
ನವರಾತ್ರಿ (Navaratri) ಹಬ್ಬವೇನೋ ಮುಗಿದಿದೆ. ಆದರೆ ಈ ನವರಾತ್ರಿ ಹಬ್ಬಕ್ಕೆ ಉತ್ತರ ಭಾರತದ ಗಾರ್ಬಾ ಹಾಗೂ ದಾಂಡಿಯಾ ನೃತ್ಯಗಳೇ ಮತ್ತಷ್ಟು ರಂಗು ತರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ತರುಣ ತರುಣಿಯರು ಅತ್ಯದ್ಭುತವಾಗಿ ಗಾರ್ಬಾ ನೃತ್ಯ ಮಾಡುವ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಆದರೆ ಇದೀಗ ಮುಂಬೈ ಯುವಕರ ಗಾರ್ಬಾ ನೃತ್ಯದ ವಿಡಿಯೋ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, 2025 ರ ಏಷ್ಯಾಕಪ್ ಸಮಯದಲ್ಲಿ ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ಅನುಕರಿಸಿದ ನಡೆಯನ್ನು ಈ ಯುವಕರಿಬ್ಬರೂ ಮರುಸೃಷ್ಟಿಸಿದ್ದಾರೆ. ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿ ಇಂಟರ್ನೆಟ್‌ನಲ್ಲಿ ಅಲೆ ಸೃಷ್ಟಿಸಿದ್ದಾರೆ.
ಗಾರ್ಬಾ ನೃತ್ಯದ ವೇಳೆ ಯುವಕರಿಬ್ಬರೂ ಜೆಟ್ ಕ್ರ್ಯಾಶ್ ಸ್ಟೆಪ್ ಹಾಕಿರುವ ವಿಡಿಯೋವನ್ನು ಕ್ರಿಕೆಟಿಗ ರಾಜ್ ಗುಪ್ತಾ (raj-lifts09) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ಯುವಕರಿಬ್ಬರೂ ಎನರ್ಜಿಟಿಕ್ ಆಗಿ ಗಾರ್ಬಾ ನೃತ್ಯ ಪ್ರದರ್ಶಿಸುವುದನ್ನು ಕಾಣಬಹುದು. ಈ ವೇಳೆ ಏಷ್ಯಾಕಪ್ ಸಮಯದಲ್ಲಿ ಭಾರತೀಯ ವೇಗಿ ಅರ್ಶ್ದೀಪ್ ಸಿಂಗ್ ಅವರ ಜೆಟ್ ಕ್ರ್ಯಾಶ್ ಸ್ಟೆಪ್ ನ್ನು ಗಾರ್ಬಾನೃತ್ಯದ ನಡುವೆ ಮರುಸೃಷ್ಟಿಸಿ ಎಲ್ಲರ ಗಮನ ಸೆಳೆದಿರುವುದನ್ನು ಕಾಣಬಹುದು.
ಇದನ್ನೂ ಓದಿ:Video: ಬತ್ತದ ಜೀವನೋತ್ಸಾಹ; ಇಳಿ ವಯಸ್ಸಿನಲ್ಲೂ ದಾಂಡಿಯಾ ನೃತ್ಯ ಪ್ರದರ್ಶಿಸಿದ ವೃದ್ಧ ದಂಪತಿ
ಈ ವಿಡಿಯೋ ಮೂವತ್ತೈದು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಏಷ್ಯಾಕಪ್ 2025 ರ ಹೈ ಲೈಟ್ ವಿಚಾರವಿದು ಎಂದಿದ್ದಾರೆ. ಮತ್ತೊಬ್ಬರುಇದು ಕ್ರಿಕೆಟಿಗರು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂದು ಮತ್ತೊಬ್ಬರು ಹೇಳಿದ್ದಾರೆ. ಏಷ್ಯಾ ಕಪ್ ನೊಂದಿಗೆ ಗಾರ್ಬಾ ರಿಮಿಕ್ಸ್ ಎಂದು ಇನ್ನೊಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ