Viral News: ಮಸಾಲೆ ದೋಸೆಯೊಂದಿಗೆ ಸಾಂಬಾರ್ ನೀಡದಿದ್ದಕ್ಕೆ ರೆಸ್ಟೋರೆಂಟ್‌ಗೆ 3,500 ರೂ. ದಂಡ

ಬಿಹಾರದ ರೆಸ್ಟೊರೆಂಟ್‌ಗೆ ದೋಸೆಯೊಂದಿಗೆ ಸಾಂಬಾರ್ ನೀಡದಿದ್ದಕ್ಕೆ 3500 ರೂ ದಂಡ ವಿಧಿಸಲಾಗಿದೆ. ಈ ಒಂದು ವಿಶಿಷ್ಟ ಪ್ರಕರಣ ಎಲ್ಲೆಡೆ ವೈರಲ್​ ಆಗಿದೆ.

Viral News: ಮಸಾಲೆ ದೋಸೆಯೊಂದಿಗೆ ಸಾಂಬಾರ್ ನೀಡದಿದ್ದಕ್ಕೆ ರೆಸ್ಟೋರೆಂಟ್‌ಗೆ 3,500 ರೂ. ದಂಡ
ಸಾಂದರ್ಭಿಕ ಚಿತ್ರImage Credit source: Vismai Food
Follow us
ಅಕ್ಷತಾ ವರ್ಕಾಡಿ
|

Updated on: Jul 13, 2023 | 6:33 PM

ಬಿಹಾರದ ರೆಸ್ಟೊರೆಂಟ್‌ಗೆ ದೋಸೆಯೊಂದಿಗೆ ಸಾಂಬಾರ್ ನೀಡದಿದ್ದಕ್ಕೆ 3500 ರೂ ದಂಡ ವಿಧಿಸಲಾಗಿದೆ. ಈ ಒಂದು ವಿಶಿಷ್ಟ ಪ್ರಕರಣ ಎಲ್ಲೆಡೆ ವೈರಲ್​ ಆಗಿದೆ. ಗ್ರಾಹಕರೊಬ್ಬರು ರೆಸ್ಟೋರೆಂಟ್‌ ಒಂದರಿಂದ ರಾತ್ರಿ ಹೊತ್ತು ಮನೆಗೆ ಮಸಾಲ್​ ದೋಸೆ ಪಾರ್ಸೆಲ್​​ ತೆಗೆದುಕೊಂಡು ಹೋಗಿದ್ದಾರೆ. ಮನೆಗೆ ಹೋಗಿ ಪಾರ್ಸೆಲ್​​ ತೆರೆದ ಮೇಲೆ ದೋಸೆಯೊಂದಿಗೆ ಬರೀ ಚಟ್ನಿ ಮಾತ್ರ ಇರುವುದನ್ನು ಗಮನಿಸಿದ್ದು, ರೆಸ್ಟೋರೆಂಟ್‌ ಸಿಬ್ಬಂದಿಗಳ ಬೇಜಾವಬ್ದಾರಿ ವರ್ತನೆಗೆ 3,500 ರೂ. ದಂಡ ವಿಧಿಸುವ ಕುರಿತು ಕೋರ್ಟ್​ ಮೆಟ್ಟಿಲೇರಿದ್ದಾರೆ.

ಒಂದು ವರ್ಷದ ಹಿಂದಿನ ಘಟನೆ:

ಬಾಂಗ್ಲಾ ಘಾಟ್‌ನ ನಿವಾಸಿ ಮನೀಶ್ ಪಾಠಕ್ ಆಗಸ್ಟ್ 15, 2022 ರಂದು ಗೋಲಾ ಮಾರ್ಕೆಟ್‌ನಲ್ಲಿರುವ ರೆಸ್ಟೋರೆಂಟ್‌ಗೆ ಹೋಗಿ ಸ್ಪೆಷಲ್ ಮಸಾಲಾ ದೋಸೆಗೆ ಆರ್ಡರ್ ಮಾಡಿದ್ದರು. ಅವರ ಹುಟ್ಟು ಹಬ್ಬದ ಪ್ರಯುಕ್ತ ರಾತ್ರಿಯ ಊಟ ಹೊರಗಡೆಯಿಂದ ತರಲು ನಿರ್ಧರಿಸಿದ್ದರು. 140 ರೂಪಾಯಿ ಕೊಟ್ಟು ಮನೆಗೆ ವಾಪಸ್ ಪಾರ್ಸೆಲ್ ತೆಗೆದುಕೊಂಡು ಬಂದು, ಪಾರ್ಸೆಲ್ ತೆರೆದಾಗ ಸಾಂಬಾರ್ ಇರಲಿಲ್ಲ. ದೋಸೆ ಮತ್ತು ಚಟ್ನಿ ಮಾತ್ರ ಇತ್ತು. ದೋಸೆ ತಿನ್ನುವಾಗ ಸಾಂಬಾರ್ ಮುಖ್ಯ. ರಾತ್ರಿಯ ಸಮಯವಾದ್ದರಿಂದ ಮರುದಿನ ಬೆಳಗ್ಗೆ ರೆಸ್ಟೋರೆಂಟ್‌ಗೆ ಹೋಗಿ ಮಾಲೀಕರಿಗೆ ದೂರು ನೀಡಿದ್ದರು. ಆದರೆ ರೆಸ್ಟೋರೆಂಟ್‌ ಮಾಲೀಕರ ಸರಿಯಾದ ಪ್ರತಿಕ್ರಿಯೆ ನೀಡದೆ ಇರುವ ಕಾರಣದಿಂದಾಗಿ .ಇದು ಗ್ರಾಹಕರ ನಂಬಿಕೆಗೆ ವಂಚನೆ ಪ್ರಕರಣವಾಗಿರುವುದರಿಂದ ಗ್ರಾಹಕ ಆಯೋಗದಲ್ಲಿ ಪ್ರಕರಣ ದಾಖಲಿಸಲು ನಿರ್ಧರಿಸಿದೆ ಎಂದು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪ್ರವಾಹ ಪರಿಸ್ಥಿತಿಯನ್ನು ಪರಿಶೀಲಿಸಲು ಬಂದ ಶಾಸಕನಿಗೆ ಕಪಾಳಮೋಕ್ಷ ಮಾಡಿದ ಮಹಿಳೆ

ಇದೀಗಾ 11 ತಿಂಗಳ ವಿಚಾರಣೆಯ ನಂತರ ತೀರ್ಪು ಬಂದಿದ್ದು, ಅದರಂತೆ ಪ್ರಕರಣದ ವೇಳೆ ಮಾನಸಿಕ ಮತ್ತು ದೈಹಿಕ ಒತ್ತಡಕ್ಕೆ 2000 ರೂ., ನ್ಯಾಯಾಲಯದ ಖರ್ಚಿಗೆ 1500 ರೂ. ದಂಡ ಒಟ್ಟಾಗಿ 3500 ದಂಡವಿಧಿಸಲಾಗಿದ್ದು, ನ್ಯಾಯಾಲಯ ನನ್ನ ಪರವಾಗಿ ತೀರ್ಪು ನೀಡಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ ಗ್ರಾಹಕ ಮನೀಶ್ ಪಾಠಕ್. ದಂಡ ನಿಗದಿತ ಸಮಯದಲ್ಲಿ ಪಾವತಿಸದಿದ್ದರೆ, ಬಡ್ಡಿ ಸಮೇತವಾಗಿ ಹೆಚ್ಚಿನ ದರ ಪಾವತಿಸಬೇಕಾಗುತ್ತದೆ ಎಂದು ನ್ಯಾಯಲಯ ಎಚ್ಚರಿಸಿದೆ.

ಮತ್ತಷ್ಟು ವೈರಲ್​ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ
ಜರ್ಮನಿಯಲ್ಲಿ ನ್ಯೂಸ್​9 ಗ್ಲೋಬಲ್ ಶೃಂಗಸಭೆಗೆ ಚಾಲನೆ