
ಪ್ರತಿಯೊಬ್ಬ ತಂದೆ ತಾಯಂದಿರು (parents) ಮಕ್ಕಳ ಭವಿಷ್ಯ ಚೆನ್ನಾಗಿರಬೇಕೆಂದು ಬಯಸುವುದು ಸಹಜ. ಹೀಗಾಗಿ ಓದಿಗಾಗಿ, ಉದ್ಯೋಗಕ್ಕಾಗಿ ದೂರದ ಊರುಗಳಿಗೆ ತಮ್ಮ ಮಕ್ಕಳನ್ನು ಕಳುಹಿಸಿಕೊಡುತ್ತಾರೆ. ಈ ವೇಳೆ ತಮ್ಮ ಮಕ್ಕಳು ಮನೆಗೆ ಬರುತ್ತಾರೆ ಎಂದರೆ ಹೆತ್ತವರಿಗೆ ಆಗುವ ಖುಷಿ ಅಷ್ಟಿಷ್ಟಲ್ಲ. ಈ ವಿಡಿಯೋ ಇದೀಗ ತಾಯಿಯ (mother) ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಓದಲು ದೂರದ ಊರಿಗೆ ಹೋದ ಮಗನು, ನಾಲ್ಕು ತಿಂಗಳ ಬಳಿಕ ಮನೆಗೆ ಮರಳುತ್ತಿದ್ದಂತೆ ತಾಯಿಯೂ ಅದ್ದೂರಿ ಸ್ವಾಗತ ಕೋರಿದ ಹೃದಯ ಸ್ಪರ್ಶಿ ವಿಡಿಯೋ ಸದ್ಯ ವೈರಲ್ ಆಗಿದೆ. ತಾಯಿ ಮಗನ ಬಾಂಧವ್ಯ ಸಾರುವ ಈ ದೃಶ್ಯವನ್ನು ನೆಟ್ಟಿಗರು ಕಣ್ತುಂಬಿಸಿಕೊಂಡಿದ್ದಾರೆ.
ಶ್ರೀ ಸಾಯಿ ಶ್ವೇತ ಚೆನ್ನುಪತಿ (swetharahul003) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ಈ ವಿಡಿಯೋದಲ್ಲಿ ತಾಯಿ- ಮಗನ ಭಾವನಾತ್ಮಕ ಪುನರ್ಮಿಲನದ ದೃಶ್ಯವನ್ನು ಕಾಣಬಹುದು. ಮಗನನ್ನು ಸ್ವಾಗತಿಸಲು ತಾಯಿಯೂ ಕಾತುರಳಾಗಿದ್ದಾಳೆ. ಮನೆಯನ್ನು ಸುಂದರವಾಗಿ ಅಲಂಕರಿಸಿದ್ದು, ಪ್ರವೇಶದ್ವಾರದ ಬಳಿ ಆರ್ಕಷಕ ರಂಗೋಲಿ ಬಿಡಿಸಿದ್ದಾಳೆ. ಅಷ್ಟೇ ಅಲ್ಲದೆ, ಮುಚ್ಚಿದ ಬಾಗಿಲಿನ ಹಿಂದೆ ಕೈಯಲ್ಲಿ ಕಾನ್ಫೆಟ್ಟಿ ಸ್ಟ್ರೀಮರ್‌ಗಳನ್ನು ಹಿಡಿದು ನಿಂತು ಕೊಂಡಿದ್ದಾಳೆ.
ಬಾಗಿಲು ತೆರೆಯುತ್ತಿದ್ದಂತೆ, ಮಗ ತನ್ನ ತಂದೆಯೊಂದಿಗೆ ಮನೆಯೊಳಗೆ ಪ್ರವೇಶಿಸಿದ್ದಾನೆ. ಮಗನ ಆಗಮನವನ್ನು ಸಂಭ್ರಮಿಸುತ್ತಾ ತಾಯಿಯು ತನ್ನ ಕೈಯಲ್ಲಿದ್ದ ಕಾನ್ಫೆಟ್ಟಿಯನ್ನು ಸಿಡಿಸಿ ಮಗುವಿನಂತೆ ಕುಣಿದಾಡಿದ್ದಾಳೆ. ತನ್ನ ತಾಯಿಯ ಅದ್ದೂರಿ ಸ್ವಾಗತಕ್ಕೆ ಕಂಡು ಮಗನಿಗೆ ಖೂಷಿಯಾಗಿದೆ. ಕೊನೆಗೆ, ಇಬ್ಬರೂ ಅಪ್ಪಿಕೊಂಡು ಆ ಕ್ಷಣವನ್ನು ಸಂಭ್ರಮಿಸಿದ್ದಾರೆ. ಅಲ್ಲೇ ಇದ್ದ ತಂದೆಯೂ, ತಾಯಿ ಹಾಗೂ ಮಗನ ಖುಷಿಯನ್ನು ಕಣ್ತುಂಬಿಸಿಕೊಳ್ಳುವುದನ್ನು ಕಾಣಬಹುದು.
ಇದನ್ನೂ ಓದಿ:ಹೆಣ್ಣು ಮಗು ಹುಟ್ಟಿತ್ತೆಂದು ಖುಷಿಯಿಂದ ಆಸ್ಪತ್ರೆಯಲ್ಲೇ ಕುಣಿದಾಡಿದ ತಂದೆ
ಈ ವಿಡಿಯೋ 2 ಮಿಲಿಯನ್ ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಈ ದೃಶ್ಯ ನೋಡಿ ಕಣ್ಣಲ್ಲಿ ನೀರು ಬಂತು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ತಾಯಿ ಮತ್ತೆ ಮಗುವಾದರು ಎಂದಿದ್ದಾರೆ. ಮತ್ತೊಬ್ಬರು, ನಿಮ್ಮ ತಂದೆ ತಾಯಿಯಿಂದ ಅದ್ದೂರಿ ಸ್ವಾಗತಕ್ಕೆ ಇದುವೇ ನಿಜವಾದ ಸಂತೋಷ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:48 am, Fri, 2 January 26