Viral: ನಾನು ನಿನ್ನನ್ನು ಬಹಳ ಸಂತೋಷದಿಂದ ಕಿಡ್ನ್ಯಾಪ್‌ ಮಾಡಲು ಬಯಸುತ್ತೇನೆ; ಮಹಿಳೆಗೆ ಆತಂಕಕಾರಿ ಸಂದೇಶ ಕಳುಹಿಸಿದ ಉಬರ್‌ ಡ್ರೈವರ್‌

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 17, 2024 | 2:25 PM

ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾದ ರೆಡ್ಡಿಡ್‌ನಲ್ಲಿ ಬಳಕೆದಾರರು ತಮಗಾದ ಖುಷಿ, ಕಹಿ ಅನುಭವಗಳ ಕಥೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದೇ ರೀತಿ ಇಲ್ಲೊಬ್ರು ಮಹಿಳೆ ಉಬರ್‌ ಡ್ರೈವರ್‌ ಮಾಡಿದ ಒಂದು ಮೆಸೇಜ್‌ನಿಂದ ಭಯಪಟ್ಟ ಸಂಗತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಹೌದು ಉಬರ್‌ ಡ್ರೈವರ್‌ ಒಬ್ಬ ನಾನು ನಿಮ್ಮನ್ನು ಸಂತೋಷದಿಂದ ಅಪಹರಿಸುತ್ತೇನೆ ಎಂದು ಮೆಸೇಜ್‌ ಮಾಡಿದ್ದು, ಈ ಮೆಸೇಜ್‌ ನೋಡಿ ಆ ಮಹಿಳೆ ಬೆಚ್ಚಿಬಿದ್ದಿದ್ದಾರೆ. ತಮಗಾದ ಈ ಕಹಿ ಅನುಭವವನ್ನು ಅವರು ರೆಡ್ಡಿಡ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

Viral: ನಾನು ನಿನ್ನನ್ನು ಬಹಳ ಸಂತೋಷದಿಂದ ಕಿಡ್ನ್ಯಾಪ್‌ ಮಾಡಲು ಬಯಸುತ್ತೇನೆ; ಮಹಿಳೆಗೆ ಆತಂಕಕಾರಿ ಸಂದೇಶ ಕಳುಹಿಸಿದ ಉಬರ್‌ ಡ್ರೈವರ್‌
ವೈರಲ್​​ ಪೋಸ್ಟ್​
Follow us on

ಆರಾಮದಾಯಕ ಮತ್ತು ಸುರಕ್ಷಿತ ಪ್ರಯಾಣಕ್ಕಾಗಿ ನಗರ ಭಾಗಗಳಲ್ಲಿ ಹೆಚ್ಚಿನವರು ಓಲಾ, ಉಬರ್‌ ಇತ್ಯಾದಿ ಕ್ಯಾಬ್‌ಗಳನ್ನೇ ಅವಲಂಬಿಸಿರುತ್ತಾರೆ. ಪ್ರಯಾಣ ಸೇಫ್‌ ಆಗಿದ್ರೂ ಕೂಡಾ ಕೆಲವೊಂದು ಬಾರಿ ತಡವಾಗಿ ಕ್ಯಾಬ್‌ ಬರುವುದು, ರೈಡ್‌ ಕ್ಯಾನ್ಸಲ್‌ ಮಾಡುವುದು, ಕೊನೆಗೆ ಎಕ್ಸ್‌ಟ್ರಾ ಬಿಲ್‌ ಪಾವತಿ ಪಾವತಿ ಮಾಡಿಸುವಂತಹದ್ದು, ಹೀಗೆ ಬೇಜವಾಬ್ದಾರಿಯಿಂದ ವರ್ತಿಸುವ ಕೆಲ ಕ್ಯಾಬ್‌ ಚಾಲಕರಿಂದ ಪ್ರಯಾಣಿಕರು ಇಕ್ಕಟ್ಟಿಗೆ ಸಿಲುಕಿದ್ದುಂಟು. ಇದೀಗ ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಮಹಿಳೆಯೊಬ್ಬರಿಗೆ ಉಬರ್‌ ಡ್ರೈವರ್‌ ನಾನು ನಿಮ್ಮನ್ನು ಸಂತೋಷದಿಂದ ಅಪಹರಿಸುತ್ತೇನೆ ಎಂಬ ಸಂದೇಶ ಕಳುಹಿಸಿದ್ದಾನೆ. ಈ ಮೆಸೇಜ್‌ ನೋಡಿ ಆ ಮಹಿಳೆ ಬೆಚ್ಚಿಬಿದ್ದಿದ್ದು, ತಮಗಾದ ಈ ಕಹಿ ಅನುಭವವನ್ನು ಅವರು ರೆಡ್ಡಿಡ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

ದೆಹಲಿಯ ಗುರುಗ್ರಾಮದ ನಿವಾಸಿಯೊಬ್ಬರು ಉಬರ್‌ ಡ್ರೈವರ್‌ ಕಳುಹಿಸಿದ ಆತಂಕಕಾರಿ ಸಂದೇಶದಿಂದ ಬೆಚ್ಚಿ ಬಿದ್ದಿದ್ದು, ಈ ಕಹಿ ಅನುಭವದ ಕಥೆಯನ್ನು ಸ್ಕ್ರೀನ್‌ಶಾಟ್‌ ಸಮೇತ ಅವರು ರೆಡ್ಡಿಡ್‌ನಲ್ಲಿ ಹಂಚಿಕೊಂಡಿದ್ದಾರೆ.

Uber Driver Freighting Behaviour (14th December)
byu/kushpyro1 ingurgaon

ಈ ಘಟನೆ ಡಿಸೆಂಬರ್‌ 14 ರಂದು ನಡೆದಿದ್ದು, ಮಹಿಳೆಯೊಬ್ಬರು ಆನಂದ್‌ ವಿಹಾರ್‌ ಟರ್ಮಿನಲ್‌ ರೈಲು ನಿಲ್ದಾಣಕ್ಕೆ ಹೋಗಲು ಮುಂಜಾನೆ 4 ಗಂಟೆಯ ಸುಮಾರಿಗೆ ಉಬರ್‌ ಕ್ಯಾಬ್‌ ಬುಕ್‌ ಮಾಡ್ತಾರೆ. ನಂತರ ಮೊಬೈಲ್‌ ಅನ್ನು ಪ್ಯಾಂಟ್‌ ಜೇಬಲ್ಲಿ ಇರಿಸಿ ತಮ್ಮ ಲಗೇಜ್‌ ಅನ್ನು ತರಲು ಹೋಗ್ತಾರೆ. ಬಳಿಕ ಒಮ್ಮೆ ಒಟಿಪಿಯನ್ನು ಪರೀಕ್ಷಿಸೋಣ ಎಂದು ಉಬರ್‌ ಚಾಟ್‌ ಅನ್ನು ತೆರೆದಾಗ ಡ್ರೈವರ್‌ ಕಳುಸಿದ್ದ ಸಂದೇಶವನ್ನು ಕಂಡು ಅವರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: ಟ್ರೆಂಡ್‌ ಆಗ್ತಿದೆ ಪತ್ನಿಯ ಕಾಟದಿಂದ ಬೇಸತ್ತ ಪತಿಯ ಆತ್ಮಹತ್ಯೆ ಪ್ರಕರಣಗಳು, ಇದಕ್ಕೆ ಈ ಕಾರಣ ನೋಡಿ

ಈ ಮಹಿಳೆ ಉಬರ್‌ ಡ್ರೈವರ್‌ ಚಂದನ್‌ಗೆ ದಯವಿಟ್ಟು ನನ್ನನ್ನು ಆನಂದ್‌ ವಿಹಾರ್‌ ಟರ್ಮಿನಲ್‌ಗೆ ಡ್ರಾಪ್‌ ಮಾಡಿ ಎಂಬ ಸಂದೇಶವನ್ನು ಕಳುಹಿಸಿರುತ್ತಾರೆ. ಇದಾದ ಬಳಿಕ ಒಟಿಪಿಯನ್ನು ಪರೀಕ್ಷಿಸೋಣ ಎಂದು ಉಬರ್‌ ಚಾಟ್‌ ಅನ್ನು ತೆರೆದಾಗ ʼಆನಂದ್‌ ವಿಹಾರ್‌ಗಾ ಸರಿ, ನಾನು ನಿಮ್ಮನ್ನು ಬಹಳ ಸಂತೋಷದಿಂದ ಅಪಹರಿಸಿಕೊಂಡು ಹೋಗಬೇಕೆಂದಿದ್ದೇನೆʼ ಎಂದು ಡ್ರೈವರ್‌ ಕಳುಹಿಸಿದ್ದ ಸಂದೇಶವನ್ನು ನೋಡಿ ಆಕೆ ಗಾಬರಿಗೊಂಡಿದ್ದಾರೆ. ಇದೇ ಭಯದಲ್ಲಿ ಕೊನೆಯ ಕ್ಷಣದಲ್ಲಿ ನಾನು ಕ್ಯಾಬ್‌ ಅನ್ನು ಕ್ಯಾನ್ಸಲ್‌ ಮಾಡಿದೆ ಎಂದು ಆಕೆ ಹೇಳಿಕೊಂಡಿದ್ದಾರೆ. ಜೊತೆಗೆ ಉಬರ್‌ ಚಾಲಕನ ವಿವರಗಳ ಸಮೇತ ಈ ಬಗ್ಗೆ ಉಬರ್‌ ರೆಸ್ಪಾನ್ಸ್‌ ಟೀಮ್‌ಗೆ ದೂರನ್ನು ನೀಡಿದ್ದು, ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಉಬರ್‌ ಸಂಸ್ಥೆ ಭರವಸೆ ನೀಡಿದೆ ಎಂದು ಆಕೆ ಹೇಳಿಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ