂದಿರುತ್ತಾರೆ. ಆದರೆ ಇಲ್ಲೊಬ್ಬ ವಿದ್ಯಾರ್ಥಿಯ ಉತ್ತರ ಪತ್ರಿಕೆಯ ವಿದ್ಯಾರ್ಥಿಯ ಬರಹವು ಮುತ್ತು ಪೋಣಿಸಿದಂತೆ ಇದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ವಿದ್ಯಾರ್ಥಿ ಬರವಣಿಗೆಯ ಪೋಸ್ಟ್ ವೊಂದು ವೈರಲ್ ಆಗುತ್ತಿದ್ದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ವಿಡಿಯೋದಲ್ಲಿ ವಿದ್ಯಾರ್ಥಿಯೊಬ್ಬನ ಉತ್ತರ ಪತ್ರಿಕೆಯಲ್ಲಿ ಮುದ್ದಾದ ಅಕ್ಷರಗಳನ್ನು ನೋಡಬಹುದು. ತನ್ನ ಉತ್ತರಪತ್ರಿಕೆಯನ್ನು ಕ್ಯಾಲಿಗ್ರಫಿಯಲ್ಲಿ ಬರೆದಿದ್ದಾನೆ. ಇದನ್ನು ಕಂಪ್ಯೂಟರ್‌ನಿಂದ ಪ್ರಿಂಟ್ ತೆಗೆದಿರುವ ಆಗಿದೆ. ಈ ಪೋಸ್ಟ್ ನೊಂದಿಗೆ ‘ಯಾರಿಗೆ ತುಂಬಾ ಸಮಯವಿದೆ?’ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ಪಾಕಿಸ್ತಾನದ ಪರಚಿನಾರ್ ಜಿಲ್ಲೆಯ ಕುರ್ರಂ ಶಾಲೆಯ ವಿದ್ಯಾರ್ಥಿ ಎನ್ನಲಾಗಿದ್ದು ಈ ಉತ್ತರ ಪತ್ರಿಕೆಯಲ್ಲಿನ ಬರವಣಿಯನ್ನು ಒಮ್ಮೆ ನೋಡಿದರೆ ಸಾಲದು ಎಂದೆನಿಸಿದರೆ ಅಚ್ಚರಿ ಪಡಬೇಕಿಲ್ಲ. ಹೌದು, ಉತ್ತರಗಳ ಹೆಡ್‌ಲೈನ್ ಮತ್ತು ಉತ್ತರ ಸಂಖ್ಯೆಯನ್ನು ಸುಂದರವಾಗಿ ಹೈಲೈಟ್ ಮಾಡಿದ್ದು, ನೋಡುವುದಕ್ಕೂ ಮುಂದಾಗಿದೆ. ಈ ಪೋಸ್ಟನ್ನು ಹದಿಮೂರು ಮಿಲಿಯನ್ ಗೂ ಅಧಿಕ ಮಂದಿ ವೀಕ್ಷಿಸಿದ್ದಾರೆ.

ಇದನ್ನೂ ಓದಿ; ಆಭರಣ ಕಳಚುತ್ತಾ, ಲಿಪ್​​ ಲಾಕ್​​ ಮಾಡುತ್ತಾ ಫಸ್ಟ್ ನೈಟ್ ವಿಡಿಯೋ ಹಂಚಿಕೊಂಡ ನವಜೋಡಿಗಳು

ಅದಲ್ಲದೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ನೆಟ್ಟಿಗರೊಬ್ಬರು, ಅಕ್ಷರವು ಮುತ್ತು ಪೋಣಿಸಿದಂತೆ ಇದೆ ಎಂದಿದ್ದಾರೆ. ಮತ್ತೊಬ್ಬರು, ‘ಚಲಿಸುವ ಮುದ್ರಣ ಯಂತ್ರದಂತೆ ತೋರುತ್ತಿದೆ, ಪ್ರತಿ ತರಗತಿಯಲ್ಲಿ ಅಂತಹ ವಿದ್ಯಾರ್ಥಿ ಇರುತ್ತಾನೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು, ‘ಅವನು ವಿದ್ಯಾರ್ಥಿಯೋ ಅಥವಾ ಮುದ್ರಕನೋ?, ಅವರ ಉತ್ತಮ ಕೈಬರಹಕ್ಕಾಗಿ 10 ಅಂಕಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ ‘ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಆನೆಗಳು ಭಾವುಕ ಜೀವಿಗಳು ಅಂತ ಅರಣ್ಯಾಧಿಕಾರಿ ಹೇಳಿದ್ದು ಶತ ಪ್ರತಿಶತ ಸತ್ಯ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?