ಸಾಮಾನ್ಯವಾಗಿ ಹೊಟೆಲ್ಗಳಲ್ಲಿ ಪಾತ್ರೆ ತೊಳೆದು, ಕಸಗುಡಿಸಿ, ಅಡುಗೆ ಕೋಣೆಯನ್ನು ಕ್ಲೀನ್ ಮಾಡುವ ಕೆಲಸಗಾರರನ್ನು ನೀವು ನೋಡಿಯೇ ಇರ್ತೀರಿ. ಅವರನ್ನು ನೋಡಿರುವ ಈ ಕೋತಿ ಪಾತ್ರೆ ತೊಳೆಯುವ ಸಾಹಸಕ್ಕೆ ಕೈ ಹಾಕಿದೆ. ನೀರಿನಲ್ಲಿ ಪಾತ್ರೆಗಳನ್ನೆಲ್ಲಾ ಅದ್ದಿ ತೊಳೆದು ಬದಿಗಿಡುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಈ ಕೋತಿಯ ಚಾಣಾಕ್ಷತನವನ್ನು ಮೆಚ್ಚಿಕೊಂಡಿದ್ದಾರೆ. ಮನುಷ್ಯರನ್ನು ನೋಡಿಕೊಂಡು ಕೋತಿಯೂ ಕೆಲಸವನ್ನು ಕಲಿಯುತ್ತಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
ವೈರಲ್ ಆಗಿರುವ ವಿಡಿಯೊದಲ್ಲಿ ಕೋತಿಯು ಪಾತ್ರೆ ತೊಳೆಯುತ್ತಿರುವುದನ್ನು ನೋಡಬಹುದು. ಈ ಬುದ್ಧಿವಂತ ಕೋತಿಯನ್ನು ಕಂಡು ಜನರು ಬೆರಗಾಗಿ ನೋಡಿದ್ದಾರೆ. ಪಾತ್ರೆ ತೊಳೆಯುತ್ತಿರುವ ಕೋತಿಯ ಶೈಲಿಯು ವಿಶಿಷ್ಟವಾಗಿದೆ. ಪಾತ್ರೆ ತೊಳೆದ ಬಳಿಕ ಪಾತ್ರೆಯಲ್ಲಿ ಕೊಳೆಗಳು ಹಾಗೆಯೇ ಇದೆಯೇ ಎಂದು ಪರಿಶೀಲಿಸಿ ಎಂಬ ಪ್ರತಿಕ್ರಿಯೆಗಳು ಕೇಳಿ ಬಂದಿವೆ.
अरे गजब! pic.twitter.com/QStH8eDWgL
— पनौति (@panauti96) October 23, 2021
ಮನುಷ್ಯರಂತೆಯೇ ಪಾತ್ರೆ ತೊಳೆಯುತ್ತಿರುವ ಕೋತಿಯ ವಿಡಿಯೋ ಇದೀಗ ಫುಲ್ ವೈರಲ್ ಆಗಿದೆ. ವಿಡಿಯೊವನ್ನು ಅಕ್ಟೋಬರ್ 23ರಂದು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ವಿಡಿಯೊ ನೆಟ್ಟಿಗರಿಗೆ ತುಂಬಾ ಇಷ್ಟವಾಗಿದೆ. ತಮ್ಮ ಅನಿಸಿಕೆಗಳನ್ನು ಕಾಮೆಂಟ್ ವಿಭಾಗದಲ್ಲಿ ಹಂಚಿಕೊಂಡ ನೆಟ್ಟಿಗರಲ್ಲಿ ಕೆಲವರು ತಮಾಷೆ ಮಾಡಿ ನಕ್ಕಿದ್ದಾರೆ. ಇನ್ನು ಕೆಲವರು ನಗುವ ಎಮೋಜಿಗಳನ್ನು ಕಳುಹಿಸುವ ಮೂಲಕ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:
Viral Video: ಚಲಿಸುತ್ತಿರುವ ರೈಲು ಹತ್ತಲು ಹೋಗಿ ಜಾರಿ ಬಿದ್ದ ಮಹಿಳೆಯನ್ನು ಪ್ರಾಣಾಪಾಯದಿಂದ ರಕ್ಷಿಸಿದ ಕಾನ್ಸ್ಟೇಬಲ್
Viral Video: ಬೆಂಗಳೂರು ಏರ್ಪೋರ್ಟ್ನಲ್ಲಿ ಕಂಡ ಸೈನಿಕರಿಗೆ ಸಲ್ಯೂಟ್ ಮಾಡಿದ 4 ವರ್ಷದ ಬಾಲಕ; ವಿಡಿಯೋ ವೈರಲ್