Viral: ಕಂಠಪೂರ್ತಿ ಕುಡಿದು ಅಡ್ಡಾದಿಡ್ಡಿ ಕಾರು ಚಲಾಯಿಸಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದ ಚಾಲಕ; ವಿಡಿಯೋ ವೈರಲ್‌

ರಸ್ತೆ ಅಪಘಾತಗಳು ಹಾಗೂ ಅದರಿಂದ ಉಂಟಾಗುವ ಸಾವು ನೋವುಗಳನ್ನು ತಡೆಯಲು ಸರ್ಕಾರ ಮದ್ಯಪಾನ ಸೇವಿಸಿ ವಾಹನ ಚಲಾಯಿಸಬಾರದು ಎಂಬ ರೂಲ್ಸ್‌ ತಂದಿದೆ. ಆದ್ರೆ ಕೆಲವೊಂದಿಷ್ಟು ಜನ ಇದಕ್ಕೆಲ್ಲಾ ಕ್ಯಾರೇ ಅನ್ನದೇ ಇಂದಿಗೂ ಕುಡಿದು ವಾಹನ ಚಲಾಯಿಸುತ್ತಿದ್ದಾರೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಎಣ್ಣೆ ಏಟಲ್ಲಿ ರಸ್ತೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿ ಕೊನೆಗೆ ಹೋಗಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ಭಯಾನಕ ಆಕ್ಸಿಡೆಂಟ್‌ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Dec 13, 2024 | 4:49 PM

ರಸ್ತೆ ಅಪಘಾತಗಳು ಹಾಗೂ ರಸ್ತೆ ಅಪಘಾತಗಳಿಂದ ಉಂಟಾಗುವ ಸಾವು ನೋವುಗಳನ್ನು ತಡೆಯಲು ಕುಡಿದು ವಾಹನ ಚಲಾಯಿಸುವಂತಿಲ್ಲ, ವಾಹನ ಚಲಾಯಿಸುವಾಗ ಸೀಟ್‌ ಬೆಲ್ಟ್‌ ಹಾಕಬೇಕು, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಹಾಕಬೇಕು ಎಂಬೆಲ್ಲಾ ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿವೆ. ಹೀಗಿದ್ದರೂ ಈ ರೂಲ್ಸ್‌ಗಳನ್ನೆಲ್ಲಾ ಗಾಳಿಗೆ ತೂರಿ ಅಡ್ಡಾದಿಡ್ಡಿ ವಾಹನ ಚಲಾಯಿಸುವ ಅದೆಷ್ಟೋ ಜನರಿದ್ದಾರೆ. ಇದೇ ರೀತಿ ಇಲ್ಲೊಬ್ಬ ವ್ಯಕ್ತಿ ಕೂಡಾ ಕಂಠಪೂರ್ತಿ ಕುಡಿದು ರಸ್ತೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸಿ ಕೊನೆಗೆ ಹೋಗಿ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಈ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದ್ದು, ಪಾನಮತ್ತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸುತ್ತಾ ಹೋಗಿ ಬೈಕ್‌ ಸವಾರನಿಗೆ ಗುದ್ದಿದ್ದು ಮಾತ್ರವಲ್ಲದೆ, ಸೀದಾ ಹೋಗಿ ಕರೆಂಟ್‌ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದ್ದಾನೆ. ಕಾರು ಡಿಕ್ಕಿ ಹೊಡೆದ ಪರಿಣಾಮ ಕರೆಂಟ್‌ ಕಂಬ ನೆಲಕ್ಕುರುಳಿದೆ. gharkekalesh ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಎಣ್ಣೆ ಏಟಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಎರ್ರಾಬಿರ್ರಿ ಕಾರು ಚಲಾಯಿಸುತ್ತಾ ಹೋಗುತ್ತಿರುವ ಭಯಾನಕ ದೃಶ್ಯವನ್ನು ಕಾಣಬಹುದು. ಹೀಗೆ ಅಡ್ಡಾದಿಡ್ಡಿ ಕಾರ್‌ ಓಡಿಸಿ ಬೈಕ್‌ ಸವಾರನೊಬ್ಬನಿಗೆ ಗುದ್ದಿ ನಂತರ ಸೀದಾ ಹೋಗಿ ಆ ಕಾರ್‌ ಕರೆಂಟ್‌ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಇದನ್ನೂ ಓದಿ: ಗುಡ್ ಕಿಸ್ಸರ್… ಉಬರ್ ಡ್ರೈವರ್‌ಗೆ ವಿಚಿತ್ರ ಕಾಂಪ್ಲಿಮೆಂಟ್ ನೀಡಿದ ಪ್ಯಾಸೆಂಜರ್‌

ಇಂದು ಮುಂಜಾನೆ ಹಂಚಿಕೊಳ್ಳಲಾದ ಈ ವಿಡಿಯೋ 1.3 ಲಕ್ಷ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ಡ್ರೈವರ್‌ ತನ್ನ ಜೀವ ಮಾತ್ರವಲ್ಲದೆ ಇತರರ ಜೀವದ ಜೊತೆಗೂ ಆಟವಾಡುತ್ತಿದ್ದಾನೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಹೀಗೆ ಕುಡಿದು ವಾಹನ ಚಲಾಯಿಸಿ ಇನ್ನೊಬ್ಬರ ಜೀವಕ್ಕೆ ಅಪಾಯ ತಂದೊಡ್ಡುವವರ ಲೈಸನ್ಸ್‌ ರದ್ದು ಮಾಡಬೇಕುʼ ಎಂದು ಕಿಡಿಕಾರಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ವಿಷಯ ಪ್ರಸ್ತಾಪಿಸಿ ಸಮರ್ಥಿಸಿಕೊಳ್ಳಲು ಹೆಣಗುತ್ತಿರುವ ವಿಪಕ್ಷ ನಾಯಕ ಅಶೋಕ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಪವಿತ್ರಾ ಗೌಡಗೆ ಜಾಮೀನು; ಮೊದಲ ಬಾರಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ತಾಯಿ
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಮದವೇರಿದಾಗ ಸ್ಮಶಾನದಲ್ಲಿ ಸುತ್ತು ಹಾಕಬೇಕು: ಹೀಗೆಂದಿದ್ದೇಕೆ ಅಶೋಕ್?
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ಹಿಂದೆ ನೀವು ಸದನವನ್ನು ಹೀಗಾ ನಡೆಸಿದ್ದು ಅಂತ ಸಿಎಂರನ್ನು ಪ್ರಶ್ನಿಸಿದ ಅಶೋಕ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ತಮ್ಮದೇ ಪಕ್ಷದ ಮಂತ್ರಿಯನ್ನು ಮಾತಾಡಲುಮ ಬಿಡದ ನರೇಂದ್ರ ಸ್ವಾಮಿ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಅಲ್ಲು ಅರ್ಜುನ್ ಬಂಧಿಸಿ ಕರೆದೊಯ್ದ ಪೊಲೀಸರು: ವಿಡಿಯೋ ಇಲ್ಲಿದೆ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಉಡುಪಿ: ಮುಸ್ಲಿಂ ಧಾರ್ಮಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥನಿಂದ ಬಾಲಕನಿಗೆ ಥಳಿತ
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಒಂದು ದೇಶ ಒಂದು ಚುನಾವಣೆ ಬಗ್ಗೆ ಬಹಳಷ್ಟು ಚರ್ಚೆ ಆಗಬೇಕಿದೆ: ಪರಮೇಶ್ವರ್
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಮೀಸಲಾತಿ ವಿಷಯದಲ್ಲಿ ಯತ್ನಾಳ್ ತಮ್ಮ ಸರ್ಕಾರವನ್ನು ಸಮರ್ಥಿಸಿಕೊಳ್ಳುತ್ತಾರೆ
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್
ಕಾಂಗ್ರೆಸ್ ಒಂದು ದೇಶ ಒಂದು ಚುನಾವಣೆ ಮಸೂದೆ ವಿರೋಧಿಸುತ್ತದೆ: ಶಿವಕುಮಾರ್