Viral Video: ಅಕ್ಕ ಪಕ್ಕದ ಮನೆಯಿಂದ ಬ್ರಾಂಡೆಡ್ ಶೂ ಕದ್ದು ಮಾರುತ್ತಿದ್ದ ದಂಪತಿ, ಮುಂದೇನಾಯ್ತು ನೋಡಿ
ಜೋಡಿಯೊಂದು ಅಕ್ಕ ಪಕ್ಕದ ಮನೆಗಳಿಂದ ಕದ್ದ ಹತ್ತಾರು ಶೂಗಳನ್ನು ಚೀಲದಿಂದ ಓಪನ್ ಮಾಡುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ದಂಪತಿ ಕದ್ದ ಶೂಗಳನ್ನು ಸ್ಥಳೀಯ ಮಾರುಕಟ್ಟೆಗಳಲ್ಲಿ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿದೆ.
ಹೈದರಾಬಾದ್: ಅಕ್ಕ ಪಕ್ಕದ ಮನೆಗಳಿಂದ ಕದ್ದ ಹತ್ತಾರು ಶೂಗಳನ್ನು ಬಿಚ್ಚುತ್ತಿದ್ದಾಗ ಜೋಡಿಯೊಂದು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವ ಘಟನೆ ಹೈದರಾಬಾದ್ನಲ್ಲಿ ನಡೆದಿದೆ. ಈ ದಂಪತಿ ಸಮೀಪದ ಮನೆ ಹಾಗೂ ದೇವಾಲಯಗಳಿಂದ ಶೂ ಕದ್ದು ಸ್ಥಳೀಯ ಮಾರುಕಟ್ಟೆಗಳಲ್ಲಿ ಬೀದಿ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಮನೆಯಲ್ಲಿ ಶೂ ಕಳವಾಗುತ್ತಿದ್ದಂತೆ ಸ್ಥಳೀಯರು ಅನುಮಾನಗೊಂಡು ದಂಪತಿಯ ಮನೆಯಲ್ಲಿ ಶೋಧ ನಡೆಸಿದಾಗ ಅನೇಕ ಶೂಗಳು ಪತ್ತೆಯಾಗಿವೆ. ಕದ್ದ ಶೂಗಳನ್ನು ಸ್ಥಳೀಯ ಮಾರುಕಟ್ಟೆಗೆ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
In a bizarre incident, a couple caught stealing #footwears, scores of #StolenShoes were recovered from their house in #Uppal.
A man who allegedly stole branded shoes from residential colonies and then sold them in open weekly markets, was caught red-handed by the… pic.twitter.com/D0SzkNfeQC
— Surya Reddy (@jsuryareddy) December 12, 2024
ಇದನ್ನೂ ಓದಿ: ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ವ್ಯಕ್ತಿ; ವಿಡಿಯೋ ವೈರಲ್
ಘಟನೆಗೆ ಸಂಬಂಧಿಸಿದ ವಿಡಿಯೋವನ್ನು @jsuryareddy ಎಂಬ ಹೆಸರಿನ ಟ್ವಿಟರ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಡಿ. 13ರಂದು ಹಂಚಿಕೊಂಡಿರುವ ವಿಡಿಯೋ ಕೆಲವೇ ಗಂಟೆಗಳಲ್ಲಿ 10 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಸದ್ಯ ವಿಡಿಯೋ ಎಲ್ಲೆಡೆ ವ್ಯಾಪಾಕವಾಗಿ ಹರಿದಾಡುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ