Viral : ಶರೀಫಜ್ಜರ ಮಾತನ್ನು ಮನುಷ್ಯರೇ ಕೇಳಲಿಲ್ಲ ಇನ್ನು ಕೋತಿ ಕೇಳೀತೇ? ಅಂತೂ ಮನುಷ್ಯರಷ್ಟೇ ಅಲ್ಲ ಕೋತಿಗಳು ಅಮಲೇರುವುದನ್ನು ರೂಢಿಸಿಕೊಳ್ಳುತ್ತಿವೆ. ಇನ್ನು ಏನು ಗತಿ? ಉತ್ತರ ಪ್ರದೇಶದ ರಾಯ್‌ಬರೇಲಿಯ ಮದ್ಯದಂಗಡಿಯೊಂದರಲ್ಲಿ ಈ ಕೋತಿಯ ಕಾಟ ಹೆಚ್ಚಾಗಿದೆ. ಅಂಗಡಿಗೆ ಬಂದ ಗ್ರಾಹಕರ ಕೈಯಿಂದ ಬಾಟಲಿಯನ್ನು ಕಸಿದುಕೊಂಡು ಹೋಗುವುದಲ್ಲದೆ ಗಟಗಟನೆ ಕುಡಿಯಲು ಆರಂಭಿಸಿದೆ. ಅಂಗಡಿಯ ಮಾಲೀಕರಿಗೆ ಇದು ದೊಡ್ಡ ಚಿಂತೆಯಾಗಿದೆ. ಅನುರಾಗ ಮಿಶ್ರಾ ಈ ವಿಡಿಯೋ ಟ್ವೀಟ್ ಮಾಡಿದ್ದಾರೆ.
रायबरेली में बंदर का शराब पीने का वीडियो हुआ वायरल जो शराब की दुकान में आने वाले लोगो से शराब छीन लेता है और गटक जाता है। pic.twitter.com/We8qaAY4pi
ಇದನ್ನೂ ಓದಿ— Anurag Mishra (@AnuragM27306258) October 30, 2022
ಈ ಕೋತಿಯ ಹಾವಳಿಯಿಂದ ಅಂಗಡಿ ಮಾಲೀಕರು ಗ್ರಾಹಕರನ್ನು ಕಳೆದುಕೊಳ್ಳುತ್ತಿದ್ದಾರೆ. ಆದಷ್ಟು ಬೇಗ ಈ ಕೋತಿಯನ್ನು ಅರಣ್ಯಕ್ಕೆ ಬಿಡಬೇಕೆಂದು ಅಧಿಕಾರಿಗಳಲ್ಲಿ ಕೇಳಿಕೊಂಡಿದ್ದಾರೆ ಕೂಡ.
ಕೋತಿಗಳಿಗೂ ಮದ್ಯದ ರುಚಿ ಹತ್ತಿದರೆ ಏನು ಗತಿ ಎಂದು ನೆಟ್ಟಿಗರು ಕಳವಳಕ್ಕೆ ಈಡಾಗಿದ್ದಾರೆ. ಹಾಗೆಯೇ ತಮಾಷೆಯನ್ನೂ ಮಾಡಿದ್ದಾರೆ. ಕಲಿಯುಗದ ಕುಡುಕ ಕೋತಿ ಎಂದಿದ್ದಾರೆ ಒಬ್ಬರು. ಅದಕ್ಕೆ ಮದ್ಯ ತುಟ್ಟಿಯಾಗ್ತಿದೆ ಎಂದಿದ್ದಾರೆ ಇನ್ನೊಬ್ಬರು.
ಶರೀಫಜ್ಜಾ ಸ್ವಲ್ಪ ಬುದ್ಧಿ ಕೊಡಪ್ಪಾ.
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 1:45 pm, Wed, 2 November 22