Video: ಸತ್ತ ತನ್ನ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿರುವ ತಾಯಿ ಆನೆ; ಹೃದಯ ಮಿಡಿಯುವ ವಿಡಿಯೊವಿದು

ಹೃದಯ ಮಿಡಿಯುವ ವಿಡಿಯೊವೊಂದು ಇದೀಗ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ ನೋಡುವಂತೆ ತಾಯಿ ಆನೆಯೊಂದು ಸಾವಿಗೀಡಾದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿದೆ.

Video: ಸತ್ತ ತನ್ನ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿರುವ ತಾಯಿ ಆನೆ; ಹೃದಯ ಮಿಡಿಯುವ ವಿಡಿಯೊವಿದು
ಸತ್ತ ತನ್ನ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿರುವ ತಾಯಿ ಆನೆ
Edited By:

Updated on: Nov 19, 2021 | 12:01 PM

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಸಾಕಷ್ಟು ವಿಡಿಯೊಗಳು ತಮಾಷೆಯಾಗಿದ್ದರೂ ಇನ್ನು ಕೆಲವು ವಿಡಿಯೊಗಳನ್ನು ನೋಡಿದಾಕ್ಷಣ ಮನಕಲಕುವುದಂತೂ ಸತ್ಯ. ಹೃದಯ ಮಿಡಿಯುವ ವಿಡಿಯೊವೊಂದು ಇದೀಗ ವೈರಲ್ ಆಗಿದೆ. ವೈರಲ್ ಆಗುತ್ತಿರುವ ವಿಡಿಯೊದಲ್ಲಿ ನೋಡುವಂತೆ ತಾಯಿ ಆನೆಯೊಂದು ಸಾವಿಗೀಡಾದ ತನ್ನ ಮೂರು ವರ್ಷದ ಮರಿಯನ್ನು ಎದ್ದೇಳು ಎಂದು ಎಬ್ಬಿಸುತ್ತಿದೆ. ತನ್ನ ಕಾಲುಗಳಲ್ಲಿ ದೂಡುತ್ತಾ ತನ್ನ ಮರಿಯನ್ನು ಎಬ್ಬಿಸಲು ಪ್ರಯತ್ನಿಸುತ್ತಿದೆ. ಹೃದಯ ಮಿಡಿಯುವ ದೃಶ್ಯ ನೋಡಿದಾಕ್ಷಣ ಬೇಸರ ಆಗದೇ ಇರೋಕೆ ಸಾಧ್ಯಾನ?

ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ನಡೆದ ಘಟನೆಯಿದು. ಆನೆ ಮರಿಯೊಂದು ವಿದ್ಯುತ್ ಸ್ಪರ್ಶ ತಗುಲಿ ಸಾವಿಗೀಡಾಗಿದೆ. ಇದನ್ನು ನೋಡಿದ ತಾಯಿ ಆನೆಗೆ ದುಃಖ ತಡೆಯಲಾಗುತ್ತಿಲ್ಲ. ತನ್ನ ಮರಿಯ ಬಳಿ ಹೋಗಿ ಕಾಲುಗಳಲ್ಲಿ ದೂಡುತ್ತಾ ಎದ್ದೇಳು ಅನ್ನುತ್ತಿದೆ. ತನ್ನ ಸೊಂಡಿಲಿನಿಂದ ಮರಿಯ ದೇಹವನ್ನು ಮುಟ್ಟುತ್ತಿದೆ. ಈ ಮನ ಮಿಡಿಯುವ ದೃಶ್ಯದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮರಣೋತ್ತರ ಪರೀಕ್ಷೆಯ ಬಳಿಕ ಆನೆ ಮರಿಯ ಸಾವಿಗೆ ನಿಖರವಾದ ಮಾಹಿತಿ ತಿಳಿದಿದೆ. ಬೋರ್​ವೆಲ್​ ಸಂಪರ್ಕ ಹೊಂದಿರುವ ವಿದ್ಯುತ್ ತಂತಿಯನ್ನು ಮುಟ್ಟಿದ್ದರಿಂದ ಮರಿ ಆನೆ ಸಾವಿಗೀಡಾಗಿದೆ ಎಂದು ವಿಭಾಗೀಯ ಅರಣ್ಯಾಧಿಕಾರಿ ಕುರ್ರಾ ಶ್ರೀನಿವಾಸ್ ಹೇಳಿದ್ದಾರೆ. ಏತನ್ಮಧ್ಯೆ ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದ್ದು, ತಾಯಿ ಆನೆಯ ಸಂಕರ್ಷ ನೋಡಿ ನೆಟ್ಟಿಗರು ಮನನೊಂದಿದ್ದಾರೆ. ಇನ್ನು ಕೆಲವರು ವಿದ್ಯುತ್ ಸಂಪರ್ಕ ತಂತಿ ಅಳವಡಿಸಿದ್ದಕ್ಕಾಗಿ ಅಧಿಕಾರಿಗಳ ವಿರುದ್ಧ ಕೋಪಗೊಂಡಿದ್ದಾರೆ.

ಇದನ್ನೂ ಓದಿ:

Viral Video: ಉತ್ತರಾಖಂಡದಲ್ಲಿ ಪ್ರವಾಹದ ಮಧ್ಯೆ ಸಿಲುಕಿ ಪರದಾಡುತ್ತಿದ್ದ ಆನೆ; ರಕ್ಷಿಸಿದ ಅರಣ್ಯ ಅಧಿಕಾರಿಗಳು

Viral Video: ದೈತ್ಯ ಆನೆ ಕಬ್ಬಿಣದ ಬೇಲಿ ಏರುತ್ತಿರುವುದನ್ನು ನೀವು ಎಂದಾದರೂ ನೋಡಿದ್ದೀರಾ? ಈ ವಿಡಿಯೊ ನೋಡಿ

Published On - 11:59 am, Fri, 19 November 21