Viral Video : ಈ ಮಂಡೇ ಬ್ಲ್ಯೂಸ್ ಓಡಿಸಲು ಇದಕ್ಕಿಂತ ಮನಮೋಹಕವಾದ ವಿಡಿಯೋ ಬೇಕೆ? ಈ ವಿಡಿಯೋ 2019ರಲ್ಲಿ ಚಿತ್ರೀಕರಣಗೊಂಡಿದ್ದು. ಅಮ್ಮ ನಾರ್ಪೋಲ್ ಮತ್ತು ಮರಿ ನಾರ್ಗೆಲ್ಗೆ ಪಿಯಾನೋ ಧ್ವನಿ ಕೇಳಿದೆ. ಹಾಗೇ ಹುಡುಕಿಕೊಂಡು ಬಂದಾಗ ಈ ಕಲಾವಿದರು ಸಿಕ್ಕಿದ್ದಾರೆ. ಪಿಯಾನೊ ಕೇಳುತ್ತ ಕೇಳುತ್ತ ಅವುಗಳ ಆ ಸಂತೋಷವನ್ನ ಹೇಗೆ ವ್ಯಕ್ತಪಡಿಸುತ್ತಿದ್ದಾವೆ ನೋಡಿ. 5,000 ಜನರು ಈ ವಿಡಿಯೋ ನೋಡಿದ್ದಾರೆ. 400 ಜನರು ಇಷ್ಟಪಟ್ಟಿದ್ಧಾರೆ.
Piano for mother and baby elephant ❤️ video – Paul Barton Thailand pic.twitter.com/jCqrlJ7ytk
ಇದನ್ನೂ ಓದಿ— Supriya Sahu IAS (@supriyasahuias) November 20, 2022
ಕಲಾವಿದರಿಗೆ ಉಮೇದು ಬಂದು ಈ ಅಮ್ಮಮಗುವಿಗಾಗಿ ಮತ್ತಷ್ಟು ಪಿಯಾನೋ ನುಡಿಸಿ ತಾವೂ ಸಂತೋಷಪಟ್ಟಿದ್ಧಾರೆ. ಥೈಲ್ಯಾಂಡ್ನಲ್ಲಿ ಈ ದೃಶ್ಯವನ್ನು ಸೆರೆಹಿಡಿಯಲಾಗಿದೆ. ಅನೇಕರು ಈ ಅದ್ಭುತವಾದ ವಿಡಿಯೋ ನೋಡಿ ಅಚ್ಚರಿಗೊಳಗಾಗಿದ್ಧಾರೆ. ಆದರೆ ಯಾರೋ ಒಬ್ಬರು, ಇದು ಸಹಜವಾಗಿ ಚಿತ್ರೀಕರಿಸಿದ ವಿಡಿಯೋ ಅಲ್ಲ. ಇಲ್ಲಿ ಆನೆಗಳಿಗೆ ತೊಂದರೆ ಕೊಡಲಾಗಿದೆ ಎಂದು ದೂರಿದ್ಧಾರೆ.
ನೆಟ್ಟಿಗರು ಆಗಾಗ ಇಂಥ ವಿಡಿಯೋಗಳ ಬಗ್ಗೆ ಪರ ವಿರೋಧದ ಚರ್ಚೆ ನಡೆಸುತ್ತಲೇ ಇರುತ್ತಾರೆ. ಈ ವಿಡಿಯೋ ಅನ್ನು ಟ್ವೀಟ್ ಮಾಡಿದ್ದು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹೂ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 10:35 am, Mon, 21 November 22