Challenge : ಅಯ್ಯೋ ಅದೊಂದು ದೊಡ್ಡ ಕಥೆ ಬಿಡು. ಅವನ ಕಥೆ ಕೇಳಿದರೆ ಅಷ್ಟೇ. ಅಂದಹಾಗೆ ಆ ಕಥೆ ಮುಂದೇನಾಯ್ತು? ಬರೆದರೆ ಅದೊಂದು ಕಥೆನೇ. ಆ ಕಥೆ ಓದಬೇಕು ಅಂದರೆ ಆಗ್ತಾನೇ ಇಲ್ಲ. ಬರೀಲೇಬೇಕಂತಿಲ್ಲ ಬರೆದ ಕಥೆಯನ್ನು ಓದಿದರೂ ಆಯ್ತು! ಹೌದಾ? ಹೌದು, ಇದೀಗ ಮೈಲ್ಯಾಂಗ್ (Mylang) ಕನ್ನಡದ ಹೊಸ ತಲೆಮಾರಿನ ಓದುಗರನ್ನು ಸೆಳೆಯುವುದಕ್ಕಾಗಿ ಮತ್ತು ಕಥಾಪ್ರಿಯರಿಗಾಗಿ ಆಡಿಯೋಸ್ಟೋರಿ ಚಾಲೇಂಜ್ ಏರ್ಪಡಿಸಿದೆ. ಕನ್ನಡದಲ್ಲಿ ನಡೆಯುತ್ತಿರುವ ಈ ಮೊದಲ ಪ್ರಯತ್ನದಲ್ಲಿ ನೀವೂ ಪಾಲ್ಗೊಳ್ಳಬಹುದು ಮತ್ತು ರೂ. 10,000 ಬಹುಮಾನವನ್ನೂ ಪಡೆಯಬಹುದು! ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.
ನೀವು ಕತೆ ಬರಿತೀರಾ? ಇಲ್ಲ ಕೇಳುವವರು ತಲೆದೂಗುವಂತೆ ಚೆನ್ನಾಗಿ ಕತೆಯನ್ನು ವಾಚಿಸಬಲ್ಲೀರಾ? ಹಾಗಿದ್ರೆ ನೀವು ಕನ್ನಡದ ಮೊದಲ ಆಡಿಯೋಸ್ಟೋರಿ ಚಾಲೆಂಜ್ ಅಲ್ಲಿ ಪಾಲ್ಗೊಳ್ಳಿ ಮತ್ತು 10,000 ರೂಪಾಯಿ ಬಹುಮಾನ ಗೆಲ್ಲುವ ಅವಕಾಶ ಪಡೆಯಿರಿ!
ಇದನ್ನೂ ಓದಿಕನ್ನಡ ಓದಿನತ್ತ ಹೊಸ ತಲೆಮಾರನ್ನು ಸೆಳೆಯುವ ಒಂದು ಹೊಸ ಪ್ರಯತ್ನ..ನಿಮ್ಮ ಬೆಂಬಲವಿರಲಿ.. @MyLangCreators pic.twitter.com/54gKo1DwIE
— ವಸಂತ | Vasant Shetty (@vasantshetty81) July 16, 2023
ಈ ಸ್ಪರ್ಧೆಯಲ್ಲಿ ಭಾಗವಹಿಸಲು ಇಚ್ಛಿಸುವವರು ಮೈಲ್ಯಾಂಗ್ ಆಡಿಯೋ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಬೇಕು. ಕಥೆ ಬರೆಯಲು ಆಸಕ್ತಿ ಇದ್ದವರು ಈ ಅಪ್ಲಿಕೇಷನ್ನಲ್ಲಿ ತಮ್ಮ ಕಥೆಗಳನ್ನು ಪ್ರಕಟಿಸಬಹುದು. ಇತರರ ಕಥೆಗಳಿಗೆ ಧ್ವನಿಯಾಗಲು ಇಚ್ಛಿಸುವವರು, ಅಂದರೆ ಕಥೆ ಓದಲು ಆಸಕ್ತಿ ಇರುವವರು ಈ ಅಪ್ಲೀಕೇಷನ್ನಲ್ಲಿರುವ ಕಥೆಗಳನ್ನು ಆಯ್ಕೆ ಮಾಡಿಕೊಂಡು ಓದಿ ಅಲ್ಲಿಯೇ ಆಡಿಯೋ ಅಪ್ಲೋಡ್ ಮಾಡಬೇಕು. ಆಯ್ದ ಕಥೆಗೆ ರೂ. 10,000 ನಗದು ಬಹುಮಾನ ನೀಡಲಾಗುತ್ತದೆ.
ಇದನ್ನೂ ಓದಿ : Viral Video: ದೂಧಸಾಗರ; ರೈಲ್ವೆ ಹಳಿ ದಾಟಿದ್ದಕ್ಕೆ ಚಾರಣಿಗರಿಂದ ಬಸ್ಕಿ ಹೊಡೆಸಿದ ಪೊಲೀಸರು
ಮೈಲ್ಯಾಂಗ್ನ ವಸಂತ ಶೆಟ್ಟಿ, ‘ಹೊಸ ತಲೆಮಾರಿನವರಿಗೆ ಕನ್ನಡದ ರುಚಿಯನ್ನು ಕಥೆಗಳ ಮೂಲಕ ಉಣಿಸಬೇಕು. ಈ ಮೂಲಕ ಕನ್ನಡ ಸಾಹಿತ್ಯದಲ್ಲಿ ಈ ಪೀಳಿಗೆಯವರಲ್ಲಿ ಆಸಕ್ತಿ ಮೂಡಿಸಬೇಕು ಎನ್ನುವುದು ನಮ್ಮ ಆಶಯ. ಈ ಸ್ಪರ್ಧೆಗೆ ವಯಸ್ಸಿನ ಮಿತಿ ಇಲ್ಲ. ಕನ್ನಡದಲ್ಲಿ ಕಥೆ ಬರೆಯಬಲ್ಲ ಮತ್ತು ಕಥೆಗಳನ್ನು ಓದಬಲ್ಲ ಯಾರೂ ಇದರಲ್ಲಿ ಭಾಗವಹಿಸಬಹುದು. ಈ ಕುರಿತು ವಿವರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದಿನವೇ 50 ಕಥೆಗಾರರು ತಮ್ಮ ಕಥೆಗಳನ್ನು ಮೈಲ್ಯಾಂಗ್ನಲ್ಲಿ ಪ್ರಕಟಿಸಿದ್ದರು ಮತ್ತು 50 ಜನರು ಇತರರ ಕಥೆಗಳನ್ನು ಓದಿದ್ದರು. ಕರ್ನಾಟಕ ಅಷ್ಟೇ ಅಲ್ಲ, ಹೊರನಾಡ/ದೇಶಗಳಲ್ಲಿರುವ ಕನ್ನಡಿಗರೂ ಈ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ’ ಎನ್ನುತ್ತಾರೆ.
ನೀವೂ ಭಾಗವಹಿಸಿ, ಆಸಕ್ತರಿಗೂ ತಿಳಿಸಿ. ಹೆಚ್ಚಿನ ವಿವರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 12:27 pm, Tue, 18 July 23