Viral Video: ಅನ್ನ ಪರಬ್ರಹ್ಮ ಸ್ವರೂಪ, ಊಟ ವೇಸ್ಟ್ ಮಾಡಿದ ಮಗಳಿಗೆ ಅಮ್ಮನ ಪಾಪ-ಪುಣ್ಯದ ಪಾಠ   

| Updated By: ಅಕ್ಷಯ್​ ಪಲ್ಲಮಜಲು​​

Updated on: Mar 05, 2024 | 5:35 PM

ಅನ್ನ ಪರಬ್ರಹ್ಮ ಸ್ವರೂಪ, ಅದನ್ನು ಬಿಸಾಡಬಾರದು. ನಮಗೆ ಎಷ್ಟು ಅಗತ್ಯವಿದೆಯೋ ಅಷ್ಟೇ ಊಟ ಮಾಡಬೇಕು ವಿನಃ ತಟ್ಟೆ ಪೂರ್ತಿ ಊಟ ಹಾಕಿಸಿಕೊಂಡು ಅದನ್ನು ಎಸೆಯುವುದಲ್ಲ ಎಂದು ಹಿರಿಯರು ಆಗಾಗ್ಗೆ ಬುದ್ಧಿ ಮಾತು ಹೇಳುತ್ತಿರುತ್ತಾರೆ. ಹೀಗೆ ಬುದ್ಧಿ ಮಾತು ಹೇಳಿದ್ರೂ ಕೂಡಾ ಮಕ್ಕಳು ಮಾತ್ರವಲ್ಲದೆ ಅದೆಷ್ಟೋ ದೊಡ್ಡವರು ಕೂಡಾ ಊಟವನ್ನು ವೇಸ್ಟ್ ಮಾಡುತ್ತಿದ್ದಾರೆ. ಇದೇ ರೀತಿ ಅನ್ನವನ್ನು ಚೆಲ್ಲಲು ಹೋದತಂಹ ಮಗಳಿಗೆ ಆಕೆಯ ತಾಯಿ, ಪರಬ್ರಹ್ಮಸ್ವರೂಪ  ಅನ್ನವನ್ನು ಬಿಸಾಡುವುದು ಮಹಾಪಾಪ ಎಂದು ಬುದ್ಧಿಮಾತು ಹೇಳಿದ್ದಾರೆ. ಈ ತಾಯಿಯ ನಡೆಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Viral Video: ಅನ್ನ ಪರಬ್ರಹ್ಮ ಸ್ವರೂಪ, ಊಟ ವೇಸ್ಟ್ ಮಾಡಿದ ಮಗಳಿಗೆ ಅಮ್ಮನ ಪಾಪ-ಪುಣ್ಯದ ಪಾಠ   
ವೈರಲ್​​ ವಿಡಿಯೋ
Follow us on

ಅನ್ನ ಪರಬ್ರಹ್ಮ ಸ್ವರೂಪ. ಇದೇ ಕಾರಣಕ್ಕೆ ಅನೇಕರು ಅನ್ನವನ್ನು ಕಣ್ಣಿಗೆ ಒತ್ತಿ ನಮಸ್ಕರಿಸುವ  ಮೂಲಕ ತಿನ್ನುತ್ತಾರೆ. ಇಂತಹ ಅನ್ನವನ್ನು  ಚೆಲ್ಲಬಾರರು, ತಟ್ಟೆಯಲ್ಲಿ ಒಂದು ಅಗಳು ಅನ್ನವನ್ನು ಕೂಡಾ ಬಿಡಬಾರದು ಎಂದು ಹಿರಿಯರು ಆಗಾಗ್ಗೆ ಬುದ್ಧಿಮಾತು ಹೇಳುತ್ತಿರುತ್ತಾರೆ. ಹೀಗಿದ್ದರೂ ಅನ್ನದ ಮಹತ್ವವನ್ನು ಅರಿಯದ ಅದೆಷ್ಟೋ ಜನರು ಅಯ್ಯೋ ನನ್ಗೆ ಹೊಟ್ಟೆ ತುಂಬಿತು, ಈ ತಟ್ಟೆಯಲ್ಲಿರುವ ಊಟವನ್ನು ಖಾಲಿ ಮಾಡಲು ನನ್ನ ಕೈಯಿಂದ ಸಾಧ್ಯವಿಲ್ಲ ಎಂದು ಅನ್ನವನ್ನು ಕಸದ ಬುಟ್ಟಿಗೆ ಎಸೆದು ಬಿಡುತ್ತಾರೆ.  ಆದರೆ ಅದೆಷ್ಟೋ ಜನರು ಇಂದಿಗೂ ಒಂದು ತುತ್ತು ಅನ್ನಕ್ಕಾಗಿ ಪರದಾಡುತ್ತಿದ್ದಾರೆ. ಇದನ್ನೆಲ್ಲಾ ತಿಳಿದಿದ್ದರೂ ಊಟವನ್ನು ವೇಸ್ಟ್ ಮಾಡುವವರಿದ್ದಾರೆ. ಇದೆ ರೀತಿ ಅನ್ನವನ್ನು ಚೆಲ್ಲಲು ಹೋದಂತಹ ಮಗಳಿಗೆ ತಾಯಿಯೊಬ್ಬರು ಬುದ್ಧಿಮಾತು ಹೇಳಿದ್ದು, ಇವರ ಈ ನಡೆಗೆ ನೆಟ್ಟಿಗರು ಭಾರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ತಟ್ಟೆಯಲ್ಲಿದ್ದ ಅನ್ನವನ್ನು ಚೆಲ್ಲಲು ಹೋದ ಹುಡುಗಿಗೆ ಆಕೆಯ ತಾಯಿ ಬುದ್ಧಿ ಮಾತು ಹೇಳಿ ಅನ್ನದ ಮಹತ್ವ ಏನೆಂಬುದನ್ನು ತಿಳಿಸಿಕೊಟ್ಟಿದ್ದಾರೆ. ಮಂಜುಳ ಮುರಳಿ ಮೋಹನ್ (@manjumm2716) ಎಂಬವರು ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು “ಮಕ್ಕಳಿಗೆ ಅವರ ತಪ್ಪಿನ ಬಗ್ಗೆ ಅರ್ಥ ಮಾಡಿಸುವುದು ಪಾಲಕರ ಕರ್ತವ್ಯ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ವೈರಲ್​​​ ವಿಡಿಯೋ ಇಲ್ಲಿದೆ ನೋಡಿ:

ವೈರಲ್ ವಿಡಿಯೋದಲ್ಲಿ ತಾಯಿಯೊಬ್ಬರು ತಟ್ಟೆಯಲ್ಲಿದ್ದ ಅನ್ನವನ್ನು ಚೆಲ್ಲಲು ಮುಂದಾದಂತಹ ಮಗಳಿಗೆ ತಿದ್ದಿ ಬುದ್ಧಿ ಹೇಳುವ ದೃಶ್ಯವನ್ನು ಕಾಣಬಹುದು. ಮಹಿಳೆಯೊಬ್ಬರು ಅಡುಗೆ ಮನೆಯಲ್ಲಿ ಅಡುಗೆ ಕೆಲಸವನ್ನು ಮಾಡುತ್ತಿರುತ್ತಾರೆ. ಆ ಸಂದರ್ಭದಲ್ಲಿ ತಟ್ಟೆಯಲ್ಲಿದ್ದ ಅನ್ನವನ್ನು ಎಸೆಯಲು ಬಂದಂತಹ ಮಗಳನ್ನು ಕಂಡ ಆ ಮಹಿಳೆ, ಏನಕ್ಕೆ ಇಷ್ಟೊಂದು ಅನ್ನ ಬಿಸಾಡುತ್ತಿದ್ದೀಯಾ ಎಷ್ಟು ಬೇಕು ಅಷ್ಟೇ ಅನ್ನ ತಟ್ಟೆಗೆ ಹಾಕ್ಬೇಕು ಅನ್ನೋದು ಗೊತ್ತಿಲ್ವಾ, ಅನ್ನದ ಬೆಲೆ ಗೊತ್ತಾ ನಿನ್ಗೆ ಮಗಳೇ. ಇದನ್ನು ದುಡಿಯೋಕೆ ಅಪ್ಪಾ ಎಷ್ಟು ಕಷ್ಟ ಪಡ್ತಾರೆ ಅನ್ನೋದು ನಿನ್ಗೆ ಗೊತ್ತಾ? ಎರಡು ದಿನ ಉಪವಾಸ ಬಿದ್ರೆ ನಿಮ್ಗೆ ಊಟದ ಬೆಲೆ ಗೊತ್ತಾಗುತ್ತೆ. ಒಂದು ಹೊತ್ತಿನ ಊಟಕ್ಕೂ ಅದೆಷ್ಟೋ ಜನರು ಕಷ್ಟ ಪಡ್ತಿದ್ದಾರೆ. ಆದರೆ ನಿಮಗೆ ಟೈಮ್ ಟೈಮ್ ಗೆ ಬಿಸಿ ಬಿಸಿ ಅನ್ನ ಸಿಗ್ತಾಯಿದೆ. ಇದನ್ನು ಬೆಳೆಯಲು ರೈತ ಎಷ್ಟು ಕಷ್ಟ ಪಡ್ತಾನೆ ಅನ್ನೋದಾದ್ರೂ ನಿನ್ಗೆ ಗೊತ್ತಾ. ತಟ್ಟೆ ಪೂರ್ತಿ ಅನ್ನ ಹಾಕಿ ಬಿಸಾಡಬಾರರು, ಎಷ್ಟು ಬೇಕೋ ಅಷ್ಟೇ ತಿನ್ನಬೇಕು. ಅನ್ನ ಪರಬ್ರಹ್ಮ ಸ್ವರೂಪ, ಅದನ್ನು ಕಣ್ಣಿಗೊತ್ತಿ ತಿನ್ನಬೇಕು. ಹೋಗು ತಟ್ಟೆಯಲ್ಲಿದ್ದ ಅನ್ನವನ್ನು ಪೂರ್ತಿಯಾಗಿ ತಿಂದು ಖಾಲಿ ಮಾಡು ಎಂದು ತನ್ನ ಮಗಳಿಗೆ ಬುದ್ಧಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಹೋಟೆಲ್ ಸಿಬ್ಬಂದಿ ಎಡವಟ್ಟು, ಮೌತ್ ಫ್ರೆಶ್ನರ್ ಬದಲಿಗೆ ಡ್ರೈ ಐಸ್ ಸೇವಿಸಿ ಅಸ್ವಸ್ಥರಾದ ಐವರು 

ಎರಡು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.8 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜ ಮೇಡಂ. ಮದುವೆ ಮನೆಯಲ್ಲಿ ಅದೆಷ್ಟೋ ಜನರು ಊಟ ಚೆಲ್ಲುತ್ತಾರೆ. ದಯವಿಟ್ಟು ಇನ್ನಾದರೂ ಇಂತಹ ಕೆಲಸ ಮಾಡಬೇಡಿʼ ಎಂದು ಹೇಳಿದ್ದಾರೆ.  ಮತ್ತೊಬ್ಬ ಬಳಕೆದಾರರು ʼನಾನು ಕೂಡಾ ಹೀಗೆ ಹೇಳ್ತೀನಿ ನನ್ ಮಕ್ಕಳಿಗೆʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಅನ್ನದ ಬೆಲೆ ಬಗ್ಗೆ ಚೆನ್ನಾಗಿ ತಿಳಿಸಿ ಕೊಟ್ರಿ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ