Viral Video: ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಪ್ರಖ್ಯಾತ ಯೂಟ್ಯೂಬರ್‌; ಇಲ್ಲಿದೆ ನೋಡಿ ವಿಡಿಯೋ

| Updated By: ಅಕ್ಷತಾ ವರ್ಕಾಡಿ

Updated on: Jul 07, 2024 | 5:44 PM

ಪ್ರಖ್ಯಾತ ಯುಟ್ಯೂಬರ್‌ಗಳಲ್ಲಿ ಒಬ್ಬರಾದ ಜೀಮ್ಸ್‌ ಡೊನಾಲ್ಡ್‌ಸನ್‌ (MrBeast) ತಮ್ಮ ಸ್ವಂತ ಹಣದಿಂದ ನೂರು ಬಡ ಕುಟುಂಬಗಳಿಗೆ ಸುಂದರ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಈ ಕುರಿತ ವಿಡಿಯೋವನ್ನು ಅವರು ತಮ್ಮ ಯುಟ್ಯೂಬ್‌ ಚಾನೆಲ್‌ ಅಲ್ಲಿ ಹಂಚಿಕೊಂಡಿದ್ದು, ಇವರ ಈ ಪರೋಪಕಾರಿ ಕಾರ್ಯಕ್ಕೆ ಶ್ಲಾಘನೆಯ ಮಹಪೂರವೇ ಹರಿದು ಬರುತ್ತಿದೆ.

Viral Video: ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿಕೊಟ್ಟ ಪ್ರಖ್ಯಾತ ಯೂಟ್ಯೂಬರ್‌; ಇಲ್ಲಿದೆ ನೋಡಿ ವಿಡಿಯೋ
Follow us on

ಪರೋಪಕಾರ, ಲೋಕಪ್ರೀತಿ ಪ್ರತಿ ಮನುಷ್ಯನಲ್ಲೂ ಅಂತರ್ಗತವಾಗಿರುವ ಮಾನವೀಯ ಗುಣ. ಆದರೆ ಇಂದು ಮನುಷ್ಯನಲ್ಲಿ ಈ ಮಾನವೀಯ ಗುಣಗಳು ಕಾಣಸಿಗುವುದೇ ಅಪರೂಪವಾಗಿಬಿಟ್ಟಿದೆ. ಇತತರರಿಗೆ ಬಿಡಿ, ತಮ್ಮವರಿಗೂ ಸಹಾಯ ಮಾಡಲು ಹಿಂದೆ ಮುಂದೆ ನೋಡುವ ಅದೆಷ್ಟೋ ಜನರಿದ್ದಾರೆ. ಇಂತಹ ಜನಗಳ ಮಧ್ಯೆ ಇಂದಿಗೂ ಬೇರೊಬ್ಬರ ಕಷ್ಟಕ್ಕೆ ಸ್ಪಂದಿಸುವ ಜನರೂ ಇದ್ದಾರೆ. ಇವರು ಮಾಡುವ ಸಹಾಯ ಎಲ್ಲೆಡೆ ಅದರ ತೀವ್ರತೆಯಿಂದಲೇ ಸದ್ದು ಮಾಡುತ್ತಿರುತ್ತದೆ. ಅಂತಹ ಸಹಾಯ ಗುಣ ಹೊಂದಿರುವವರಲ್ಲಿ ಪ್ರಖ್ಯಾತ ಯುಟ್ಯೂಬರ್‌ ಜೇಮ್ಸ್‌ ಡೊನಾಲ್ಡ್‌ಸನ್‌ (MrBeats) ಕೂಡಾ ಒಬ್ಬರು. ಇವರು ತಮ್ಮ ಪರೋಪಕಾರಿ ಗುಣಗಳಿಂದಲೇ ಜನರಿಗೆ ಹತ್ತಿರವಾದವರು. ಇದೀಗ ಇವರು ನೂರು ಬಡ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ಕೊಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಅನೇಕರಿಗೆ ಮಿಸ್ಟರ್‌ ಬೀಸ್ಟ್‌ ಬಗ್ಗೆ ಗೊತ್ತು. ಯುಟ್ಯೂಬ್‌ ವಿಡಿಯೋಗಳಿಂದ ಕೋಟ್ಯಾಂತರ ರೂಪಾಯಿ ಗಳಿಸುವ ಮಿಸ್ಟರ್‌ ಬೀಸ್ಟ್‌ಗೆ ಭಾರತ ಸೇರಿದಂತೆ ವಿಶ್ವದ ಬಹುತೇಕ ದೇಶದಲ್ಲಿ ಅನೇಕ ಫಾಲೋವರ್ಸ್‌ಗಳಿದ್ದಾರೆ. ಯುಟ್ಯೂಬ್‌ನಿಂದ ಕೋಟಿಗಟ್ಟಲೆ ಗಳಿಸುವ ಇವರು ತಮ್ಮ ಪರೋಪಕಾರಿ ಗುಣಗಳಿಂದಲೇ ಜನರಿಗೆ ಹತ್ತಿರವಾದವರು. ಇದೀಗ ಈ ವ್ಯಕ್ತಿ 100 ಬಡ ಕುಟುಂಬಗಳಿಗೆ ಸುಸಜ್ಜಿತ ಮನೆ ನಿರ್ಮಾಣ ಮಾಡಿಕೊಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.

ಈ ಹಿಂದೆ 100 ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಹಣದ ಸಹಾಯ ಮಾಡುವ ಮೂಲಕ ಸುದ್ದಿಯಲ್ಲಿದ್ದ ಮಿಸ್ಟರ್‌ ಬೀಸ್ಟ್‌ ಇದೀಗ ದಕ್ಷಿಣ ಅಮೇರಿಕಾ, ಮೆಕ್ಸಿಕೊ, ಅರ್ಜೆಂಟೆನಾ, ಜಮೈಕಾ ಸೇರಿಂದಂತೆ ಕೆಲವು ದೇಶಗಳ 100 ಬಡ ಕುಟುಂಬಗಳಿಗೆ ಹಾಗೂ ಪ್ರಾಕೃತಿಕ ವಿಕೋಪಗಳಿಂದ ಮನೆಯನ್ನು ಕಳೆದುಕೊಂಡ ಕುಟುಂಬಗಳಿಗೆ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಕೊಟ್ಟಿದ್ದಾರೆ.

ಈ ಕುರಿತ ವಿಡಿಯೋವನ್ನು MrBeast ಹೆಸರಿನ ಯುಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಳ್ಳಲಾಗಿದೆ. ವೈರಲ್‌ ವಿಡಿಯೋದಲ್ಲಿ ಮಿಸ್ಟರ್‌ ಬೀಸ್ಟ್‌ ಸುಸಜ್ಜಿತವಾದ ಮನೆಗಳನ್ನು ನಿರ್ಮಿಸಿ ಅಗತ್ಯವಿರುವ ಜನರಿಗೆ ಅದನ್ನು ಹಸ್ತಾಂತರಿಸುವ ಸುಂದರ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ತನ್ನ ಮನೆಯ ಬಾಲ್ಕನಿಯನ್ನು ಬಾಡಿಗೆಗೆ ನೀಡಿದ ವ್ಯಕ್ತಿ, ಬಾಡಿಗೆ ಕೇಳಿದರೆ ಶಾಕ್​​ ಆಗುವುದಂತೂ ಖಂಡಿತಾ!

ಒಂದು ವಾರದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 76 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು “ಬಡ ಜನರಿಗೆ ಇಷ್ಟೆಲ್ಲಾ ಸಹಾಯ ಮಾಡುವ ಮಿಸ್ಟರ್‌ ಬೀಸ್ಟ್‌ ಅವರಿಗೆ ಖಂಡಿತವಾಗಿಯೂ ನೊಬೆಲ್‌ ಪ್ರಶಸ್ತಿ ನೀಡಲೇಬೇಕು” ಎಂಬ ಕಾಮೆಂಟ್ಸ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು “ನಿಮ್ಮಂತೆ ಈ ಪ್ರಪಂಚದ ಎಲ್ಲಾ ಕೋಟ್ಯಾಧಿಪತಿಗಳು ಬಡ ಜನರಿಗೆ ಸಹಾಯ ಮಾಡಿದರೆ ಈ ಪ್ರಪಂಚ ಎಷ್ಟು ಚೆನ್ನಾಗಿರುತ್ತಿತ್ತು ಅಲ್ವಾ” ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ