AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ

ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

ಉಚಿತವಾಗಿ 22 ಸಾವಿರ ಊಟ ಹಂಚಿದ ತಾಯಿ-ಮಗನ ಹಿಂದಿದೆ ಕಷ್ಟದ ಕಥೆ
ಹೀನಾ - ಹರ್ಷ್ ಮಾಂಡವೀಯ
ಮದನ್​ ಕುಮಾರ್​
| Edited By: |

Updated on: May 08, 2021 | 4:13 PM

Share

ಕೊರೊನಾ ವೈರಸ್​ ಕಾರಣದಿಂದಾಗಿ ದೇಶಾದ್ಯಂತ ಜನರು ಕಷ್ಟದಲ್ಲಿದ್ದಾರೆ. ಉದ್ಯೋಗ ಇಲ್ಲದೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡುತ್ತಿರುವ ಜನರ ಸಂಖ್ಯೆ ದೊಡ್ಡದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಅನೇಕರು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದಾರೆ. ಕೊವಿಡ್​ 2ನೇ ಅಲೆ ಆರಂಭ ಆದಾಗಿನಿಂದ ಅಮ್ಮ-ಮಗ ಸೇರಿಕೊಂಡು ಮುಂಬೈನಲ್ಲಿ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಿದ್ದಾರೆ. ಅವರ ಈ ಕಾರ್ಯಕ್ಕೆ ಎಲ್ಲರಿಂದ ಶ್ಲಾಘನೆ ವ್ಯಕ್ತವಾಗುತ್ತಿದೆ.   

ಈ ರೀತಿ ಸಮಾಜಸೇವೆ ಮಾಡುತ್ತಿರುವುದು ಹರ್ಷ್ ಮಾಂಡವೀಯ ಮತ್ತು ಅವರು ತಾಯಿ ಹೀನಾ ಮಾಂಡವೀಯ. ಅವರಿಬ್ಬರು ಈಗ ಇಂಥ ಕಾರ್ಯದಲ್ಲಿ ತೊಡಗಿಕೊಂಡಿರುವುದಕ್ಕೆ ಅವರ ಜೀವನದಲ್ಲಿ ಈ ಹಿಂದೆ ನಡೆದ ಒಂದು ಘಟನೆಯೇ ಕಾರಣ. ಹರ್ಷ್​ ಚಿಕ್ಕ ವಯಸ್ಸಿನಲ್ಲಿ ಇರುವಾಗಲೇ ತಂದೆಯನ್ನು ಕಳೆದುಕೊಂಡರು. ಆಗ ಅವರನ್ನು ಸಾಕುವ ಜವಾಬ್ದಾರಿ ತಾಯಿ ಹೀನಾ ಮೇಲೆ ಬಿತ್ತು. ಆಗ ಚಿಕ್ಕದಾಗಿ ಅವರು ಅಡುಗೆ ಬ್ಯುಸಿನೆಸ್​ ಶುರುಮಾಡಿದರು.

‘ಆಂಟಿಯೊಬ್ಬರು ನಮ್ಮಿಂದ ಮೊದಲು ಊಟ ತೆಗೆದುಕೊಂಡರು. ಆಗ ಅವರು 35 ರೂ. ನೀಡಿದ್ದರು. ಅದು ನಮ್ಮ ಮೊದಲ ಆದಾಯ. ಬಾಯಿ ಮಾತಿನಿಂದಾಗಿ ನಮ್ಮ ಬಗ್ಗೆ ಎಲ್ಲರಿಗೂ ಗೊತ್ತಾಯಿತು. ಬ್ಯುಸಿನೆಸ್​ ಬೆಳೆಯುತ್ತ ಸಾಗಿತು. ಅಮ್ಮ ಅಡುಗೆ ಮಾಡುತ್ತಿದ್ದರು. ನಾನು ಮನೆಮನೆಗೆ ಹೋಗಿ ಕೊಟ್ಟುಬರುತ್ತಿದೆ. 2003ರಲ್ಲಿ ನಮ್ಮ ಬ್ಯುಸಿನೆಸ್​ ವಿಸ್ತರಿಸಲು ಒಬ್ಬರು ಸಹಾಯ ಮಾಡಿದರು. 70 ಸಾವಿರ ಮುಂಗಡ ಹಣ ಮತ್ತು ಬಾಡಿಗೆ ಜಾಗವನ್ನು ನೀಡಿದರು’ ಎನ್ನುತ್ತಾರೆ ಹರ್ಷ್​.

ಶಿಕ್ಷಣ ಮುಗಿಸಿದ ಬಳಿಕ ಹರ್ಷ್​ ಪೂರ್ಣ ಪ್ರಮಾಣದಲ್ಲಿ ಅಮ್ಮನ ಜೊತೆ ಸೇರಿಕೊಂಡು ಬ್ಯುಸಿನೆಸ್​ ಕಡೆಗೆ ಗಮನ ನೀಡಿದರು. ಆನ್​ಲೈನ್​ ಮೂಲಕ ವ್ಯಾಪಾರ ವೃದ್ಧಿಸಿದರು. ಅಂದು ತಮಗೆ ಸಹಾಯ ಮಾಡಿದವರಿಗೆ ಹಣ ಹಿಂದಿರುಗಿಸಲು ಹೋದಾಗ, ‘ನಮಗೆ ಹಣ ಬೇಡ. ನೀವೂ 10 ಜನಕ್ಕೆ ಸಹಾಯ ಮಾಡಿ’ ಎಂದು ಅವರು ಹೇಳಿದರಂತೆ. ಆ ಮಾತಿನ ಪ್ರಕಾರವಾಗಿ, 2020ರಲ್ಲಿ ಲಾಕ್​ಡೌನ್​ ಆದಾಗ ಉಚಿತವಾಗಿ ಊಟ ನೀಡುವ ಕಾಯಕವನ್ನು ಹರ್ಷ್​ ಮತ್ತು ಹೀನಾ ಆರಂಭಿಸಿದರು.

ಈ ಕೆಲಸದ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡ ಬಳಿಕ ಅವರಿಗೆ ಅನೇಕರು ಬೆಂಬಲ ನೀಡಲು ಪ್ರಾರಂಭಿಸಿದರು. ‘ಕೊವಿಡ್​ ಎರಡನೇ ಅಲೆ ಆರಂಭ ಆದಾಗ ನಮಗೆ 1.5 ಲಕ್ಷ ರೂ. ದೇಣಿಗೆ ಸಿಕ್ಕಿತು. ಅದರಿಂದ ಈವರೆಗೆ 22 ಸಾವಿರ ಊಟ, 55 ಸಾವಿರ ರೋಟಿ ಹಾಗೂ 6 ಸಾವಿರ ಸಿಹಿ ತಿಂಡಿ ಹಂಚಲು ಸಾಧ್ಯವಾಗಿದೆ’ ಎಂದಿದ್ದಾರೆ ಹರ್ಷ್​ ಮಾಂಡವೀಯ.

ಇದನ್ನೂ ಓದಿ:

Actor Arjun Gowda: ಜನರ ಕಷ್ಟ ನೋಡಲಾಗದೇ ಆ್ಯಂಬುಲೆನ್ಸ್​ ಚಾಲಕನಾದ ಕನ್ನಡ ಸಿನಿಮಾ ನಟ ಅರ್ಜುನ್​​ ಗೌಡ

ರಿಯಲ್​ ಹೀರೋ ಆದ ಜಗ್ಗೇಶ್​; 20 ದಿನಗಳಿಂದ ಕೊರೊನಾ ರೋಗಿಗಳ ಸೇವೆಯಲ್ಲಿ ನಟ

Follow Us
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ಜೈಲಿನಲ್ಲಿ ರಾಜಾರೋಷವಾಗಿ ಫೋನ್​​​​ನಲ್ಲಿ ಮಾತನಾಡಿರುವ ಪ್ರಜ್ವಲ್
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ರಾಜ್ಯಸಭೆ ಕಲಾಪದಲ್ಲಿ ಸಿಪಿಎಂ ಸಂಸದನಿಗೆ ಲುಂಗಿವಾಲಾ ಎಂದ ಬಿಜೆಪಿ ಸಂಸದೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
ಕೈ ಹೈಕಮಾಂಡ್ ಶಿಫಾರಸ್ಸಿನ ಪಟ್ಟಿಯಲ್ಲಿ ಮತ್ತೊಂದು ಬದಲಾವಣೆ
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
‘ರೈತರ ಪ್ರತಿಭಟನೆಗೆ ಬಾರದ ಸ್ಟಾರ್​ಗಳ ಸಿನಿಮಾ ನಿಷೇಧಿಸಿ’: ಸಾರಾ ಗೋವಿಂದು
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
'ಅಮಿತ್ ಶಾ ಭಾಷಣ ನಮಗೆ ಬೇಕಾಗಿಲ್ಲ'; ರಾಹುಲ್ ಗಾಂಧಿ ವ್ಯಂಗ್ಯ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಮುಖ್ಯ ಚುನಾವಣಾಧಿಕಾರಿ ಮಹತ್ವದ ಸುದ್ದಿಗೋಷ್ಠಿ
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ಕರ್ನಾಟಕ ಬಂದ್​​​​​​​​ಗೆ ಬೆಂಬಲವಿಲ್ಲ: ಪ್ರವೀಣ್ ಶೆಟ್ಟಿ, ಸಾರಾ ಗೋವಿಂದ್
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ನಿಶ್ಚಿತಾರ್ಥಕ್ಕೆ ಹತ್ತು ವರ್ಷ, ಅಪರೂಪದ ವಿಡಿಯೋ ಹಂಚಿಕೊಂಡ ರಾಧಿಕಾ ಪಂಡಿತ್
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ
ರಾಮಮಂದಿರ ದೇಣಿಗೆ ಕಳ್ಳತನ ಖಂಡಿಸಿ ವಿಪಕ್ಷಗಳ ಪ್ರತಿಭಟನೆ