Video Viral: ವ್ಯಾಗನಾರ್ ಕಾರಿಗೆ ಟ್ರ್ಯಾಕ್ಟರ್ ಟ್ರಾಲಿ ಅಳವಡಿಸಿದ ವ್ಯಕ್ತಿ; ವಿಡಿಯೋ ವೈರಲ್
ಮಾರುತಿ ಸುಜುಕಿ ವ್ಯಾಗನ್ ಆರ್ ಕಾರನ್ನು ಒಬ್ಬ ವ್ಯಕ್ತಿ ಟ್ರ್ಯಾಕ್ಟರ್ ಆಗಿ ಪರಿವರ್ತಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, 40 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದೆ. ವ್ಯಾಗನ್ ಆರ್‌ನ ಹಿಂದಿನ ಸೀಟು ತೆಗೆದು, ಟ್ರ್ಯಾಕ್ಟರ್ ಟ್ರಾಲಿ ಅಳವಡಿಸಲಾಗಿದೆ. ವ್ಯಕ್ತಿಯ ಕ್ರಿಯೇಟಿವ್ ಐಡಿಯಾಗೆ ನೆಟ್ಟಿಗರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ದೇಶದ ಅತಿ ಹೆಚ್ಚು ಮಾರಾಟವಾಗುವ ಕಾರುಗಳಲ್ಲಿ ಒಂದಾಗಿರುವ ಮಾರುತಿ ಸುಜುಕಿ ವ್ಯಾಗನ್‌ಆರ್‌ಗೆ ದೇಶದಲ್ಲಿ ಹೆಚ್ಚಿನ ಬೇಡಿಕೆಯಿದೆ. ಇದೀಗ ವ್ಯಕ್ತಿಯೊಬ್ಬ ವ್ಯಾಗನ್ಆರ್ ಕಾರನ್ನು ಟ್ರ್ಯಾಕ್ಟರ್ ಆಗಿ ಪರಿವರ್ತಿಸಿದ್ದಾನೆ. ಸದ್ಯ ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ.
ವ್ಯಾಗನ್ಆರ್ನ ಹಿಂದಿನ ಸೀಟಿನ ಭಾಗವನ್ನು ತೆಗೆದು ಅದಕ್ಕೆ ಟ್ರ್ಯಾಕ್ಟರ್ ಟ್ರಾಲಿಯನ್ನು ಅಳವಡಿಸಲಾಗಿದೆ. ಮುಂಭಾಗದಿಂದ ನೋಡಿದರೆ ಕಾರಿನಂತೆ ಕಾಣುವ ಈ ಟ್ರ್ಯಾಕ್ಟರ್ ಕಂಡು ನೆಟ್ಟಿಗರು ಶಾಕ್ ಆಗಿದ್ದಾರೆ. ವ್ಯಕ್ತಿಯ ಕ್ರಿಯೇಟಿವ್ ಐಡಿಯಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಅಕ್ಕ ಪಕ್ಕದ ಮನೆಯಿಂದ ಬ್ರಾಂಡೆಡ್ ಶೂ ಕದ್ದು ಮಾರುತ್ತಿದ್ದ ದಂಪತಿ, ಮುಂದೇನಾಯ್ತು ನೋಡಿ
@mrkasganjhacker895425 ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. 5 ದಿನಗಳ ಹಿಂದೆ ಹಂಚಿಕೊಂಡಿರುವ ವಿಡಿಯೋ ಇದೀಗಾಗಲೇ 40ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ ಸಾಕಷ್ಟು ನೆಟ್ಟಿಗರು ಬಗೆಬಗೆಯಾಗಿ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:31 pm, Fri, 13 December 24