Viral: 119 ಕೋಟಿ ಖರ್ಚು ಮಾಡಿ ಹೊಸ ‘ನಗರ’ ನಿರ್ಮಿಸಿದ ಯೂಟ್ಯೂಬರ್

|

Updated on: Dec 13, 2024 | 6:13 PM

ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ಚಂದಾದಾರರನ್ನು ಹೊಂದಿರುವ ಮಿಸ್ಟರ್ ಬೀಸ್ಟ್ ತಮ್ಮ ಹೊಸ ರಿಯಾಲಿಟಿ ಶೋ "ಬೀಸ್ಟ್ ಗೇಮ್ಸ್" ಅನ್ನು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಈ ಶೋಗಾಗಿ ಸುಮಾರು 100 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಟೊರೊಂಟೊದಲ್ಲಿ ನಿರ್ಮಿಸಲಾದ ಭವ್ಯವಾದ ನಗರದಲ್ಲಿ 10 ಸಂಚಿಕೆಗಳನ್ನು ಚಿತ್ರೀಕರಿಸಲಾಗಿದೆ.

Viral: 119 ಕೋಟಿ ಖರ್ಚು ಮಾಡಿ ಹೊಸ ನಗರ ನಿರ್ಮಿಸಿದ ಯೂಟ್ಯೂಬರ್
MrBeast's New Reality Show
Image Credit source: Twitter
Follow us on

13ನೇ ವಯಸ್ಸಿನಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೊಗಳನ್ನು ಮಾಡಲು ಶುರುಮಾಡಿ ಈಗ ವಿಶ್ವದ ಅತಿದೊಡ್ಡ ಯೂಟ್ಯೂಬರ್ ಎಂದೆನಿಸಿಕೊಂಡಿರುವ ಮಿಸ್ಟರ್ ಬೀಸ್ಟ್ ಇತ್ತೀಚೆಗೆ ತಮ್ಮ ಹೊಸ ರಿಯಾಲಿಟಿ ಶೋ ‘ಬೀಸ್ಟ್ ಗೇಮ್ಸ್’ ಅನ್ನು ಘೋಷಿಸಿದ್ದಾರೆ. ಇದಕ್ಕಾಗಿ ಯೂಟ್ಯೂಬರ್ ಟೊರೊಂಟೊದಲ್ಲಿ ‘ಮಿನಿ ಸಿಟಿ’ಗಿಂತ ಕಡಿಮೆಯಿಲ್ಲದ ಗ್ರ್ಯಾಂಡ್ ಸೆಟ್ ಅನ್ನು ಸಿದ್ಧಪಡಿಸಿದ್ದಾರೆ. ಇದಕ್ಕಾಗಿ ಸುಮಾರು 4 ಮಿಲಿಯನ್ ಡಾಲರ್ ಅಂದರೆ ಸುಮಾರು 119 ಕೋಟಿ ರೂ. ಖರ್ಚು ಮಾಡಿದ್ದು, ಸದ್ಯ ಎಲ್ಲೆಡೆ ಭಾರೀ ವೈರಲ್​ ಆಗಿದೆ.

‘ಬೀಸ್ಟ್ ಗೇಮ್ಸ್’ ಕಾರ್ಯಕ್ರಮದ ಕುರಿತು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದು, ಕೇವಲ 25 ನಿಮಿಷಗಳ ವೀಡಿಯೊಗಾಗಿ ಹಣವನ್ನು ನೀರಿನಂತೆ ಖರ್ಚು ಮಾಡುವುದು ಸರಿಯಲ್ಲಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿದ ಮಿಸ್ಟರ್ ಬೀಸ್ಟ್, ಇದು ಕೇವಲ 25 ನಿಮಿಷಗಳ ವೀಡಿಯೋ ಅಲ್ಲ, 10 ಪೂರ್ಣ ಸಂಚಿಕೆಗಳ ಶೋ, ಡಿಸೆಂಬರ್ 19 ರಿಂದ ಅಮೆಜಾನ್ ಪ್ರೈಮ್‌ನಲ್ಲಿ ವೀಕ್ಷಿಸಲಿದ್ದೀರಿ ಎಂದು ಹೇಳಿದ್ದಾನೆ.

ಇದನ್ನೂ ಓದಿ: ವ್ಯಾಗನಾರ್ ಕಾರಿಗೆ ಟ್ರ್ಯಾಕ್ಟರ್ ಟ್ರಾಲಿ ಅಳವಡಿಸಿದ ವ್ಯಕ್ತಿ; ವಿಡಿಯೋ ವೈರಲ್​​

ಮಿಸ್ಟರ್ ಬೀಸ್ಟ್ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಈ ಪ್ರದರ್ಶನವನ್ನು ಮಾಡಲು ಒಟ್ಟು 100 ಮಿಲಿಯನ್ ಡಾಲರ್ (ಸುಮಾರು 850 ಕೋಟಿ ರೂ.) ಖರ್ಚು ಮಾಡಲಾಗಿದೆ ಎಂದು ಹೇಳಿದ್ದಾನೆ. ಮಿಸ್ಟರ್ ಬೀಸ್ಟ್ ಯೂಟ್ಯೂಬ್ ಚಾನೆಲ್‌ನಲ್ಲಿ ಇದುವರೆಗೆ 335 ಮಿಲಿಯನ್ ಚಂದಾದಾರರನ್ನು ಹೊಂದಿದ್ದು, ಈ ಮೂಲಕ ವಿಶ್ವದ ಅತಿ ದೊಡ್ಡ ಯೂಟ್ಯೂಬರ್ ಎಂದೆನಿಸಿಕೊಂಡಿದ್ದಾನೆ. ಮಿಸ್ಟರ್ ಬೀಸ್ಟ್ 2014 ರಲ್ಲಿ ಟ್ವಿಟರ್‌ಗೆ ಸೇರಿದ್ದು, ಇಲ್ಲಿ 31.3 ಮಿಲಿಯನ್ ಅನುಯಾಯಿಗಳನ್ನು ಹೊಂದಿದ್ದಾನೆ. ಅದೇ ಸಮಯದಲ್ಲಿ, ಇನ್ಸ್ಟಾಗ್ರಾಮ್​ನಲ್ಲಿ 63.1 ಮಿಲಿಯನ್ ಫಾಲೋವರ್ಸ್​ಗಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:13 pm, Fri, 13 December 24