Viral Video: ಕೊನೆಗೂ ಮೌನ ಮುರಿದ ನತಾಶ; ವಿಚ್ಛೇದನ ವದಂತಿ ಬಗ್ಗೆ ಹಾರ್ದಿಕ್‌ ಪಾಂಡ್ಯ ಪತ್ನಿ ಏನಂದ್ರು ನೋಡಿ

ಹಾರ್ದಿಕ್‌ ಪಾಂಡ್ಯ ಜೊತೆಗಿನ ವಿಚ್ಛೇದನ ವದಂತಿ ಬೆನ್ನಲ್ಲೇ ನಟಿ ನತಾಶಾ ದಿಶಾ ಪಠಾಣಿ ಗೆಳೆಯ ಎನ್ನಲಾದ ವ್ಯಕ್ತಿ ಜೊತೆ ಕಾಣಿಸಿಕೊಂಡಿದ್ದು, ಡಿವೋರ್ಸ್‌ ಪಕ್ಕಾ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಇದೀಗ ರಿಪೋರ್ಟರ್‌ ಒಬ್ಬರು ವಿಚ್ಛೇದನ ವದಂತಿ ಬಗ್ಗೆ ನತಾಶ ಅವರ ಬಳಿ ಪ್ರಶ್ನೆಯನ್ನು ಕೇಳಿದ್ದು, ಈ ಬಗ್ಗೆ ನತಾಶ ಏನು ಹೇಳಿದ್ದಾರೆ ಎಂಬುದನ್ನು ನೋಡಿ...

Viral Video: ಕೊನೆಗೂ ಮೌನ ಮುರಿದ ನತಾಶ; ವಿಚ್ಛೇದನ ವದಂತಿ ಬಗ್ಗೆ ಹಾರ್ದಿಕ್‌ ಪಾಂಡ್ಯ ಪತ್ನಿ ಏನಂದ್ರು ನೋಡಿ
Edited By:

Updated on: May 26, 2024 | 5:01 PM

ಕ್ರಿಕೆಟಿಗ ಹಾರ್ದಿಕ್‌ ಪಾಂಡ್ಯ ದಾಂಪತ್ಯ ಜೀವನದಲ್ಲಿ ಬಿರುಗಾಳಿ ಎದ್ದಿದ್ದು, ಪತ್ನಿ ನತಾಶ ಸ್ಟಾನ್ಕೊವಿಕ್‌ ಹಾರ್ದಿಕ್‌ ಪಾಂಡ್ಯ ಅವರಿಗೆ ವಿಚ್ಛೇದನ ನೀಡಲಿದ್ದಾರೆ ಎಂಬ ವದಂತಿ ಜೋರಾಗಿ ಹರಿದಾಡುತ್ತಿದೆ. ಈ ಸುದ್ದಿಯನ್ನು ಪುಷ್ಠಿಕರಿಸುವಂತೆ ನತಾಶ ಅವರು ಶನಿವಾರ ಮುಂಬೈನ ಬಾಂದ್ರಾದ ಕೆಫೆ ಒಂದರಲ್ಲಿ ನಟಿ ದಿಶಾ ಪಠಾಣಿ ಗೆಳೆಯ ಎನ್ನಲಾದ ಅಲೆಕ್ಸ್‌ ಅಲೆಕ್ಸಾಂಡರ್‌ ಎಂಬವರ ಜೊತೆ ಕಾಣಿಸಿಕೊಂಡಿದ್ದು, ಡಿವೋರ್ಸ್‌ ಪಕ್ಕಾ ಎಂದು ನೆಟ್ಟಿಗರು ಮಾತನಾಡಿಕೊಳ್ಳುತ್ತಿದ್ದಾರೆ. ಕೆಫೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಡಿವೋರ್ಸ್‌ ವದಂತಿಯ ಬಗ್ಗೆ ನತಾಶ ಬಳಿ ರಿಪೋರ್ಟರ್‌ ಒಬ್ಬರು ಪ್ರಶ್ನೆಯನ್ನು ಕೇಳಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.

ಬಾಂದ್ರಾದ ಕೆಫೆಯೊಂದಕ್ಕೆ ದಿಶಾ ಪಠಾಣಿ ಬಾಯ್‌ಫ್ರೆಂಡ್‌ ಜೊತೆ ನತಾಶ ಭೇಟಿ ನೀಡಿದ ಸಂದರ್ಭದಲ್ಲಿ ರಿಪೋರ್ಟರ್‌ ಒಬ್ಬರು ನತಾಶ ಬಳಿ ಡಿವೋರ್ಸ್‌ ವದಂತಿಯ ಬಗ್ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಈ ಕುರಿತ ವಿಡಿಯೋವನ್ನು @instantbollywood ಎಂಬ ಇನ್‌ಸ್ಟಾಗ್ರಾಮ್‌ ಪೇಜ್‌ ಒಂದರಲ್ಲಿ ಹಂಚಿಕೊಳ್ಳಲಾಗಿದ್ದು, ಈ ವಿಡಿಯೋ ಇದೀಗ ಸಖತ್‌ ವೈರಲ್‌ ಆಗುತ್ತಿದೆ.

ಇದನ್ನೂ ಓದಿ: ಡಿವೋರ್ಸ್ ರೂಮರ್ಸ್ ಬೆನ್ನಲ್ಲೇ ಖ್ಯಾತ ನಟನ ಜೊತೆ ಹಾರ್ದಿಕ್ ಪಾಂಡ್ಯ ಪತ್ನಿ ಸುತ್ತಾಟ!

ವೈರಲ್‌ ವಿಡಿಯೋದಲ್ಲಿ ರಿಪೋರ್ಟರ್‌ ಒಬ್ಬರು “ನತಾಶ ಅವರೇ ಡಿವೋರ್ಸ್‌ ವದಂತಿಗಳ ಬಗ್ಗೆ ನೀವೇನಾದ್ರೂ ಹೇಳೋಕೆ ಇಷ್ಟಪಡ್ತಿರಾ” ಎಂಬ ಪ್ರಶ್ನೆಯನ್ನು ಕೇಳುತ್ತಾರೆ. ಆ ಸಂದರ್ಭದಲ್ಲಿ ಡಿವೋರ್ಸ್‌ ವದಂತಿಯ ಬಗ್ಗೆ ಏನನ್ನೂ ಹೇಳದೆ ಥ್ಯಾಂಕ್ಯೂ ಸೋ ಮಚ್ ಎಂದು ಹೇಳುತ್ತಾ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 40.7 ಮಿಲಿಯನ್‌ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಡಿವೋರ್ಸ್‌ ವದಂತಿಯ ಬಳಿಕ ನತಾಶರನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ‌

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us