Viral: ಹಾವಿಗೆ ಮುತ್ತಿಡಲು ಹೋಗಿ ತುಟಿಗೆ ಕಚ್ಚಿಸಿಕೊಂಡ ವ್ಯಕ್ತಿ; ವಿಡಿಯೋ ವೈರಲ್
ಕೆಲವು ಡೇಂಜರ್ ಅಂತ ಗೊತ್ತಿದ್ರೂ ಕೂಡಾ ವಿಷಕಾರಿ ಹಾವುಗಳ ಜೊತೆ ಸರಸವಾಡಲು ಹೋಗ್ತಾರೆ. ಅದೇ ರೀತಿ ಇಲ್ಲೊಬ್ಬ ಆಸಾಮಿ ಉರಗದ ಜೊತೆ ಸರಸವಾಡಲು ಹೋಗಿ ಪಜೀತಿಗೆ ಸಿಲುಕಿದ್ದಾನೆ. ಹೌದು ಆತ ಭಂಡ ಧೈರ್ಯದಿಂದ ಹಾವಿಗೆ ಮುತ್ತಿಡಲು ಹೋಗಿದ್ದು, ಆ ಸಂದರ್ಭದಲ್ಲಿ ಒಮ್ಮೆಲೆ ಎಗರಿದ ಹಾವು ಆತನ ತುಟಿಯನ್ನು ಕಚ್ಚಿ ಎಳೆದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಹುಚ್ಚಾಟ ಮೆರೆಯುವವರಿಗೆ ಇದೇ ರೀತಿ ಆಗ್ಬೇಕು ಎಂದು ನೆಟ್ಟಿಗರು ಕಾಮೆಂಟ್ಸ್ ಮಾಡಿದ್ದಾರೆ.
ಹಾವುಗಳನ್ನು ಕಂಡ್ರೆ ಯಾರಿಗೆ ಭಯವಿಲ್ಲ ಹೇಳಿ. ಬಹುತೇಕ ಹೆಚ್ಚಿನವರು ಹಾವು ಎಂಬ ಹೆಸರನ್ನು ಕೇಳಿಯೇ ಬೆಚ್ಚಿ ಬೀಳುತ್ತಾರೆ. ಹೀಗೆ ಸಣ್ಣ ಪುಟ್ಟ ಹಾವುಗಳಿಗೂ ಭಯ ಪಡುವವರ ಮಧ್ಯೆ ಕೆಲವು ಉರಗ ಪ್ರೇಮಿಗಳೂ ಇದ್ದಾರೆ. ಈ ಉರಗ ಪ್ರೇಮಿಗಳು ಬರಿಗೈಲಿ ಹಾವುಗಳನ್ನು ಹಿಡಿಯುವಂತಹ, ಹಾವುಗಳಿಗೆ ಮುತ್ತಿಡುವಂತಹ ಸಾಹಸಗಳನ್ನು ಮಾಡುವ ವಿಡಿಯೋ ದೃಶ್ಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ನೀವು ಕೂಡಾ ನೋಡಿರುತ್ತೀರಿ ಅಲ್ವಾ. ಇಲ್ಲೊಬ್ಬ ಆಸಾಮಿಯೂ ಇದೇ ರೀತಿ ಹಾವಿಗೆ ಮುತ್ತಿಡಲು ಹೋಗಿ ಕೊನೆಗೆ ಪಜೀತಿಗೆ ಸಿಲುಕಿದ್ದಾನೆ. ಹೌದು ಆತ ಜೀವಂತ ಹಾವಿಗೆ ಮುತ್ತಿಡುವಂತಹ ಸಾಹಸಕ್ಕೆ ಕೈ ಹಾಕಿದ್ದು, ಹೀಗೆ ಮುತ್ತಿಡಲು ಹೋದ ಸಂದರ್ಭದಲ್ಲಿ ಒಮ್ಮೆಲೆ ಎಗರಿದ ಹಾವು ಆತನ ಕೆಳ ತುಟಿಯನ್ನು ಕಚ್ಚಿ ಎಳೆದಿದೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.
NeverteIImeodd ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಭಂಡ ಧೈರ್ಯದ ವ್ಯಕ್ತಿಯೊಬ್ಬ ಬರಿಗೈಲಿ ಜೀವಂತ ಹಾವನ್ನು ಹಿಡಿದುಕೊಂಡು ಅದಕ್ಕೆ ಮುತ್ತಿಡಲು ಟ್ರೈ ಮಾಡುವಂತಹ ದೃಶ್ಯವನ್ನು ಕಾಣಬಹುದು. ಹೀಗೆ ಮುತ್ತಿಡಲು ಹೋದಾಗ ಒಮ್ಮೆಲೆ ಎಗರಿದ ಹಾವು ಆತನ ಕೆಳ ತುಟಿಯನ್ನು ಕಚ್ಚಿ ಎಳೆದಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ
— Second before disaster (@NeverteIImeodd) December 11, 2024
ಡಿಸೆಂಬರ್ 11 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.2 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇವನಿಗೆ ಇದೆಲ್ಲಾ ಬೇಕಿತ್ತಾʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಹೀಗೆಯೇ ಆಗ್ಬೇಕು ಈತನಿಗೆʼ ಎಂದು ಹೇಳಿದ್ದಾರೆ. ಇನ್ನೂ ಅನೇಕರು ಈತನ ಹುಚ್ಚಾಟವನ್ನು ಕಂಡು ನಸು ನಕ್ಕಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ