ಬೈಕ್​ನಲ್ಲಿ ಸ್ಟಂಟ್ ಮಾಡಿದ ಪ್ರೇಮಿಯಿಂದ ಮಹಿಳೆಯ ಗುಪ್ತಾಂಗಕ್ಕೆ ಗಾಯ!

ಮುಂಬೈನಲ್ಲಿ ಯುವಕನೊಬ್ಬ ತನ್ನ ಬೈಕ್​ನಲ್ಲಿ ಪ್ರೇಯಸಿಯನ್ನು ಕೂರಿಸಿಕೊಂಡು ವೀಲಿಂಗ್ ಮಾಡುತ್ತಿದ್ದ. ಈ ವೇಳೆ ಧೂಮ್ ಸ್ಟೈಲ್​ನಲ್ಲಿ ಆತ ಸ್ಟಂಟ್ ಮಾಡುವಾಗ ಹಿಂದೆ ಕುಳಿತಿದ್ದ ಪ್ರೇಯಸಿಯ ಖಾಸಗಿ ಭಾಗಕ್ಕೆ ಗಾಯವಾಗಿದೆ. ಬೈಕ್ ಸವಾರನ 'ಧೂಮ್-ಸ್ಟೈಲ್' ಸ್ಟಂಟ್​​ನಿಂದ ಆತನ ಗರ್ಲ್​ಫ್ರೆಂಡ್ ಸಂಕಷ್ಟಕ್ಕೆ ಸಿಲುಕಿದ್ದಾಳೆ. ಈ ಘಟನೆಯ ವಿಡಿಯೋ ವೈರಲ್ ಆಗಿದೆ.

ಬೈಕ್​ನಲ್ಲಿ ಸ್ಟಂಟ್ ಮಾಡಿದ ಪ್ರೇಮಿಯಿಂದ ಮಹಿಳೆಯ ಗುಪ್ತಾಂಗಕ್ಕೆ ಗಾಯ!
Bike Stunt In Mumbai
Image Credit source: x

Updated on: Feb 16, 2026 | 3:55 PM

ನವದೆಹಲಿ, ಫೆಬ್ರವರಿ 16: ಯುವಕ-ಯುವತಿಯರಿಬ್ಬರ ರಾತ್ರಿಯ ಔಟಿಂಗ್ ಸಂಕಷ್ಟ ತಂದೊಡ್ಡಿದೆ. ಬೈಕ್​ನಲ್ಲಿ ಬಾಯ್​​ಫ್ರೆಂಡ್ (Boyfriend) ಹಿಂದೆ ಕುಳಿತು ಹೋಗುವಾಗ ಸ್ವಲ್ಪ ಸಮಯದವರೆಗೆ ಇಬ್ಬರೂ ಎಂಜಾಯ್ ಮಾಡುತ್ತಿದ್ದರು. ಅಲ್ಲಿಯವರೆಗೂ ಎಲ್ಲವೂ ಸರಿಯಾಗೇ ಇತ್ತು. ಆಕೆ ಬಾಯ್​​ಫ್ರೆಂಡ್​​ನನ್ನು ಹಿಡಿದು ಕುಳಿತಿದ್ದಾಗ ಆತ ಆಕೆಗೆ ತನ್ನ ಸ್ಟಂಟ್ ತೋರಿಸಲು ಧೂಮ್ ಸಿನಿಮಾ ಸ್ಟೈಲ್​ನಲ್ಲಿ ವೀಲಿಂಗ್ ಮಾಡಿದ್ದಾನೆ. ಇದರ ಸುಳಿವಿಲ್ಲದ ಆಕೆ ಹಿಂದಿನ ಸೀಟಿನಿಂದ ಕೆಳಗೆ ಜಾರಿದಳು. ಆಗ ಹಿಂದಿನ ಚಕ್ರ ಮತ್ತು ಸೀಟಿನ ನಡುವಿನ ಜಾಗದಲ್ಲಿ ಆಕೆ ಸಿಲುಕಿಕೊಂಡಳು. ಇದರಿಂದ ಆಕೆಯ ಗುಪ್ತಾಂಗಕ್ಕೆ ಗಾಯವಾಗಿದೆ.

ಆ ಬೈಕ್ ಹಿಂದೆ ಹೋಗುತ್ತಿದ್ದ ಬೇರೆ ಸವಾರರು ಇವರ ಈ ಸಾಹಸವನ್ನು ಮೊಬೈಲ್​ನಲ್ಲಿ ರೆಕಾರ್ಡ್ ಮಾಡಿದ್ದಾರೆ. ದಿಢೀರನೆ ಆತ ವೀಲಿಂಗ್ ಮಾಡಿದ್ದರಿಂದ ಆಕೆ ಬ್ಯಾಲೆನ್ಸ್ ತಪ್ಪಿದಳು. ಆಕೆಯ ಕಾಲುಗಳು ಮತ್ತು ಆಕೆಯ ದೇಹದ ಅರ್ಧದಷ್ಟು ಭಾಗವು ಚಕ್ರದ ನಡವಿನ ಜಾಗದಲ್ಲಿ ಸಿಲುಕಿಕೊಂಡಿದ್ದರಿಂದ, ಆಕೆಯ ಖಾಸಗಿ ಜಾಗಕ್ಕೆ ಗಾಯಗಳಾಗಿವೆ ಎಂದು ವರದಿಯಾಗಿದೆ.


ಇದನ್ನೂ ಓದಿ: ಜೈಪುರ ವಿಮಾನ ನಿಲ್ದಾಣದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ನಾಯಿ ದಾಳಿ

ಇದಾದ ನಂತರ ಆ ಯುವಕನಿಗೆ ತಾನು ಮಾಡಿದ ತಪ್ಪಿನ ಅರಿವಾಯಿತು. ಆಕೆಯನ್ನು ಕಾಪಾಡಲು ಅವನು ತಕ್ಷಣ ತನ್ನ ಬೈಕನ್ನು ನಿಲ್ಲಿಸಿದನು. ಆ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಘಟನೆಯ ವೀಡಿಯೊವನ್ನು ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us