Viral: ಮೌಂಟೇನ್ ಡ್ಯೂ ಜಿಲೇಬಿ! ಇದು ಯಾವ ಊರಲ್ಲಿ ಸಿಗುತ್ತದೆ ಗೊತ್ತೇ?

Jalebi : ನಾನಿದನ್ನು ಪತಂಜಲಿ ಜಿಲೇಬಿ ಎಂದುಕೊಂಡೆ ಎಂದು ಒಬ್ಬರು. ಛೆ, ಇದು ಮಧುಮೇಹಿಗಳಿಗಾಗಿ ಮಾಡಿದ ಪಾಲಕ್ ಜಿಲೇಬಿ ಎಂದುಕೊಂಡೆ ಎಂದು ಮತ್ತೊಬ್ಬರು. ದಯವಿಟ್ಟು ಈ ಜಿಲೇಬಿ ಮಾಡುವ ವಿಧಾನ ಹಂಚಿಕೊಳ್ಳಿ ಎಂದು ಹಲವರು.

Viral: ಮೌಂಟೇನ್ ಡ್ಯೂ ಜಿಲೇಬಿ! ಇದು ಯಾವ ಊರಲ್ಲಿ ಸಿಗುತ್ತದೆ ಗೊತ್ತೇ?
ಅವರೆಬೇಳೆ ಜಿಲೇಬಿ

Updated on: Jul 13, 2023 | 6:00 PM

Indian Sweet : ಆ ಮೌಂಟೇನ್​ ಡ್ಯೂಗೂ (Mountain Due) ಈ ಜಿಲೇಬಿಗೂ ಎಲ್ಲಿಂದೆಲ್ಲಿಯ ಸಂಬಂಧ ಎಂದು ಯೋಚಿಸ್ತಿದೀರಾ? ನೀವು ಯೋಚಿಸಿದ್ದು ಸರಿಯಾಗಿಯೇ ಇದೆ. ಖಂಡಿತ ಅದಕ್ಕೂ ಇದಕ್ಕೂ ಸಂಬಂಧವೇ ಇಲ್ಲ. ಆದರೂ ಇದನ್ನು ಮೌಂಟೇನ್​ ಡ್ಯೂ ಎಂದು ಕರೆದಿದ್ದಾರೆ ಅಮರ್​ ಸಿರೋಹಿ ಎಂಬ ಫುಡ್​ ವ್ಲಾಗರ್​​. ನಮ್ಮ ಬೆಂಗಳೂರಿನ ಸಜ್ಜನ್​ರಾವ್​ ರಸ್ತೆಯಲ್ಲಿರುವ ಅವರೆಮೇಳದಲ್ಲಿ ಪ್ರದರ್ಶನಗೊಂಡ ಅವರೆಬೇಳೆ ಜಿಲೇಬಿ ಇದು. 2020ರ ಜೂ. 1 ರ ಈ ಪೋಸ್ಟ್​ ಇನ್​ಸ್ಟಾಗ್ರಾಂನಲ್ಲಿ ಮತ್ತೀಗ ವೈರಲ್ ಆಗುತ್ತಿದೆ. ನೆಟ್ಟಿಗರೆಲ್ಲ ಬಾಯಲ್ಲಿ ನೀರೂರಿಸಿಕೊಂಡು ಈ ಹಸಿರು ಜಿಲೇಬಿ ನಮಗೂ ಬೇಕು ಎನ್ನುತ್ತಿದ್ದಾರೆ.

ಈ ಜಿಲೇಬಿಗಳು ಇಬ್ಬನಿ ಅಥವಾ ತಿಳಿಹಸಿರು ಬಣ್ಣದಿಂದ ಕೂಡಿರುವುದರಿಂದ ಈ ವ್ಲಾಗರ್​ ಇದಕ್ಕೆ ಹಾಗೆ ಹೆಸರಿಟ್ಟಿದ್ದಾರೆ. ಈತನಕ ಈ ಪೋಸ್ಟ್​ ಅನ್ನು ಸುಮಾರು 25,000 ಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಅನೇಕರು ಆಹಾ ಇದು ನಮ್ಮ ಬೆಂಗಳೂರಿನಲ್ಲಿ ಮಾತ್ರ ತಯಾರಾಗುವ ಜಿಲೇಬಿ ಎಂದಿದ್ದಾರೆ. ಈತನಕ ಇಂಥ ಜಿಲೇಬಿಯನ್ನು ನಾನು ನೋಡಿಯೇ ಇರಲಿಲ್ಲ, ಬೆಂಗಳೂರಿಗೆ ಹೋದಾಗ ಖಂಡಿತ ತಿನ್ನುತ್ತೇನೆ ಎಂದು ಹೇಳಿದ್ದಾರೆ ಹಲವರು. ಇದು ಎಲ್ಲ ಬೇಕರಿ ಅಥವಾ ಸಿಹಿಅಂಗಡಿಗಳಲ್ಲಿ ಸಿಗದು. ಸಜ್ಜನ್​ರಾವ್ ಸರ್ಕಲ್​ನಲ್ಲಿ ಪ್ರತೀ ವರ್ಷ ಏರ್ಪಡಿಸುವ ಅವರೆಮೇಳಕ್ಕಾಗಿ ನೀವು ಕಾಯಬೇಕು ಎಂದು ಉತ್ತರಿಸಿದ್ದಾರೆ ಕೆಲವರು.

ಇದನ್ಜನೂ ಓದಿ : Viral Video: ಈ ವಿಡಿಯೋ ನೋಡಿದ ಮೇಲೆಯೂ ಈ ಬಟಾಣಿ ತಿನ್ನುವಿರೆ?

ಸದ್ಯ! ಜಿಲೇಬಿಗೂ ಬಣ್ಣ ಹಾಕಲು ಕಲಿತರಾ ಈ ಸಿಹಿಯಂಗಡಿಯವರು ಎಂದು ಕಂಗಾಲಾಗಿದ್ದೆ ಎಂದಿದ್ದಾರೆ ಒಬ್ಬರು. ಈ ಜಿಲೇಬಿಯನ್ನು ಮಾಡುವ ವಿಧಾನ ಹೇಗೆ? ಎಂಥ ಅವರೆಬೇಳೆಯನ್ನು ಬಳಸಬೇಕು ಎಂದು ಕೇಳಿದ್ದಾರೆ ಕೆಲವರು. ನಿಮಗೂ ಈಗ ಈ ಜಿಲೇಬಿ ತಿನ್ನಬೇಕು ಎಂಬ ಆಸೆ ಉಂಟಾಗುತ್ತಿದೆಯಾ?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 5:55 pm, Thu, 13 July 23