Video: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ

ಈಗಿನ ಕಾಲದ ಮಕ್ಕಳಿಗೆ ಕಷ್ಟ ಅಂದ್ರೆ ಏನು ಅಂತಾನೇ ಗೊತ್ತಿರಲ್ಲ. ಮಕ್ಕಳನ್ನು ಮುದ್ದು ಮಾಡಿ ಬೆಳೆಸುವವರೇ ಹೆಚ್ಚು. ಮಕ್ಕಳು ಕೇಳಿದ ಕೂಡಲೇ ಹೆತ್ತವರು ಎಲ್ಲವನ್ನು ತಂದು ಮುಂದೆ ಇಟ್ಟು ಬಿಡುತ್ತಾರೆ. ಹೀಗಾಗಿ ಹಣದ ಬೆಲೆ, ಕಷ್ಟ ಪಟ್ಟು ದುಡಿಯುವುದರ ಹಿಂದಿನ ಶ್ರಮ ಇದ್ಯಾವು ತಿಳಿದೇ ಇಲ್ಲ. ಆದರೆ ಕೊರಿಯನ್‌ ತಾಯಿಯೊಬ್ಬಳು ತನ್ನ ಮಕ್ಕಳನ್ನು ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿ ಅಲ್ಲಿ ಕಠಿಣ ಪರಿಶ್ರಮದ ಕೆಲಸ ಹೇಗಿರುತ್ತದೆ ಎಂದು ತಿಳಿಸಿದ್ದಾಳೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: ಧೋಬಿ ಘಾಟ್‌ಗೆ ತೆರಳಿ ತನ್ನ ಮಕ್ಕಳಿಗೆ ಜೀವನ ಪಾಠ ಹೇಳಿಕೊಟ್ಟ ತಾಯಿ
ವೈರಲ್‌ ವಿಡಿಯೋ
Image Credit source: Instagram

Updated on: Jan 25, 2026 | 4:13 PM

ಮುಂಬೈ, ಜನವರಿ : ಮನೆಯೇ ಮೊದಲ ಪಾಠ ಶಾಲೆ, ತಾಯಿ (mother) ತಾನೇ ಮೊದಲು ಗುರು ಎನ್ನುವ ಮಾತಿದೆ. ಹೀಗಾಗಿ ಏನೇ ಒಳ್ಳೆಯದನ್ನು ಹಾಗೂ ಕೆಟ್ಟದನ್ನು ಕಲಿತರೂ ಅದು ಮನೆಯಿಂದಲೇ. ಮಕ್ಕಳಿಗೆ ಜೀವನ ಪಾಠ ಕಲಿಸುವಲ್ಲಿ ತಾಯಿ ಪ್ರಮುಖ ಪಾತ್ರ ವಹಿಸುತ್ತಾಳೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಲು ಅವರನ್ನು ಮುಂಬೈನ (Mumbai) ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ.  ಕೊರಿಯನ್‌ ತಾಯಿ ಅಲ್ಲಿ ಕೆಲಸಗಾರರು ಪಡುವ ಕಷ್ಟವನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟಿದ್ದಾಳೆ. ಮಕ್ಕಳು ಕೆಲಸ ಮಾಡಿ ವಿಸೇಷ ಅನುಭವ ಪಡೆದುಕೊಂಡಿದ್ದಾರೆ. ಈ ವಿಡಿಯೋ ಸದ್ಯ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಮಕ್ಕಳಿಗೆ ಇಂತಹ ಪಾಠಗಳು ಅವಶ್ಯಕ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

@wonny_brothers ಹೆಸರಿನ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಬದುಕಿನ ಪಾಠಗಳನ್ನು ಕಲಿಸುವಂತಿದೆ. ಈ ವಿಡಿಯೋದ ಶೀರ್ಷಿಕೆಯಲ್ಲಿ ಕೊರಿಯನ್ ಮಕ್ಕಳು ಧೋಬಿ ಘಾಟ್‌ನಲ್ಲಿ ನಿಜವಾದ ಭಾರತೀಯ ಜೀವನವನ್ನು ಅನುಭವಿಸುತ್ತಿದ್ದಾರೆ. ನಿಜವಾದ ಕೆಲಸ, ನಿಜವಾದ ಗೌರವ ಎಂದು ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಕಳೆದ ಕೆಲವು ವರ್ಷಗಳಿಂದ ಈ ಕೊರಿಯನ್ ಕುಟುಂಬದ ಭಾರತದಲ್ಲಿ ನೆಲೆಸಿದೆ. ಈ ಮಹಿಳೆ ತನ್ನ ಮಕ್ಕಳಿಗೆ ಜೀವನ ಪಾಠ ಕಲಿಸಿ ಕೊಡಲು ಧೋಬಿ ಘಾಟ್‌ಗೆ ಕರೆದುಕೊಂಡು ಹೋಗಿದ್ದಾಳೆ. ಇಲ್ಲಿ ಕೆಲಸ ಮಾಡುವ ಕಾರ್ಮಿಕರು ಬಟ್ಟೆಗಳನ್ನು ಒಗೆಯುವುದು, ಹಿಂಡುವುದು ಹೇಗೆಂದು ಹತ್ತಿರದಲ್ಲೇ ಮಕ್ಕಳುಿ ಗಮನಿಸಿದ್ದಾರೆ. ಇಬ್ಬರೂ ಮಕ್ಕಳು ಬಟ್ಟೆ ಹಿಡಿದು ಒಗೆಯುತ್ತಿರುವುದನ್ನು ಕಾಣಬಹುದು. ಕಾರ್ಮಿಕರು ಬೆವರು ಸುರಿಸಿ ದುಡಿಯುವುದನ್ನು ತೋರಿಸುವ ಚಿತ್ರಣ ಇದಾಗಿದೆ.

ಇದನ್ನೂ ಓದಿ:ಶಾಲೆಗೆ ಹೋಗಲ್ಲ ಎಂದು ಹಠ ಹಿಡಿದ ಪುಟ್ಟ ಬಾಲಕನನ್ನು ಎತ್ಕೊಂಡು ಹೋದ ತಾಯಿ

ಈ ವಿಡಿಯೋ ಇದುವರೆಗೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ, ಬದುಕಿನ ನಿಜವಾದ ಪಾಠ ಇಲ್ಲೇ ಅಡಗಿರುವುದು ಎಂದಿದ್ದಾರೆ. ಮತ್ತೊಬ್ಬರು, ಇಂದಿನ ಮಕ್ಕಳಿಗೆ ಇಂತಹ ಪಾಠಗಳು ಅತ್ಯಗತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಪ್ರತಿಯೊಬ್ಬ ತಾಯಿಯೂ ಮಕ್ಕಳಿಗೆ ಜೀವನ ಮೌಲ್ಯಗಳನ್ನು ಕಲಿಸಿ ಕೊಡಬೇಕು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ